Monday, August 25, 2025
Google search engine
HomeUncategorizedಮುಂದುವರಿದ ಸಮೃದ್ಧಿ ಮಂಜುನಾಥ್ ಮತ ಬೇಟೆ

ಮುಂದುವರಿದ ಸಮೃದ್ಧಿ ಮಂಜುನಾಥ್ ಮತ ಬೇಟೆ

ಬೆಂಗಳೂರು : ರಾಜ್ಯ ವಿಧಾನಸಭಾ ಚುನಾಚಣೆಗೆ ಕೇವಲ ಎಂಟು ದಿನಗಳಷ್ಟೇ ಬಾಕಿ ಉಳಿದಿವೆ. ಕೋಲಾರದ ಮುಳಬಾಗಿಲು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸಮೃದ್ಧಿ ಮಂಜುನಾಥ್ ಅವರು ಇಂದು ಅಬ್ಬರದ ಪ್ರಚಾರ ನಡೆಸಿದರು.

ಮುಳಬಾಗಿಲು ಗಡಿ ಭಾಗದ ಮುಷ್ಟೂರು ಸುತ್ತಮತ್ತಲಿನ ಪ್ರದೇಶದಲ್ಲಿ ಪ್ರಚಾರವನ್ನು ನಡೆಸಿದ ಸಮೃದ್ಧಿ ಮಂಜುನಾಥ್ ಅವರಿಗೆ ಹೋದ ಕಡೆಯಲ್ಲಿ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಜೆಡಿಎಸ್ ಕಾರ್ಯಕರ್ತರು ತಮ್ಮ ನೆಚ್ಚಿನ ನಾಯಕನಿಗೆ ಅದ್ಧೂರಿಯಾಗಿ ಸ್ವಾಗತ ಕೋರಿದ್ದಾರೆ.

ಸಮೃದ್ಧಿ ಮಂಜುನಾಥ್ ಅವರು ಇಂದು ತಮ್ಮ ಮತಕ್ಷೇತ್ರದ ಮುಷ್ಟೂರು ಪಂಚಾಯಿತಿ ವ್ಯಾಪ್ತಿಯ ನಗವಾರ ಹಾಗೂ ಮರವೇಮನೆ ಗ್ರಾಮಗಳಲ್ಲಿ ಮತಯಾಚನೆ ಮಾಡಿದರು. ತಮ್ಮೂರಿಗೆ ಬಂದ ದಳಪತಿಯನ್ನು ಗ್ರಾಮಸ್ಥರು ಗ್ರಾಮೀಣ ಸೊಗಡಿನ ಕೋಲಾಟದ ಮೂಲಕ ಸ್ವಾಗತಿಸಿದರು. ಸಮೃದ್ಧಿ ಮಂಜುನಾಥ ಅವರನ್ನು ಗೆಲ್ಲಿಸುವಂತೆ ಮುಖಂಡರಾದ ಆನಂದರೆಡ್ಡಿ ಮತ್ತು ಸತ್ಯಣ್ಣ ಮನವಿ ಮಾಡಿದರು.

ಇದನ್ನೂ ಓದಿ : ಸಾಲ ಮನ್ನಾ ಮಾಡಿದ್ದು ನಾನು, ‘ಸಿದ್ದು ಬ್ಯುಸಿ’ಯಲ್ಲಿ ಮರೆತಿದ್ದಾರೆ : ಕುಮಾರಸ್ವಾಮಿ

ನಿಮ್ಮ ಸೇವೆ ಮಾಡಲು ಆಶೀರ್ವದಿಸಿ

ಮುಳಬಾಗಿಲು ತಾಲ್ಲೂಕು, ಆಲಂಗೂರು ಪಂಚಾಯಿತಿ ಆಲಂಗೂರು ಗ್ರಾಮದಲ್ಲಿ ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಕಾಡೇನಹಳ್ಳಿ ನಾಗರಾಜಣ್ಣ ಅವರ ಅಧ್ಯಕ್ಷತೆಯಲ್ಲಿ ‘ನಮ್ಮ ನಡೆ ನಿಮ್ಮ ಮನೆಯ ಕಡೆ’ ಕಾರ್ಯಕ್ರಮದ ಮೂಲಕ ಮನೆ ಮನೆಗೆ ತೆರಳಿ ಪ್ರಚಾರ ಮಾಡಿದರು. ಜೆಡಿಎಸ್ ಪಕ್ಷದ ಪಂಚರತ್ನ ಯೋಜನೆಗಳನ್ನು ಜನರಿಗೆ ತಿಳಿಸುತ್ತಾ, ಈ ಬಾರಿ ತಮಗೆ ಆಶೀರ್ವದಿಸಿ, ನಿಮ್ಮ ಸೇವೆ ಮಾಡುವ ಅವಕಾಶ ಕಲ್ಪಿಸಿ ಎಂದು ಮನವಿ ಮಾಡಿದರು.

ಬಳಿಕ, ಮಚನಹಳ್ಳಿ ಗ್ರಾಮ, ಪಾಲೂರಹಳ್ಳಿ ಗ್ರಾಮ, ಚಲ್ಲಪಲ್ಲಿ, ಮಿಟ್ಟಹಳ್ಳಿ, ಪಿಚ್ಚಗುಂಟ್ಲಹಳ್ಳಿ ಪಂಚಾಯಿತಿಯ ದೊಡ್ಡತಮ್ಮನಹಳ್ಳಿ ಗ್ರಾಮ, ಚಾಪೂರಹಳ್ಳಿ, ದೊಡ್ಡಗುಟ್ಟಹಳ್ಳಿ, ಚಿಕ್ಕಗುಟ್ಟಹಳ್ಳಿ, ನಾಗಮಂಗಲ, ಚೊಕ್ಕದೊಡ್ಡಿಹಳ್ಳಿ, ಯರ್ರಜಿನ್ನೇನಹಳ್ಳಿ, ಲಕ್ಕಶೆಟ್ಟಿಹಳ್ಳಿ, ಆಲಂಗೂರು ಕ್ರಾಸ್, ವಿ.ಅಗ್ರಹಾರ ಸೇರಿದಂತೆ ಹಲವು ಗ್ರಾಮಗಳಲ್ಲಿ ಸಮೃದ್ಧಿ ಮಂಜುನಾಥ್ ಮತಯಾಚನೆ ಮಾಡಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments