Tuesday, August 26, 2025
Google search engine
HomeUncategorizedಗೋಡೌನ್ ಗೆ ಬೆಂಕಿ : ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದ ಬಿ.ಸಿ ಪಾಟೀಲ್

ಗೋಡೌನ್ ಗೆ ಬೆಂಕಿ : ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದ ಬಿ.ಸಿ ಪಾಟೀಲ್

ಬೆಂಗಳೂರು : ಕೃಷಿ ಸಚಿವ ಹಾಗೂ ಹಿರೇಕೆರೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಸಿ ಪಾಟೀಲ್ ಅವರು ಗೋಡೌನ್ ಗೆ ಬೆಂಕಿ ತಗುಲಿ ಲಕ್ಷಾಂತರ ರೂ. ಮೌಲ್ಯದ ಸಾಮಗ್ರಿಗಳು ಸುಟ್ಟು ಹೋಗಿರುವ ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದರು.

ಹಿರೇಕೆರೂರು ವಿಧಾನಸಭಾ ಕ್ಷೇತ್ರದ ರಟ್ಟೀಹಳ್ಳಿ ತಾಲೂಕಿನ ಕಣವಿಸಿದ್ದಗೇರಿ ಗ್ರಾಮದ ನಿವಾಸಿ ರಾಜು ಬಟ್ಟಲಕಟ್ಟಿ ಅವರಿಗೆ ಸೇರಿದ ಪಿ.ಆರ್ ಫ್ಯಾಬ್ರಿಕೆಟರ್ಸ್ ಕಂಪನಿ ಗೋಡೌನ್ ಬೆಂಕಿಗಾಹುತಿಯಾಗಿತ್ತು. ಘಟನೆಯಲ್ಲಿ ಲಕ್ಷಾಂತರ ಮೌಲ್ಯದ ಸಾಮಗ್ರಿಗಳು ಸುಟ್ಟು ಹೋಗಿದ್ದವು.

ಮಾಹಿತಿ ತಿಳಿದ ಕೂಡಲೇ ಪ್ರಚಾರ ಕಾರ್ಯ ಮೊಟಕುಗೊಳಿಸಿ ಸಚಿವ ಬಿ.ಸಿ ಪಾಟೀಲ್ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿದರು. ಗೋಡೌನ್ ಮಾಲೀಕರಾದ ರಾಜು ಬಟ್ಟಲಕಟ್ಟಿ ಅವರಿಗೆ ಸಾಂತ್ವನ ಹೇಳಿದರು. ಅಲ್ಲದೆ, ಘಟನೆ ಬಗ್ಗೆ ಮಾಹಿತಿ ಪಡೆದರು.

ಕ್ಷೇತ್ರಾದ್ಯಂದ ಅಬ್ಬರದ ಪ್ರಚಾರ

ಬಳಿಕ, ಹಿರೇಕೆರೂರು ಮತಕ್ಷೇತ್ರ ವ್ಯಾಪ್ತಿಯ ಯಲಿವಾಳ ಗ್ರಾಮದಲ್ಲಿ ಸಚಿವ ಬಿ.ಸಿ ಪಾಟೀಲ್ ಅವರು ಭೇಟಿ ನೀಡಿ ಪ್ರಚಾರ ನಡೆಸಿ, ಮತಯಾಚನೆ ಮಾಡಿದರು. ಈ ಸಂದರ್ಭದಲ್ಲಿ ಮಾಜಿ ಮುಖ್ಯ ಸಚೇತಕರಾದ ಡಿ.ಎಂ ಸಾಲಿ, ಈಟೇರವರು, ಪಾಲಾಕ್ಷ ಗೌಡ್ರು ದೊಡ್ಡ ಗೌಡ್ರು, ಬಿ.ಎನ್ ಬಣಕಾರ್, ಆರ್.ಎನ್ ಗಂಗೊಳ, ಲಿಂಗರಾಜ ಚಪ್ಪರದಳ್ಳಿ, ಗಂಗಾಧರ್, ಸೃಷ್ಟಿ ಪಾಟೀಲ, ಬಿಜೆಪಿ ಮುಖಂಡರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ಇದನ್ನೂ  ಓದಿ : ಕಾಂಗ್ರೆಸ್ ನ ‘ಗುಜರಿ ಇಂಜಿನ್’ನಿಂದ ಅಭಿವೃದ್ಧಿ ಅಸಾಧ್ಯ : ಪ್ರಧಾನಿ ಮೋದಿ

ಕೈ ಬಿಟ್ಟು ಕಮಲಹಿಡಿದ ಮುಖಂಡರು

ಹಿರೇಕೆರೂರಿನ ನೂಲಗೇರಿ ಗ್ರಾಮದ ವಿಶ್ವಕರ್ಮ ಸಮಾಜದ ಮುಖಂಡರು ಹಾಗೂ ಲಿಂಗದೇವರಕೊಪ್ಪ ಗ್ರಾಮಸ್ಥರಾದ ಮಲ್ಲನಗೌಡ ಹಿತ್ತಲಮನಿ, ರಮೇಶ್ ಸಿಡೇನೂರು ಕಾಂಗ್ರೆಸ್ ಪಕ್ಷ ತೊರೆದು ಹಿರೇಕೆರೂರು ಗೃಹ ಕಚೇರಿಯಲ್ಲಿ ಸಚಿವ ಬಿ.ಸಿ ಪಾಟೀಲ್ ಅವರ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾದರು.

ಈ ಸಂದರ್ಭದಲ್ಲಿ ಮುಖಂಡರಾದ ಮಲ್ಲೇಶಪ್ಪ ಕಮ್ಮಾರ, ನಿರಂಜನ, ಜಕಣಾಚಾರಿ, ಯೋಗೇಶ್, ಮಾಲತೇಶ, ವಿಜಯ್, ಇಂದ್ರಾಚಾರ್, ಮನೋಹರಾಚಾರ್, ಶ‌ಂಭುಲಿಂಗಾಚಾರ್, ಸುಭಾಸಾಚಾರ್, ನಿಂಗಾಚಾರ್, ದೇವಿಂದ್ರಾಚಾರ್ ಮತ್ತು ಸಮಾಜದ ಮಹಿಳೆಯರು ಭಾಗವಹಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments