Monday, August 25, 2025
Google search engine
HomeUncategorizedನಾವು ಶಾಲೆ-ಕಾಲೇಜ್ ಮಾಡದಿದ್ರೆ 'ಮೋದಿ, ಶಾ ಓದೋಕೆ' ಆಗುತ್ತಿರಲಿಲ್ಲ : ಮಲ್ಲಿಕಾರ್ಜುನ ಖರ್ಗೆ

ನಾವು ಶಾಲೆ-ಕಾಲೇಜ್ ಮಾಡದಿದ್ರೆ ‘ಮೋದಿ, ಶಾ ಓದೋಕೆ’ ಆಗುತ್ತಿರಲಿಲ್ಲ : ಮಲ್ಲಿಕಾರ್ಜುನ ಖರ್ಗೆ

ಬೆಂಗಳೂರು : ನಾವು ಶಾಲೆಕಾಲೇಜು ಮಾಡದೆ ಇದಿದ್ದರೆ ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಓದೋಕೆ ಆಗುತ್ತಿರಲಿಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.

ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಬಾಳ್ಳುಪೇಟೆಯಲ್ಲಿ ಮಾತನಾಡಿದ ಅವರು, ನಿಮ್ಮನ್ನು ಓದಿಸಿದವರನ್ನೇ ನೀವು ಏನು ಮಾಡಿದ್ದೀರಾ ಅಂತಾ ಕೇಳ್ತೀರಾ? ನಿಮ್ಮ ಕೊಡುಗೆ ಏನು? ಎಂದು ಬಿಜೆಪಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ದಲಿತರಿಗೆ ಸಹಾಯ ಮಾಡ್ತೀನಿ ಅಂತೀರಾ. ಆದರೆ, ದಲಿತ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನ ಯಾವುದೂ ಬಿಡುಗಡೆ ಆಗುತ್ತಿಲ್ಲ. ಯಾರಾದರೂ ತಪ್ಪು ಮಾಡಿದ್ದರೆ ಜೈಲಿಗೆ ಕಳಿಸಿ. ಆದರೆ, ತಪ್ಪು ಮಾಡೋರನ್ನು ಜೊತೆಯಲ್ಲೇ ಇಟ್ಟುಕೊಂಡು ನೀವು ಸರ್ಕಾರ ನಡೆಸುತ್ತಿದ್ದಿರಾ ಎಂದು ಮಲ್ಲಿಕಾರ್ಜುನ ಖರ್ಗೆ ಕಿಡಿಕಾರಿದ್ದಾರೆ.

ಫಸ್ಟ್ ಕ್ಯಾಬಿನೆಟ್ ನಲ್ಲೇ 5 ಗ್ಯಾರಂಟಿ ಜಾರಿ

ನೀವು ಶ್ರೀಮಂತರನ್ನು ಶ್ರೀಮಂತರನ್ನಾಗಿ ಮಾಡಿ ಬಡವರನ್ನು ಬಡವರಾಗಿ ಮಾಡ್ತಾ ಇದ್ದೀರಾ. ನಮಗೆ ಬೈಯ್ಯೋದು ಬಿಟ್ಟರೆ ಇವರಿಗೆ ಬೇರೆ ಕೆಲಸ ಇಲ್ಲ. ನಮ್ಮ ಮೊದಲ ಕ್ಯಾಬಿನೆಟ್ ನಲ್ಲಿ ನಮ್ಮ ಐದು ಗ್ಯಾರಂಟಿ ಯೋಜನೆ ಜಾರಿಯಾಗುತ್ತೆ. ಇದರಲ್ಲಿ ಮಾತಿಗೆ ತಪ್ಪಿದರೆ ನಾವು ಸಹಿಸೋದಿಲ್ಲ. ಇದನ್ನು ನಮ್ಮ ರಾಜ್ಯ ನಾಯಕರಿಗೆ ಹೇಳಿದ್ದೇವೆ ಎಂದು ಖರ್ಗೆ ಗುಡುಗಿದ್ದಾರೆ.

ಇದನ್ನೂ ಓದಿ : ಕಾಂಗ್ರೆಸ್ ಗೆ ‘ಬಸವಣ್ಣನವರ ಆದರ್ಶಗಳು’ ಅರ್ಥವಾಗಿಲ್ಲ : ಪ್ರಧಾನಿ ಮೋದಿ

ಸುಳ್ಳು ಹೇಳೋರು ದೇಶ ಆಳ್ತಿದ್ದಾರೆ

ಬಿಜೆಪಿಯವರು ಸುಳ್ಳಿನ ಸರದಾರರು, ರೈತರ ಆದಾಯ ಡಬಲ್ ಮಾಡ್ತಿವಿ ಎಂದರು. ನಾವು ದೇಶದ ಅಭಿವೃದ್ಧಿ ಮಾಡಿದ್ದೀವಿ. ಒಂದು ಸೂಜಿಯು ತಯಾರಾಗದ ದೇಶದಲ್ಲಿ ರಾಕೇಟ್ ಹಾರಿಸೊ ಮಟ್ಟದ ಅಭಿವೃದ್ಧಿ ಮಾಡಿದ್ದೇವೆ. ಆಕಾಶದಲ್ಲಿ ಹದ್ದು ಹಾರಾಡುತ್ತಿದ್ದರೆ ಕೊಣ ಹಾರುತ್ತಿದೆ ಅಂತಾರೆ. ಕೋಣ ಎಲ್ಲಿಯಾದ್ರೂ ಹಾರೋಕೆ ಆಗುತ್ತಾ. ಇಂತಹ ಸುಳ್ಳು ಹೇಳೋರು ದೇಶ ಆಳುತ್ತಿದ್ದಾರೆ ಎಂದು ಖರ್ಗೆ ವಾಗ್ದಾಳಿ ನಡೆಸಿದ್ದಾರೆ.

ಮೋದಿಯವರೇ ಈ ದೇಶದ ಸಂವಿಧಾನದ ಪ್ರಕಾರ ಯಾಕೆ ದೇಶ ನಡೆಸುತ್ತಾ ಇಲ್ಲಾ? ಉತ್ತರ ಕೊಡಿ. ಒಂದೇ ದಿನದಲ್ಲಿ ರಾಹುಲ್ ಗಾಂಧಿಯವರಿಗೆ ಶಿಕ್ಷೆ ಕೊಟ್ಟು, ಮನೆ ಖಾಲಿ ಮಾಡಿಸ್ತೀರಾ? ಎಂದು ಭಾಷಣದ ಉದ್ದಕ್ಕೂ ಬಿಜೆಪಿ ವಿರುದ್ಧ ಟೀಕೆ ಮಾಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments