Monday, August 25, 2025
Google search engine
HomeUncategorizedಇಳಕಲ್‌ ಸೀರೆಯಲ್ಲಿ ಈ ಸಲ ಕಪ್‌ ನಮ್ದೇ ; ಆರ್‌ಸಿಬಿ ಅಭಿಮಾನಿಯ ಸೀರೆಗೆ ಮಹಿಳೆಯರು ಫಿದಾ

ಇಳಕಲ್‌ ಸೀರೆಯಲ್ಲಿ ಈ ಸಲ ಕಪ್‌ ನಮ್ದೇ ; ಆರ್‌ಸಿಬಿ ಅಭಿಮಾನಿಯ ಸೀರೆಗೆ ಮಹಿಳೆಯರು ಫಿದಾ

ಬಾಗಲಕೋಟೆ : ಕರ್ನಾಟಕದ ಪ್ರಸಿದ್ಧ ಇಳಕಲ್‌ ಸೀರೆಯಲ್ಲಿ ಈ ಸಲ ಕಪ್‌ ನಮ್ದೇ ಎಂಬ ವಾಕ್ಯ ಮೂಡಿಬಂದಿದೆ. ಅಭಿಮಾನ ಅನ್ನೋದು ಅಭಿಮಾನಿಯ ಹುಚ್ಚು ಪ್ರೀತಿ ಅಂತಾ ಹೇಳಿದ್ರೇ ತಪ್ಪಾಗಲಿಕ್ಕಿಲ್ಲ. ತಮ್ಮ ನೆಚ್ಚಿನ ಚಿತ್ರ ನಟರ ಟ್ಯಾಟೂ ಹಾಕಿಸಿಕೊಳ್ಳುವವರನ್ನ ನೋಡಿದ್ದೇವೆ.ಯುವಕರು ತಮ್ಮ ಕೇಶದಲ್ಲಿ ನೆಚ್ಚಿನ ವ್ಯಕ್ತಿಗಳ ಚಿತ್ರ ಬಿಡಿಸಿಕೊಂಡಿದ್ದನ್ನೂ ನೋಡಿದ್ದೇವೆ.ಆದ್ರೆ ಇಲ್ಲೊಬ್ಬ ಕ್ರಿಕೆಟ್ ಅಭಿಮಾನಿ ಐಪಿಎಲ್ ನ ತನ್ನ ನೆಚ್ಚಿನ ತಂಡದ ಹೆಸರಲ್ಲಿ ಈ ಸಲ ಕಪ್ ನಮ್ದೆ ಎಂದು ನೂಲಿನ ಮೂಲಕ ಚಿತ್ರ ಬಿಡಿಸಿದ್ದಾನೆ.

ಹೌದು, ಐಪಿಎಲ್ ಕ್ರಿಕೆಟ್ ನಡಿಯುತ್ತಿದ್ದರೆ ಮತ್ತೊಂದೆಡೆ ತಮ್ಮ ನೆಚ್ಚಿನ ಐಪಿಎಲ್ ಕ್ರಿಕೆಟ್ ತಂಡದ ಅಭಿಮಾನಿಗಳ ಅಭಿಮಾನ.ಇನ್ನೊಂದೆಡೆ ನೆಚ್ಚಿನ ತಂಡ ಗೆಲುವು ಸಾಧಿಸುವಂತೆ ವಿನೂತನ ಶೈಲಿಯಲ್ಲಿ ಸೀರೆಯಲ್ಲಿ ಬಿಡಿಸಿದ ಶುಭ ಹಾರೈಕೆ ಚಿತ್ರ.ಇಂತಹ ಚಿತ್ರ ಪ್ರದರ್ಶನಕ್ಕೆ ಸಾಕ್ಷಿಯಾಗಿದ್ದು ಬಾಗಲಕೋಟೆ ಜಿಲ್ಲೆಯ ಇಲಕಲ್ ನಗರದ ನೇಕಾರ ನೆಯ್ದ ಸೀರೆ.

ಇದನ್ನೂ ಓದಿ : RCBಗೆ ಸೋಲು : ‘ಕನ್ನಡಿಗ ರಾಹುಲ್’ ಬಳಗಕ್ಕೆ ರೋಚಕ ಜಯ

ಈತ ಆರ್ ಸಿಬಿ ತಂಡದ ಅಭಿಮಾನಿ ನೇಕಾರ ಯುವಕ ಮೇಘರಾಜ್ ತನ್ನ ಮನೆಯಲ್ಲಿನ ನೆಯ್ಗೆಯ ಮೂಲಕ ಇಲಕಲ್ ಸೀರೆಯಲ್ಲಿ ಈ ಸಾರಿ ಕಪ್ ನಮ್ದೆ,ನಮ್ಮ ಬೆಂಗಳೂರು ಎಂದು ಬರೆದಿದ್ದು ಎಲ್ಲರ ಗಮನ ಸೆಳೆದಿದೆ…

ಇನ್ನೂ ಆರ್ ಸಿಬಿ ತಂಡದ ಅಪ್ಪಟ ಪ್ರೇಮಿಯಾದ ಇಲಕಲ್ ನಗರದ ನೇಕಾರ ಯುವಕ ಮೇಘರಾಜ್ ಅವರು ಇಲಕಲ್ ಸೀರೆ ನೇಯುವಾಗ ಸೀರೆಯಲ್ಲಿಯೇ ಐಪಿಎಲ್ 2023 ಆರ್ ಸಿಬಿ ಈ ಸಲ ಕಪ್ ನಮ್ದೆ ಎಂದು ಬರೆದಿದ್ದು ಎಲ್ಲರ ಆಕರ್ಷಣಿಯವಾಗಿದೆ.ನೇಕಾರ ಯುವಕನ ಕೈಯಲ್ಲಿ ಅರಳಿದ ವಿಶಿಷ್ಟ ಅಭಿಮಾನಕ್ಕೆ ಎಲ್ಲರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.ಆರ್ ಸಿ ಬಿ ಗೆ ಈ ಸಲ ಕಪ್ ನಮ್ದೆ ಎಂದು ಜಯಘೋಷ ಹಾಗೂ ಹುಭಹಾರೈಕೆಯ ಸುರಿಮಳೆ ಹೆಚ್ಚಿದೆ…

 ಇದನ್ನೂ ಓದಿ : RCB ಅಭಿಮಾನಿಗಳೇ ಎಚ್ಚರ : ನಿಮ್ಮ ಬಳಿ ಇರುವ ಟಿಕೆಟ್ ಅಸಲಿಯೋ? ನಕಲಿಯೋ? ಪರಿಶೀಲಿಸಿ

ಆರ್ ಸಿಬಿ ತಂಡದ ಮೇಲಿನ ಅಭಿಮಾನಿಯ ಅಭಿಮಾನ ಮೆಚ್ಚುವಂತದ್ದು.ಜಗತ್ ಪ್ರಸಿದ್ದ ಇಲಕಲ್ ಸೀರೆಯಲ್ಲಿ ಈ ಸಲ ಐಪಿಎಲ್ ಕಪ್ ನಮ್ದೆ ಆರ್ ಸಿಬಿ ತಂಡಕ್ಕೆ ಶುಭ ಹಾರೈಸಿದ ಯುವಕನ ಅಭಿಮಾನ ಎಲ್ಲರ ಗಮನ ಸಳೆದಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಈ ಬಾರಿ ಐಪಿಎಲ್ ಕಪ್ ಗೆಲ್ಲುತ್ತೆ, ಮುಂದಿನ ಬಾರಿ ಕಪ್ ಗೆಲ್ಲುತ್ತೆ ಅಂತ ಅಂದುಕೊಂಡಿದ್ದೇ ಬಂತು. ಆದರೆ 15 ಆವೃತ್ತಿಗಳು ಪೂರ್ಣಗೊಂಡರೂ ಆರ್‌ಸಿಬಿ ಪಾಲಿಗೆ ಕಪ್ ಒಲಿದಿಲ್ಲ. ಈಗ ಕರ್ನಾಟಕದ ಪ್ರಸಿದ್ಧ ಇಳಕಲ್‌ ಸೀರೆಯಲ್ಲಿ ಈ ಸಲ ಕಪ್‌ ನಮ್ದೇ ಎಂಬ ಘೋಷವಾಕ್ಯ ಮೂಡಿಬಂದಿದೆ. ಆರ್‌ಸಿಬಿ ಅಭಿಮಾನಿ ಮೇಘರಾಜ್‌ ನೇಯ್ಗೆ ಮಾಡಿದ ಸೀರೆಗೆ ಭಾರಿ ಬೇಡಿಕೆ ಬಂದಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments