Sunday, August 24, 2025
Google search engine
HomeUncategorizedಪವರ್ ಟಿವಿ IMPACT : 'ಭ್ರಷ್ಟ ಶಾಸಕ'ರ ವಿರುದ್ಧ ಲೋಕಾಯುಕ್ತಕ್ಕೆ ದೂರು

ಪವರ್ ಟಿವಿ IMPACT : ‘ಭ್ರಷ್ಟ ಶಾಸಕ’ರ ವಿರುದ್ಧ ಲೋಕಾಯುಕ್ತಕ್ಕೆ ದೂರು

ಬೆಂಗಳೂರು : ಓಎಫ್​ಸಿ ಕೇಬಲ್ ಅಳವಡಿಕೆ ಸಂಬಂಧ ರಾಜ್ಯದ 29 ಭ್ರಷ್ಟ ಶಾಸಕರ ಲಂಚ ಪುರಾಣದ ಮುಖವಾಡವನ್ನು ‘ಪವರ್​ ಟಿವಿ’ ರಾಜ್ಯದ ಜನತೆಯ ಮುಂದೆ ಕಳಚಿತ್ತು. ಪವರ್ ಬೇಟೆಯಿಂದ ಬಣ್ಣ ಕಳಚಿಕೊಂಡಿರುವ ಶಾಸಕರಿಗೆ ಲಂಚ ಪ್ರಕರಣದಲ್ಲಿ ತನಿಖೆ ಎದುರಿಸುವ ಭೀತಿ ಉಂಟಾಗಿದೆ.

ಹೌದು, ಪವರ್ ಟಿವಿ ‘ಟರ್ನಿಂಗ್ ಪಾಂಯಿಂಟ್’​ ಸ್ಟಿಂಗ್​ ಆಪರೇಷನ್​ ಮೂಲಕ ಭ್ರಷ್ಟ ಶಾಸಕರ ಮುಖವಾಡ ಬಯಲಿಗೆಳೆದಿತ್ತು. ಓಎಫ್​ಸಿ ಕೇಬಲ್ ಅಳವಡಿಕೆ ಸಂಬಂಧ ಶಾಸಕರು ಲಂಚ ಪಡೆದಿದ್ದರು. ಇದೀಗ ಶಾಸಕರ ಲಂಚೋತ್ಸವ ಕುರಿತು ತನಿಖೆ ನಡೆಸುವಂತೆ ಲೋಕಾಯುಕ್ತಕ್ಕೆ ಬಿಜೆಪಿ ನಿಯೋಗ ದೂರು ನೀಡಿದೆ.

ಈ ಕುರಿತು ಬೆಂಗಳೂರಿನಲ್ಲಿ ವಕೀಲರ ಸಂಘದ ಅಧ್ಯಕ್ಷ ವಿವೇಕ್ ರೆಡ್ಡಿ ಪ್ರತಿಕ್ರಿಯಿಸಿದ್ದಾರೆ. ಪವರ್ ಟಿವಿ ರಹಸ್ಯ ‌ಕಾರ್ಯಾಚರಣೆಯಲ್ಲಿ ಶಾಸಕರ ಕಮಿಷನ್​ ಬಯಲಾಗಿದೆ. ಭ್ರಷ್ಟ ಶಾಸಕರ ವಿರುದ್ಧ ಎಫ್ಐಅರ್(FIR) ದಾಖಲು ಮಾಡಬೇಕು, ಅದ್ರೆ ಇದ್ಯಾವುದೂ ಆಗಿಲ್ಲ. ಹೀಗಾಗಿ ಲೋಕಾಯುಕ್ತಕ್ಕೆ ಶಾಸಕರ ವಿರುದ್ಧ ಕ್ರಮ ಕೈಗೊಳ್ಳುವಂತೆ  ದೂರು ನೀಡಿದ್ದೇವೆ ಎಂದು ಹೇಳಿದ್ದಾರೆ.

ಶೀಘ್ರವಾಗಿ ಎಫ್ಐಅರ್(FIR) ದಾಖಲಿಸಿ ತನಿಖೆ ನಡೆಸುವಂತೆ ಲೋಕಾಯುಕ್ತ ಆಗ್ರಹಿಸಿದ್ದೇವೆ. ಸಾರ್ವಜನಿಕರು ವಕೀಲರು ಮುಂದೆ ಬಂದ್ರೆ ಕಾನೂನಿನ ನೆರವು ನೀಡುತ್ತೇವೆ ಎಂದು ವಿವೇಕ್ ರೆಡ್ಡಿ ತಿಳಿಸಿದ್ದಾರೆ.

ಪವರ್ ಟಿವಿಗೆ ಕಾರ್ಯಕ್ಕೆ ಮೆಚ್ಚುಗೆ

ಮಾಧ್ಯಮ ಇತಿಹಾಸದಲ್ಲೇ ಪವರ್ ಟಿವಿ 29 ಶಾಸಕರ ಭ್ರಷ್ಟಾಚಾರವನ್ನು ಬಯಲು ಮಾಡಿದೆ. ಓಎಫ್ ಸಿ ಕೇಬಲ್ ಅಳವಡಿಕೆಗೆ ಸಂಬಂಧಿಸಿದಂತೆ ಮೆಗಾ ಡೀಲ್​ ಬೆಳಕಿಗೆ ತಂದಿದೆ. ರಾಜ್ಯದಲ್ಲಿ ಪವರ್​​ ಟಿವಿ ಕುಟುಕು ಕಾರ್ಯಾಚರಣೆ ಸಂಚಲನಕ್ಕೆ ಪಕ್ಷಾತೀತವಾಗಿ ರಾಜಕಾರಣಿಗಳಿಂದಲೂ ಶ್ಲಾಘನೆ ವ್ಯಕ್ತವಾಗಿದೆ. ‘ಪವರ್’ ಫುಲ್​ ಕಾರ್ಯಾಚರಣೆಗೆ ರಾಜ್ಯದ ಜನತೆ ಸಲಾಂ ಹೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments