Monday, August 25, 2025
Google search engine
HomeUncategorizedಮೇ 10 ಚುನಾವಣೆ, ಮೇ 13 ಫಲಿತಾಂಶ : ಇಲ್ಲಿದೆ ನೋಡಿ ಹೈಲೆಟ್ಸ್

ಮೇ 10 ಚುನಾವಣೆ, ಮೇ 13 ಫಲಿತಾಂಶ : ಇಲ್ಲಿದೆ ನೋಡಿ ಹೈಲೆಟ್ಸ್

ಬೆಂಗಳೂರು : ಇಡೀ ರಾಜ್ಯವೇ ಕಾತುರದಿಂದ ಕಾಯುತ್ತಿದ್ದ ಕರ್ನಾಟಕ ವಿಧಾನಸಭೆ ಚುನಾವಣೆ(2023)ಯ ದಿನಾಂಕ ಘೋಷಣೆ ಆಗಿದೆ. ಕೇಂದ್ರ ಚುನಾವಣಾ ಆಯೋಗವು ರಾಜ್ಯ ವಿಧಾನಸಭೆ ಚುನಾವಣೆಗೆ ಇಂದು ವೇಳಾಪಟ್ಟಿ ಪ್ರಕಟಿಸಿದೆ.

ದೆಹಲಿಯ ವಿಜ್ಞಾನ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಕೇಂದ್ರ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತರಾಗಿ ರಾಜೀವ್ ಕುಮಾರ್ ಚುನಾವಣೆಯನ್ನು ಘೋಷಣೆ ಮಾಡಿದ್ದಾರೆ.

224 ಸದಸ್ಯ ಬಲದ ಕರ್ನಾಟಕ ವಿಧಾನಸಭೆಗೆ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಮೇ10ರಂದು ಮತದಾನ ನಡೆಯಲಿದೆ. ಬಳಿಕ ಮೇ 13ರಂದು ಮತ ಎಣಿಕೆ ನಡೆದು ಫಲಿತಾಂಶ ಪ್ರಕಟಗೊಳ್ಳಲಿದೆ.

ಅಬ್ಬರದ ಪ್ರಚಾರ

ಇನ್ನು ಚುನಾವಣಾ ದಿನಾಂಕ ಘೋಷಣೆಗೂ ಮೊದಲೇ ಜೆಡಿಎಸ್ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಆದರೆ, ಬಿಜೆಪಿ ಕಾದುನೋಡುವ ತಂತ್ರಕ್ಕೆ ಮೊರೆ ಹೋಗಿದೆ. ಈಗಾಗಲೇ, ಕಾಂಗ್ರೆಸ್, ಜೆಡಿಎಸ್ ಹಾಗೂ ಆಡಳಿತರೂಢ ಬಿಜೆಪಿ ಅಬ್ಬರದ ಪ್ರಚಾರ ನಡೆಸುತ್ತಿವೆ.

ಅಧಿಸೂಚನೆ 

ಒಂದೇ ಹಂತದಲ್ಲಿ ಚುನಾವಣೆ

ನಾಮಪತ್ರ ಸಲ್ಲಿಕೆ : ಏಪ್ರಿಲ್ 13

ಪ್ರಕ್ರಿಯೆ ಆರಂಭ : ಏಪ್ರಿಲ್ 20

ನಾಮಪತ್ರ ಪರಿಶೀಲನೆ : ಏಪ್ರಿಲ್ 21

ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ : ಏಪ್ರಿಲ್ 24

ಚುನಾವಣೆ : ಮೇ 10

ಮತ ಎಣಿಕೆ (ಫಲಿತಾಂಶ) : ಮೇ 13

ಕರ್ನಾಟಕದ ಒಟ್ಟು ಮತದಾರರು : 5.21 ಕೋಟಿ

80 ವರ್ಷ ಮೇಲ್ಪಟ್ಟವರು : 12,15,763

ಶತಾಯುಷಿ ಮತದಾರರು : 16,976

ಮತದಾರರು ಮೊದಲ ಬಾರಿಗೆ ಮತದಾನ ಮಾಡುವವರು : 9,17,241

ಮೀಸಲು ಕ್ಷೇತ್ರಗಳು : ಎಸ್‌ಸಿ-36, ಎಸ್‌ಟಿ-15, ಸಾಮಾನ್ಯ ವರ್ಗ-173 ಸ್ಥಾನ

ಒಟ್ಟು ಮತದಾನ ಕೇಂದ್ರಗಳು : 58,282

 

ಮತದಾನಕ್ಕೆ ವ್ಯವಸ್ಥೆ?

  • ಒಟ್ಟು ಕೇಂದ್ರಗಳು: 58,281
  • ಸರಾಸರಿ 883 ಮತದಾರರಿಗೆ ಒಂದು ಕೇಂದ್ರ
  • ನಗರ ಮತದಾನ ಕೇಂದ್ರಗಳು: 24,063
  • ಗ್ರಾಮೀಣ ಮತದಾನ ಕೇಂದ್ರಗಳು: 34,219
  • ಮಹಿಳಾ ಮತದಾನ ಕೇಂದ್ರಗಳು: 1,320
  • ಯುವ ಮತದಾನ ಕೇಂದ್ರಗಳು: 224
  • ಪಿಡಬ್ಲ್ಯುಡಿ ಮ್ಯಾನೇಜ್ ಮತ ಕೇಂದ್ರಗಳು: 224
  • ಮಾದರಿ ಮತ ಕೇಂದ್ರಗಳು: 240
  • ವೆಬ್ ಕಾಸ್ಟಿಂಗ್: 29,141 (50%)
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments