Monday, August 25, 2025
Google search engine
HomeUncategorizedಅಲ್ಪ ಸಂಖ್ಯಾತರ ಮತಗಳ ಡಿಲೀಟ್ ಆರೋಪ ತಳ್ಳಿಹಾಕಿದ ಸಿಎಂ

ಅಲ್ಪ ಸಂಖ್ಯಾತರ ಮತಗಳ ಡಿಲೀಟ್ ಆರೋಪ ತಳ್ಳಿಹಾಕಿದ ಸಿಎಂ

ಹುಬ್ಬಳ್ಳಿ; ರಾಜ್ಯದ ವಿವಿಧ ಮತಕ್ಷೇತ್ರದಲ್ಲಿ ಅಲ್ಪ ಸಂಖ್ಯಾತ ಮತಗಳನ್ನ ತೆಗೆದು ಹಾಕಲಾಗಿದೆ ಎಂಬುದು ಸುಳ್ಳು. ಈ ಬಗ್ಗೆ ಈಗಾಗಲೇ ಇಲೆಕ್ಷನ್ ಕಮೀಷನ್ ಗಮನ ಹರಿಸಿದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಅವರು ಇಲ್ಲಿನ ಏರಪೋರ್ಟ್ ನಲ್ಲಿ ಹೇಳಿದ್ದಾರೆ.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲೆಕ್ಷನ್ ಕಮೀಷನ್ ನೇತೃತ್ವದಲ್ಲಿ ಮತಗಳನ್ನ ಡಿಲೀಟ್ ಮಾಡೋದು, ಸೇರಿಸೋದು ಆಗಲಿದೆ. ಈ ಬಗ್ಗೆ ಎಲೆಕ್ಷನ್ ಕಮೀಷನ್ ಆಫ್ ಇಂಡಿಯಾ ಕಾಳಜಿ ವಹಿಸಿದೆ. ಎಲ್ಲೆಲ್ಲಿ ದೂರುಗಳು ಬಂದಿವೆ, ಎಲೆಕ್ಷನ್ ಕಮೀಷನ್ ತನಿಖೆ ನಡೆಸುತ್ತಿದೆ ತಪ್ಪಿತಸ್ಥರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ತಿಳಿಸಿದರು.

ಕೆಲವು ಮತಕ್ಷೇತ್ರಗಳಲ್ಲಿ ಅನಧಿಕೃತವಾಗಿ ಮತದಾರರನ್ನ ಸೇರಿಸೋ ಕೆಲಸ ಆಗಿದೆ. ಅದು ಬೆಂಗಳೂರ ಇರಬಹೋದು, ಹುಬ್ಬಳ್ಳಿಯಲ್ಲೂ ಇರಬಹುದು. ಅನಧಿಕೃತ ಮತಗಳನ್ನ ತಗೆಯೋ ಕೆಲಸ ಆಗ್ತಿದೆ. ಅಧಿಕೃತವಾಗಿದ್ದವರಿಗೆ ಮತದಾನ ಹಕ್ಕು ಇರುತ್ತದೆ ಎಂದು ಸಿಎಂ ಹೇಳಿದರು.

RELATED ARTICLES
- Advertisment -
Google search engine

Most Popular

Recent Comments