Tuesday, August 26, 2025
Google search engine
HomeUncategorizedಶಾಸಕ ಯತ್ನಾಳ ಹಿಟ್ಲರ್ ಇದ್ದಂತೆ, ಆತ ಹುಲಿಯೂ ಅಲ್ಲ, ಹೆಬ್ಬುಲಿಯೂ ಅಲ್ಲ

ಶಾಸಕ ಯತ್ನಾಳ ಹಿಟ್ಲರ್ ಇದ್ದಂತೆ, ಆತ ಹುಲಿಯೂ ಅಲ್ಲ, ಹೆಬ್ಬುಲಿಯೂ ಅಲ್ಲ

ವಿಜಯಪುರ : ಶಾಸಕ ಬಸನಗೌಡ ಪಾಟೀಲ ಯತ್ನಾಳ ಓರ್ವ ಹಿಟ್ಲರ್ ಸಂಸ್ಕೃತಿಯ ಮನುಷ್ಯ ಯತ್ನಾಳ್ ಹುಲಿನು ಅಲ್ಲ ಹೆಬ್ಬುಲಿನೂ ಅಲ್ಲ ಹೆಂಡ್ಯಾಗಿನ ಹುಳಾ, ಇವರ ಆಯುಷ್ಯ ಇನ್ನೂ ಕೇವಲ ಮೂರು ತಿಂಗಳು ಎಂದು ರವಿ ಬಗಲಿ ಆಕ್ರೋಶ ಹೊರ ಹಾಕಿದ್ದಾರೆ.

ವಿಜಯಪುರ ನಗರದಲ್ಲಿ ಇಂದು ಮಾದ್ಯಮದವರನ್ನು ಉದ್ದೇಶಿಸಿ ಮಾತನಾಡಿದ‌ ಪಾಲಿಕೆಯ ಮಾಜಿ ಸದಸ್ಯ ರವಿ ಬಗಲಿ ಮಹಾನಗರ ಪಾಲಿಕೆ ಚುನಾವಣೆ ಮುಗಿದು ಫಲಿತಾಂಶ ಹೊರಬಿದ್ದಿದೆ. ಬಿಜೆಪಿ ಪಕ್ಷದಿಂದ ಟಿಕೆಟ್ ಸಿಗದ ಕಾರಣ ಪಕ್ಷೇತರರಾಗಿ ಸ್ಪರ್ಧಿಸಿದ್ದ ಅಭ್ಯರ್ಥಿಗಳನ್ನು ಪಕ್ಷದಿಂದ ಉಚ್ಚಾಟಿಸಲಾಗಿತ್ತು.‌ ಇದೀಗ ಉಚ್ಚಾಟಿತ ಅಭ್ಯರ್ಥಿಗಳು ಸೇರಿಕೊಂಡು ಪತ್ರಿಕಾಗೋಷ್ಠಿ ನಡೆಸಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹಾಗೂ ಬಿಜೆಪಿ ಅಧ್ಯಕ್ಷ ಆರ್.ಎಸ್.ಪಾಟೀಲ ಕುಚಬಾಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎಲ್ಲರ ತಲೆ ಮೇಲೆ ಕೈ ನಮಗೆಲ್ಲ ಟಿಕೆಟ್ ತಪ್ಪಲು ಜಿಲ್ಲಾಧ್ಯಕ್ಷರೇ ಕಾರಣ ಆರ್ ಎಸ್ ಪಾಟೀಲ ಯತ್ನಾಳ ಕೈಗೊಂಬಿಯಾಗಿ ಕೆಲಸ ಮಾಡಿದ್ದಾರೆ. ಕಾರ್ಯಕರ್ತರನ್ನು ಹಿಡಿದಿಟ್ಟುಕೊಳ್ಳುವ ಕೆಲಸ ಮಾಡಿಲ್ಲ ಎಂದು ಆಕ್ರೋಶ ‌ಹೊರಹಾಕಿದರು. ಇನ್ನೂ ನಗರ ಶಾಸಕ ಯತ್ನಾಳ ಸಾವಿರ ಕೋಟಿ ಕೊಟ್ಟರೆ ಮಂತ್ರಿ ಮಾಡುತ್ತಾರೆ ಎಂದು ಹೇಳಿಕೆ ಕೊಟ್ಟಾಗಲೂ ಪಕ್ಷದ ಜಿಲ್ಲಾಧ್ಯಕ್ಷರಾಗಿ ಯಾವ ಜವಾಬ್ದಾರಿ ನಿರ್ವಹಿಸಿದ್ದೀರಿ. ಚುನಾವಣೆಯಲ್ಲಿ 12 ನೇ ವಾರ್ಡ್ ನಲ್ಲಿ ಜಿಲ್ಲಾಧಕ್ಷರ ತಂಗಿ ಪಕ್ಷದ ವಿರೋಧಿ ಪ್ರಚಾರ ಮಾಡಿದ್ದಾರೆ. ಸಮಯ ಬಂದಾಗ ಅದನ್ನು ಸಹಿತ ಸಾಕ್ಷಿ ಸಮೇತ ಜನರ ಮುಂದೆ ಇಡುತ್ತೇನೆ ಎಂದರು. ಇನ್ನೂ ರಾಜು ಬಿರಾದಾರ 35 ವಾರ್ಡ್ ನಿಂದ ನಾವು ನಾಲ್ಕು ಜನ ಟಿಕೆಟ್ ಗಾಗಿ ಹೋಗಿದ್ದೆವು 16 ನೆ ವಾರ್ಡ್ ವ್ಯಕ್ತಿಯನ್ನು ಇಲ್ಲಿ ತಂದು ನಿಲ್ಲಿಸಿದ್ದಾರೆ.

ನಾನು 25 ವರ್ಷಗಳಿಂದ ಕಾರ್ಯಕರ್ತನಾಗಿ ದುಡಿದಿದ್ದೇನೆ. 2-3 ವರ್ಷದಿಂದ ಪಕ್ಷ ಸೇರಿದವರನ್ನು ಟಿಕೆಟ್ ಕೊಟ್ಟು ಗೆಲ್ಲಿಸಿದ್ದಾರೆ. ಬೆಂಗಳೂರು ನಿಂದ 1.5 ಕೋಟಿ ಮುದೋಳನಿಂದ 2 ಕೋಟಿ ಹಣವನ್ನು ಪಕ್ಷೇತರ ಅಭ್ಯರ್ಥಿಗಳಿಗೆ ಹಣ ಬಂದಿವೆ ಎಂದು ಆರೋಪ ಮಾಡಿದ್ದಾರೆ. ಈ ಆರೋಪ ಸುಳ್ಳು ದೇವಸ್ಥಾನಕ್ಕೆ ಬನ್ನಿ ಪ್ರಮಾಣ ಮಾಡೋಣ ಎಂದು ಸವಾಲು ಹಾಕಿದರು. ಇಷ್ಟು ದಿನ ವಿಜಯಪುರ ಜಿಲ್ಲೆಯಲ್ಲಿ ಮೂರು ಬಣಗಳಿದ್ದವು ಇದೀಗ ಪರಾಜಿತ ಅಭ್ಯರ್ಥಿಗಳು ಸುದ್ದಿಗೋಷ್ಠಿ ನಡೆಸುವ ಮೂಲಕ ಕಾರ್ಯಕರ್ತರ ಉಳಿವಿಗಾಗಿ ಹೋರಾಟ ಎಂಬ ಶೀರ್ಷಿಕೆಯಡಿ ಅಧ್ಯಕ್ಷ ಹಾಗೂ ಶಾಸಕರ ವಿರುದ್ಧ ಆಕ್ರೋಶ ಹೊರಹಾಕಿರುವದು ಜಿಲ್ಲೆಯ ಜನತೆಯಲ್ಲಿ ಕೂತುಹಲ ಮೂಡಿಸಿದೆ

RELATED ARTICLES
- Advertisment -
Google search engine

Most Popular

Recent Comments