Monday, August 25, 2025
Google search engine
HomeUncategorizedಪವರ್​ ವರದಿ ಪೋಸ್ಟ್​ ಮಾಡಿದ ಕೆಪಿಸಿಸಿ

ಪವರ್​ ವರದಿ ಪೋಸ್ಟ್​ ಮಾಡಿದ ಕೆಪಿಸಿಸಿ

ಬೆಂಗಳೂರು : ಹಸು ಗೂಸುಗಳ ಸಾವಿನ ಬಗ್ಗೆ ವರದಿ ಬಿತ್ತರಿಸಿದ್ದ ಪವರ್ ಟಿವಿ ವರದಿ ಬಿತ್ತರಿಸಿತ್ತು, ಪವರ್​ ಟಿವಿ ವರದಿಗೆ ಸ್ಪಂದಿಸಿದ ರಾಜ್ಯ ಕಾಂಗ್ರೆಸ್ ಪವರ್​ ಟಿವಿ ಸುದ್ದಿಯನ್ನು ಪೋಸ್ಟ್​​ ಮಾಡಿ ರಾಜ್ಯ ಸರ್ಕಾರಕ್ಕೆ ಚಾಟಿ ಬೀಸಿದೆ.

ಟ್ವೀಟ್​ ಮಾಡಿರುವ ರಾಜ್ಯ ಕಾಂಗ್ರೆಸ್,​ 6 ತಿಂಗಳಲ್ಲಿ 5 ಸಾವಿರ ಮಕ್ಕಳ ಮರಣ ಮೃದಂಗವಾಗಿದೆ. ಸರ್ಕಾರದ ಅಯ್ಯೋಗ್ಯತನಕ್ಕೆ ಹಿಡಿದ ಕನ್ನಡಿ. ನಾಡಿನ ತಂದೆ ತಾಯಂದಿರೇ ಎಚ್ಚರ ಎಚ್ಚರ. ಕರ್ನಾಟಕದಲ್ಲಿ ಸದ್ದಿಲ್ಲದೇ ಹೆಚ್ಚಾಗುತ್ತಿದೆ ಮಕ್ಕಳ ಮರಣ ಮೃದಂಗ. ಆರು ತಿಂಗಳಲ್ಲಿ ಐದು ಸಾವಿರ ಚಿಣ್ಣರ ಸಾವುಗಳಾಗಿದೆ. ಉತ್ತರ ಕರ್ನಾಟಕವೇ ಸಾವಿನ ಹಾಟ್ ಸ್ಪಾಟ್. ವೈದ್ಯಕೀಯ ಸೌಲಭ್ಯವಿರುವ ಕರ್ನಾಟಕದಲ್ಲಿ ಮಕ್ಕಳ ಸಾವಿನ ಮರಣ ಸಂಖ್ಯೆ ಹೆಚ್ಚಳವಾಗುತ್ತಿದೆ.

ಇನ್ನು, 3648 ಮಕ್ಕಳು ಒಂದು ತಿಂಗಳ ಹಸುಗೂಸುಗಳು ಹೆಚ್ಚು ಮರಣ ಹೊಂದಿದ್ದಾರೆ. ಅಪೌಷ್ಟಿಕತೆ ಕೊರತೆ, ವಿಳಂಭ ಆಸ್ಪತ್ರೆ ದಾಖಲಾತಿ, ರೆಫರಲ್ ಆಸ್ಪತ್ರೆಗಳು ಕೊವಿಡ್ ಆಸ್ಪತ್ರೆಗಳಾಗಿ ಬದಲಾಗಿರೋದು. ಬದಲಾದ ಜೀವನ ಶೈಲಿಯಿಂದ ಮಕ್ಕಳ ಸಾವು ಹೆಚ್ಚಳವಾಗುತ್ತಿದೆ ಎಂದು ಕಿಡಿಕಾರಿದೆ.

RELATED ARTICLES
- Advertisment -
Google search engine

Most Popular

Recent Comments