Tuesday, August 26, 2025
Google search engine
HomeUncategorizedಹೆದ್ದಾರಿ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಅಸ್ವಸ್ಥಗೊಂಡ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ

ಹೆದ್ದಾರಿ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಅಸ್ವಸ್ಥಗೊಂಡ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ

ಸಿಲಿಗುರಿ: ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ಇಂದು ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ನಂತರ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಆರೋಗ್ಯದಲ್ಲಿ ಸ್ವಲ್ಪ ಏರಳಿತವಾಗಿ ಅಸ್ವಸ್ಥಗೊಂಡಿದ್ದಾರೆ ಎಂದು ಬಿಜೆಪಿ ಶಾಸಕ ನೀರಜ್ ಜಿಂಬಾ ಹೇಳಿದ್ದಾರೆ.

ವೈದ್ಯರು ಕೇಂದ್ರ ಸಚಿವರನ್ನು ಭೇಟಿ ಮಾಡಿದ್ದಾರೆ ಎಂದು ಅವರು ಹೇಳಿದರು. ಅವರು ಚೇತರಿಸಿಕೊಂಡ ನಂತರ ಗಡ್ಕರಿ ಅವರು ತಮ್ಮ ಕಾರಿನಲ್ಲಿ ಹೊರಟರು ಎಂದು ಜಿಂಬಾ ಹೇಳಿದರು. ಕಾರ್ಯಕ್ರಮವು ಮುಗಿದ ನಂತರ, ಗಡ್ಕರಿ ಅವರು ಅಸ್ವಸ್ಥತೆಯ ಬಗ್ಗೆ ದೂರು ನೀಡಿದರು. ವೈದ್ಯರು ತಕ್ಷಣವೇ ತೆರೆಮರೆಯ ಪ್ರದೇಶದಲ್ಲಿ ಅವರನ್ನು ಭೇಟಿ ಮಾಡಿದರು. ನಂತರ ಅವರು ತಮ್ಮ ಕಾರಿನಲ್ಲಿ ಹೊರಟರು ಜಿಂಬಾ ಹೇಳಿದರು.

ಪಶ್ಚಿಮ ಬಂಗಾಳದ ಪ್ರವಾಸದಲ್ಲಿರುವ ನಿತಿನ್ಗಡ್ಕರಿ ಅವರು ಸಿಲಿಗುರಿಯಲ್ಲಿ ಸುಮಾರು 1,206 ಕೋಟಿ ರೂ ಮೌಲ್ಯದ ಮೂರು ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಿದರು.

RELATED ARTICLES
- Advertisment -
Google search engine

Most Popular

Recent Comments