Monday, August 25, 2025
Google search engine
HomeUncategorizedಪವರ್ ಟಿವಿಯಲ್ಲಿ ದೈವನರ್ತಕ ನಾಗರಾಜ್ ಪಾಣಾರ್

ಪವರ್ ಟಿವಿಯಲ್ಲಿ ದೈವನರ್ತಕ ನಾಗರಾಜ್ ಪಾಣಾರ್

ಕಾಂತಾರ.. ಕಾಂತಾರ.. ಕಾಂತಾರ. ರಿಲೀಸ್ ಆಗಿ 50 ದಿನಗಳಾದ್ರೂ ಅದ್ರ ಕಿಚ್ಚು ಕಿಂಚಿತ್ತೂ ಕಮ್ಮಿ ಆಗಿಲ್ಲ. ಇದು ಡಿವೈನ್ ಬ್ಲಾಕ್​ಬಸ್ಟರ್ ಅನ್ನೋದು ಎಲ್ರಿಗೂ ಗೊತ್ತೇಯಿದೆ. ಆದ್ರೆ ರಿಷಬ್ ಶೆಟ್ಟಿಯ ಈ ಮಹಾ ಸಂಕಲ್ಪದ ಹಿಂದೆ ಒಬ್ಬ ದೈವನರ್ತಕರಿದ್ದಾರೆ. ಅವರೇ ಕಾಂತಾರ ಸಕ್ಸಸ್ ಹಿಂದಿನ ಅಸಲಿ ಹೀರೋ. ಇಷ್ಟಕ್ಕೂ ಆತ ಯಾರು..? ಪವರ್ ಟಿವಿ ಜೊತೆ ಎಕ್ಸ್​ಕ್ಲೂಸಿವ್ ಆಗಿ ಬಿಚ್ಚಿಟ್ಟ ಕರಾಳ ಸತ್ಯಗಳೇನು ಅನ್ನೋದ್ರ ಜೊತೆ ಕಾಂತಾರ ಹಾಫ್ ಸೆಂಚುರಿ ಗಮ್ಮತ್ತು ಕೂಡ ತೋರಿಸ್ತೀವಿ. ನೀವೇ ಓದಿ.

  • ಕಾಂತಾರದ ಅಸಲಿ ಹೀರೋ ರಿಷಬ್ ಮೆಚ್ಚಿದ ಈ ನಾಗ

ಯೆಸ್.. ಒಂದು ಸಿನಿಮಾದ ಸಕ್ಸಸ್ ಕ್ರೆಡಿಟ್​ನ ಸಾಮಾನ್ಯವಾಗಿ ಜನರು ಅದ್ರ ನಿರ್ದೇಶಕ, ನಿರ್ಮಾಪಕ ಅಥ್ವಾ ಹೀರೋಗೆ ಕೊಡ್ತಾರೆ. ಆದ್ರೆ ಸಕ್ಸಸ್​ನ ಅಸಲಿ ಕ್ರೆಡಿಟ್ ಆ ಚಿತ್ರದ ಪ್ರತಿಯೊಬ್ಬ ಕಲಾವಿದ ಹಾಗೂ ತಂತ್ರಜ್ಞನಿಗೂ ಸಲ್ಲಬೇಕು. ಸದ್ಯ ವಿಶ್ವದಾದ್ಯಂತ ಸಂಚಲನ ಮೂಡಿಸಿರೋ ಪ್ಯಾನ್ ಇಂಡಿಯಾ ಕಾಂತಾರ ಸಿನಿಮಾ, ಎಲ್ಲರ ಮನಸುಗಳನ್ನ ತಲುಪಿದೆ. ಪ್ರತಿಯೊಬ್ಬ ನೋಡುಗನಿಗೂ ವ್ಹಾವ್ ಫೀಲ್ ಕೊಟ್ಟಿದೆ.

ಸದ್ಯ ಕಾಂತಾರ ಚಿತ್ರದ ಸೆಂಟರ್ ಆಫ್ ಅಟ್ರ್ಯಾಕ್ಷನ್ ರಿಷಬ್ ಶೆಟ್ಟಿಯೇ ಆದ್ರೂ ಸಹ, ಈ ರೀಲ್ ಹೀರೋಗೆ ಒಬ್ಬ ರಿಯಲ್ ಹೀರೋ ಇದ್ದಾರೆ. ಅವ್ರೇ ನಾಗರಾಜ್ ಪಾಣಾರ್. ಇವ್ರು ನಿಜವಾದ ದೈವನರ್ತಕರು. ಕೆರಾಡಿ ಮೂಲದ ನಾಗ ಅವ್ರನ್ನ ರಿಷಬ್ ಬಾಲ್ಯದಿಂದಲೂ ನೋಡುತ್ತಾ ಬೆಳೆದವ್ರು. ಹಾಗಾಗಿ ಕಾಂತಾರ ಸಿನಿಮಾ ಶುರುವಾಗೋಕೂ ಮುನ್ನ ನಾಗರಾಜ್ ಅವ್ರ ಮನೆಗೆ ಭೇಟಿ ನೀಡಿದ್ರು. ಅಂದು ಈ ದೈವನರ್ತಕ ನುಡಿದ ‘ಯಶಸ್ವಿ ಆಗ್ಬೇಕು’ ಅನ್ನೋ ಒಂದು ಮಾತು, ಇಂದು ಅಕ್ಷರಶಃ ನಿಜವಾಗಿದೆ.

ಅಂದಹಾಗೆ ನಾಗರಾಜ್ ಪಾಣಾರ್ ಕುಟುಂಬ ತಲೆ ತಲಾಂತರಗಳಿಂದ ಈ ಕೋಲ ಕಟ್ಟೋ ಕಾರ್ಯ ಮಾಡ್ತಾ ಬರ್ತಿದೆ. ಇವರೂ ಸಹ ಬರೋಬ್ಬರಿ ಮೂವತ್ತೈದು ನಲವತ್ತು ವರ್ಷಗಳಿಂದ ದೈವಾರಾಧನೆ ಮಾಡ್ತಾ ಬಂದಿದ್ದಾರೆ. ಹಾಗಾಗಿ ಸಿನಿಮಾ ಅಂದಾಗ ದೂರ ಉಳಿಯೋ ಮನಸ್ಸು ಮಾಡಿದ್ರು. ಆದ್ರೆ ಕರಾವಳಿ ಮಣ್ಣಿನ ಆಚಾರ, ನಂಬಿಕೆಗಳನ್ನ ವಿಶ್ವಕ್ಕೆ ಸಾರುವಂತಹ ಕಾರ್ಯಕ್ಕೆ ರಿಷಬ್ ಕೈ ಹಾಕಿದಾಗ ಅದಕ್ಕೆ ಒಲ್ಲೆ ಎನ್ನಲಾಗಲಿಲ್ಲ ನಾಗರಾಜ್ ಪಾಣಾರ್.

ನಾಗರಾಜ್ ಪಾಣಾರ್ ಕಾಂತಾರ ಸಿನಿಮಾದ ತಾಯಿಬೇರು ಅನ್ನಬಹುದು. ಕಾರಣ ಶೆಟ್ರು ತಮ್ಮ ಸಿನಿಮಾಗಾಗಿ ಇವ್ರನ್ನೇ ರೋಲ್ ಮಾಡೆಲ್ ಆಗಿಸಿಕೊಂಡ್ರು. ಇವ್ರಿಂದ ಸಾಕಷ್ಟು ವಿಷಯಗಳನ್ನು ಅರಿತರು. ಕೋಲ ಕಟ್ಟೋ ವಿಚಾರಕ್ಕೆ ಕಿಂಚಿತ್ತೂ ಅಪಮಾನ ಆಗದಂತೆ ಎಲ್ಲವನ್ನೂ ನಾಗ ಅವ್ರ ಸಲಹೆ, ಸೂಚನೆಗಳಂತೆ ಪಾಲಿಸಿದ್ರು. ಹಾಗಾಗಿಯೇ ಇದು ಇಷ್ಟು ದೊಡ್ಡ ಯಶಸ್ಸು ಕಾಣಲು ಕಾರಣವಾಯ್ತು. ಅಲ್ಲದೆ, ಹಾಡೊಂದನ್ನ ಸಹ ಹಾಡಿಸಿದ್ರು. ಜಾನಪದ ಹಾಡಿಗೆ ನಾಗರಾಜ್ ಪಾಣಾರ್ ಕಂಠ ಕೂಡ ದಾನ ಮಾಡಿದ್ದಾರೆ.

ಸದ್ಯ ರಿಷಬ್ ಎಷ್ಟು ಫೇಮಸ್ಸೋ, ಈ ಅಸಲಿ ದೈವ ನರ್ತಕ ನಾಗರಾಜ್ ಪಾಣಾರ್ ಕೂಡ ಅಷ್ಟೇ ಫೇಮಸ್. ಇವ್ರನ್ನ ಹೀರೋ ತರಹ ಕೆಲವರು ನೋಡಿದ್ರೆ, ಮತ್ತಷ್ಟು ಮಂದಿ ದೇವರ ರೀತಿ ನೋಡ್ತಾರೆ. ರೀಸೆಂಟ್ ಆಗಿ ಬೆಂಗಳೂರಿನಲ್ಲಿರೋ ಕರಾವಳಿ ಸ್ಪೈಸಿ ಅನ್ನೋ ಹೋಟೆಲ್​ಗೆ ಆಗಮಿಸಿದ್ದ ನಾಗ ಅವ್ರು, ಅವ್ರಿಂದ ಗೌರವ ಸ್ವೀಕರಿಸಿದ್ರು. ಸಾಕಷ್ಟು ಮಂದಿ ಅವ್ರೊಟ್ಟಿಗೆ ಫೋಟೋ ತೆಗೆಸಿಕೊಳ್ಳಲು ಮುಗಿಬಿದ್ದರು. ಆಗ ಪವರ್ ಟಿವಿ ಜೊತೆ ಮುಕ್ತವಾಗಿ ಮಾತಿಗೂ ಸಿಕ್ಕರೂ ನಾಗ.

ಅದಕ್ಕೂ ಮುನ್ನ ಯಶಸ್ವೀ 50 ದಿನದ ಹೊಸ್ತಿಲಲ್ಲಿರೋ ಕಾಂತಾರ ಸಕ್ಸಸ್ ಜಾತ್ರೆಯ ಬಗ್ಗೆ ಡಿಟೈಲ್ಸ್ ಕೊಟ್ಟುಬಿಡ್ತೀವಿ ನೋಡಿ.

  • 300 ಸೆಂಟರ್​ಗಳಲ್ಲಿ ಕಾಂತಾರ ಹಾಫ್ ಸೆಂಚುರಿ ಗಮ್ಮತ್ತು
  • 500 ಕೋಟಿ ಕ್ಲಬ್​ನತ್ತ ಜಗಮೆಚ್ಚಿದ ಸೆನ್ಸೇಷನಲ್ ಸಿನಿಮಾ
  • KGF​​ಗಿಂತ ಬಿಗ್ಗೆಸ್ಟ್ ಹಿಟ್.. ಸಾರ್ಥಕತೆಯಲ್ಲಿ ಹೊಂಬಾಳೆ
  • ಇಡೀ ಚಿತ್ರರಂಗವನ್ನು ಮಂತ್ರಮುಗ್ಧಗೊಳಿಸಿದ ಕಾಂತಾರ

ಪರಭಾಷಾ ಸಿನಿಪ್ರಿಯರಷ್ಟೇ ಅಲ್ಲ, ಸೂಪರ್ ಸ್ಟಾರ್​ಗಳೂ ಮೆಚ್ಚಿದ ಕಾಂತಾರ ಸಿನಿಮಾ ಕ್ರಾಂತಿಯ ಅಲೆ ಎಬ್ಬಿಸಿದೆ. ಇಂದಿಗೂ ದೇಶ ವಿದೇಶಗಳಲ್ಲಿ ಹೌಸ್​ಫುಲ್ ಪ್ರದರ್ಶನ ಕಾಣ್ತಿದೆ. ವಿಶ್ವದಾದ್ಯಂತ 400 ಕೋಟಿ ಗಳಿಸಿ, 500 ಕೋಟಿ ಕ್ಲಬ್​ನತ್ತ ಮುನ್ನುಗ್ಗುತ್ತಿದೆ. ಕರ್ನಾಟಕದಲ್ಲಿ 48 ದಿನ ಪೂರೈಸಿರೋ ಕಾಂತಾರ ಹಾಫ್ ಸೆಂಚುರಿ ಗಮ್ಮತ್ತಿನ ಹೊಸ್ತಿಲ್ಲಲಿದೆ. ಅದೂ ಬರೋಬ್ಬರಿ 300 ಸೆಂಟರ್​ಗಳಲ್ಲಿ ಅನ್ನೋದು ಇಂಟರೆಸ್ಟಿಂಗ್.

ಕೆಜಿಎಫ್ ನಿರ್ಮಿಸಿದ್ದ ಹೊಂಬಾಳೆ ಫಿಲಂಸ್, ಕನ್ನಡ ಚಿತ್ರರಂಗಕ್ಕೆ ಹೊಸ ಆಯಾಮ ತಂದುಕೊಟ್ಟಿತ್ತು. ಇದೀಗ ಅದಕ್ಕಿಂತ ಒಳ್ಳೆಯ ಸಿನಿಮಾ ಕೊಟ್ಟ ಸಾರ್ಥಕಭಾವದಲ್ಲಿ ಇದ್ದಾರೆ ನಿರ್ಮಾಪಕ ವಿಜಯ್ ಕಿರಗಂದೂರು. ಒಟ್ಟಾರೆ ಇಡೀ ಚಿತ್ರರಂಗವನ್ನೇ ಮಂತ್ರಮುಗ್ಧಗೊಳಿಸಿರೋ ಕಾಂತಾರದ ಅಸಲಿ ಹೀರೋ ನಾಗರಾಜ್ ಪಾಣಾರ್ ನಮ್ಮ ಪವರ್ ಟಿವಿ ಜೊತೆ ಬಿಚ್ಚಿಟ್ಟ ಸತ್ಯಗಳನ್ನ ಅವ್ರ ಬಾಯಿಂದಲೇ ಒಮ್ಮೆ ಕೇಳಿಬಿಡಿ.

ಅದೇನೇ ಇರಲಿ, ಮಹತ್ತರ ಕಾರ್ಯಗಳಿಗೆ ದೈವ ಬಲ ಬೇಕಾಗೇ ಬೇಕಾಗುತ್ತೆ. ಇಲ್ಲಿ ದೈವನರ್ತಕ ನಾಗ ಅವ್ರೇ ಕಾಂತಾರ ಚಿತ್ರದ ಅಸಲಿ ಶಕ್ತಿಯಾಗಿ ನಿಂತಿದ್ದು ಖುಷಿಯ ವಿಚಾರ. ನಂಬಿಕೆಯೇ ಜೀವನ. ಆಚಾರಗಳೇ ಮುಂದಿನ ಪೀಳಿಗೆಗೆ ವಿಚಾರಗಳು ಅನ್ನುವಂತೆ ಇದೊಂದು ಮಾಸ್ಟರ್​ಪೀಸ್ ಸಿನಿಮಾ ಆಗಿ ಇತಿಹಾಸದ ಪುಟಗಳಲ್ಲಿ ಅಚ್ಚಳಿಯದೆ ಉಳಿಯಲಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES
- Advertisment -
Google search engine

Most Popular

Recent Comments