Thursday, August 28, 2025
HomeUncategorizedದೆಹಲಿಯ ವಿವಿಧ ಸ್ಥಳದಲ್ಲಿ ಶ್ರದ್ಧಾ ದೇಹದ 12 ಭಾಗಗಳು ಪತ್ತೆ.!

ದೆಹಲಿಯ ವಿವಿಧ ಸ್ಥಳದಲ್ಲಿ ಶ್ರದ್ಧಾ ದೇಹದ 12 ಭಾಗಗಳು ಪತ್ತೆ.!

ದೆಹಲಿ; ಮದುವೆಯಾಗು ಎಂದು ಒತ್ತಾಯಿಸಿದ್ದಕ್ಕೆ ಪ್ರೇಯಸಿ ಶ್ರದ್ಧಾಳನ್ನ ಕೊಲೆ ಮಾಡಿ 35 ಪೀಸ್​ ಮಾಡಿದ ಪ್ರೀಯಕರ ಆರೋಪಿ ಅಫ್ತಾಬ್​ನನ್ನ ಪೊಲೀಸರು ಬಂಧಿಸಿದ್ದು, ಇಂದು ಶ್ರದ್ಧಾಳ ದೇಹದ ಭಾಗಗಳ ಎಸೆದ ಸ್ಥಳಕ್ಕೆ ಪೊಲೀಸರು ಆರೋಪಿಯನ್ನ ಕರೆದುಕೊಂಡು ಹೋಗಿ ಸ್ಥಳ ಮಹಜರು ಮಾಡಿದರು.

ಶ್ರದ್ಧಾಳನ್ನ ಕೊಲೆ ಮಾಡಿ ಅವಳ ದೇಹದ ಭಾಗವನ್ನ ಮೆಹ್ರೌಲಿ ಕಾಡು ಪ್ರದೇಶಕ್ಕೆ ಎಸೆದಿದ್ದಾನೆ. ದೆಹಲಿ ಶ್ರದ್ಧಾ ಕೊಲೆ ಪ್ರಕರಣದ ಆರೋಪಿ ಅಫ್ತಾಬ್ ಪೂನಾವಾಲಾ ಅವರನ್ನು ಪೊಲೀಸರು ಮಂಗಳವಾರ ಮೆಹ್ರೌಲಿ ಕಾಡಿಗೆ ಕರೆತಂದಿದ್ದು, ಸ್ಥಳದಲ್ಲಿ ಶ್ರದ್ಧಾ ದೇಹ 12 ಭಾಗಗಳು ಸಿಕ್ಕಿವೆ. ಸದ್ಯ ಮೂಳೆಗಳನ್ನ ದೆಹಲಿಯ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ಅಫ್ತಾಬ್ ದೇಹದ ಭಾಗಗಳನ್ನು ಕತ್ತರಿಸಲು ಸಣ್ಣ ಗರಗಸವನ್ನು ಬಳಸಿದ್ದರು. ಆ ಸಣ್ಣ ಗರಗಸ ಇನ್ನೂ ಪತ್ತೆಯಾಗಿಲ್ಲ ಎಂದು ಶಂಕಿಸಲಾಗಿದೆ. ಇನ್ನು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಅವರು ಶ್ರದ್ಧಾ ಕೊಲೆ ಪ್ರಕರಣ ‘ಲವ್ ಜಿಹಾದ್’ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

RELATED ARTICLES
- Advertisment -
Google search engine

Most Popular

Recent Comments