Saturday, August 23, 2025
Google search engine
HomeUncategorizedಚುಮು ಚುಮು ಚಳಿ, ಜಿಟಿ ಜಿಟಿ ಮಳೆ, ಬೆಂಗಳೂರು ಫುಲ್ ಕೂಲ್

ಚುಮು ಚುಮು ಚಳಿ, ಜಿಟಿ ಜಿಟಿ ಮಳೆ, ಬೆಂಗಳೂರು ಫುಲ್ ಕೂಲ್

ಬೆಂಗಳೂರು : ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಕಳೆದ ನಾಲ್ಕೈದು ದಿನಗಳಿಂದ ಆಗಾಗ್ಗೆ ಮಳೆ ಸುರಿಯುತ್ತಿದೆ. ಮಳೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.ಬಂಗಾಳಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದಿಂದಾಗಿ, ತಮಿಳುನಾಡು ಹಾಗೂ ಪುದುಚೇರಿ ಭಾಗಕ್ಕೆ ಶೀತ ಗಾಳಿ ಆಗಮಿಸಿದ್ದರಿಂದ ನಗರದಲ್ಲಿ ಮಳೆ ಪ್ರಮಾಣ ಏರಿಕೆ ಕಂಡಿದೆ. ನಗರದೆಲ್ಲೆಡೆ ಚಳಿ ಮತ್ತು ತಂಪಾದ ವಾತಾವರಣ ಉಂಟಾಗಿದೆ.

ಬೆಂಗಳೂರು ಸೇರಿದಂತೆ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಎಂಟು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಗಳಿವೆ. ಮಿಂಚು ಸಹಿತ ವರುಣದೇವ ಅಬ್ಬರಿಸಲಿದ್ದಾನೆ. ಇನ್ನು ಉತ್ತರ ಒಳನಾಡಿನಲ್ಲಿ ಒಣ ಹವೆ ಇರಲಿದೆ ಅಂತ ಹವಾಮಾನ ತಜ್ಞರು ತಿಳಿಸಿದ್ದಾರೆ.

ಒಟ್ಟಿನಲ್ಲಿ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳು ಫುಲ್ ಕೂಲ್ ಆಗಿದ್ದು, ಅಸ್ತಮಾ ಸೇರಿದಂತೆ ಶೀತ ಸಂಬಂಧಿ ಅಲರ್ಜಿ ಇರುವವರು ಎಚ್ಚರಿಕೆಯಿಂದ ಇರಬೇಕಿದೆ

ಸ್ವಾತಿ ಪುಲಗಂಟಿ ಮೆಟ್ರೋ ಬ್ಯೂರೋ ಬೆಂಗಳೂರು

RELATED ARTICLES
- Advertisment -
Google search engine

Most Popular

Recent Comments