Monday, August 25, 2025
Google search engine
HomeUncategorizedಕಳ್ಳರ ಬೆನ್ನತ್ತಿದ ಪೊಲೀಸರು..!

ಕಳ್ಳರ ಬೆನ್ನತ್ತಿದ ಪೊಲೀಸರು..!

ಬೆಂಗಳೂರು:ಸಿಲಿಕಾನ್ ಸಿಟಿಯಲ್ಲೊಂದು ಅಪರೂಪದ ಪ್ರಕರಣ ಬೆಳಕಿಗೆ ಬಂದಿದ್ದು, ಪೊಲೀಸರಿಗೆ ನಿದ್ದೆ ಕೆಡಿಸಿದ ಮನೆಗಳ್ಳತನ ಕೇಸ್​ನಲ್ಲಿ, ಫಾಲಿಗ್ರಾಫ್ ಪರೀಕ್ಷೆ ಮಾಡಿಸಿದ ರಾಜಧಾನಿ ಪೊಲೀಸರು. ಸಾಮಾನ್ಯವಾಗಿ ಗಂಭೀರ ಪ್ರಕರಣಗಳಲ್ಲಿ ಫಾಲಿಗ್ರಾಫ್(ಸುಳ್ಳು ಪತ್ತೆ ಪರೀಕ್ಷೆ) ಮಾಡಿಸಲಾಗುತ್ತೆ. ಆದರೆ ಅಪರೂಪವೆಂಬಂತೆ ಕಳ್ಳತನ ಪ್ರಕರಣದಲ್ಲಿ ಫಾಲಿಗ್ರಾಪ್ ಟೆಸ್ಟ್ ಮಾಡಿಸಿದ ಪೊಲೀಸರು.

ನಗರದ ಮಹಾಲಕ್ಷ್ಮಿ ಲೇಔಟ್ ಪೊಲೀಸರಿಂದ ಕಳ್ಳತನ ಪ್ರಕರಣದಲ್ಲಿ ಫಾಲಿಗ್ರಾಫ್ ಟೆಸ್ಟ್ ಮಾಡಿಸಲಾಗಿದ್ದು, ಇದೇ ವರ್ಷದ ಜನವರಿಯಲ್ಲಿ ಮಹಾಲಕ್ಷ್ಮಿ ಲೇಔಟ್ ಬಳಿಯ ನಾಗಪುರದಲ್ಲಿ ನಡೆದಿದ್ದ ಮನೆ ಕಳ್ಳತನ.ಸುಮಾರು 24 ಲಕ್ಷ ಮೌಲ್ಯದ ಚಿನ್ನಾಭರಣ, ನಗದು ಕಳ್ಳತನ ಆರೋಪ ಕೇಳಿಬಂದಿತ್ತು. ಮನೆಯಲ್ಲಿ ಕೆಲಸಕ್ಕಿದ್ದ ಕಾವ್ಯ ಎಂಬುವರ ಮೇಲೆ ಕಳ್ಳತನ ಆರೋಪ ಮಾಡಲಾಗಿತ್ತು. ಮನೆ ಯಜಮಾನರಿಂದ ಕಾವ್ಯ ಮೇಲೆ ಮಹಾಲಕ್ಷ್ಮಿ ಲೇಔಟ್ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ನಡೆಸಿದ ಮಹಾಲಕ್ಷ್ಮಿ ಲೇಔಟ್ ಪೊಲೀಸರು.ತನಿಖೆ ವೇಳೆ ಕಾವ್ಯ ಕಳ್ಳತನ ಮಾಡಿರುವುದಕ್ಕೆ ಯಾವುದೇ ಪೂರಕ ಸಾಕ್ಷ್ಯ ಪತ್ತೆಯಾಗಿರಲಿಲ್ಲ. ಇತ್ತ ಕಾವ್ಯಳೇ ಕಳ್ಳತನ ಮಾಡಿದ್ದಾಳೆ ಎಂದು ಪಟ್ಟು ಹಿಡಿದಿದ್ದ ದೂರುದಾರರು. ಹೀಗಾಗಿ ನ್ಯಾಯಾಲಯದ ಅನುಮತಿ ಪಡೆದು ಕಾವ್ಯಗೆ ಫಾಲಿಗ್ರಾಫ್ ಟೆಸ್ಟ್ ಮಾಡಿಸಿದ ಪೊಲೀಸರು. ಫಾಲಿಗ್ರಾಪ್ ಟೆಸ್ಟ್ ಮಾಡಿಸಿ ವರದಿಗೆ ಕಾದಿರುವ ಪೊಲೀಸರು.ಹೀಗಾಗಿ ಪ್ರಕರಣ ದಾಖಲಾಗಿ 11 ತಿಂಗಳು ಕಳೆದರೂ ಇನ್ನೂ ಟ್ರೆಸ್ ಆಗದ ಕಳ್ಳತನ ಪ್ರಕರಣ.

RELATED ARTICLES
- Advertisment -
Google search engine

Most Popular

Recent Comments