Thursday, August 28, 2025
HomeUncategorizedಪ್ರತಿಪಕ್ಷ ನಾಯಕರಿಗೆ ಚೀಮಾರಿ ಹಾಕಿದ ಸಿಎಂ..!

ಪ್ರತಿಪಕ್ಷ ನಾಯಕರಿಗೆ ಚೀಮಾರಿ ಹಾಕಿದ ಸಿಎಂ..!

ಗದಗ: ಗದಗ ಜಿಲ್ಲೆ ಶಿರಹಟ್ಟಿ ಪಟ್ಟಣದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ‌ ಹೇಳಿಕೆ ನೀಡಿದ್ದು, ಜನಸಂಕಲ್ಪ ಯಾತ್ರೆಗೆ ತೆರಳುವದಕ್ಕೂ ಮುನ್ನ ಮಾಧ್ಯಗಳೆದುರು ಮಾತನಾಡಿದ್ದಾರೆ.

ಸಿದ್ಧಾರಮಯ್ಯ ಮುಖ್ಯಮಂತ್ರಿ ಇದ್ದಾಗ ಜನಾಶಿರ್ವಾದ ಯಾತ್ರೆ‌ ಮಾಡಿದ್ರು.ಆದರೆ ಅವರಿಗೆ ಜನ ಆಶಿರ್ವಾದವನ್ನಂತೂ ಮಾಡ್ಲಿಲ್ಲ.  ನಮ್ಮ ಪಕ್ಷದ‌‌ ಕಾರ್ಯಕ್ರಮ ಹೇಳೋದಕ್ಕೆ ನಾವು ಜನರ ಬಳಿ ಹೋಗ್ತಿದ್ದೇವೆ. ಜನರೇ ಮಾಲಿಕರು..ಜನರ ಬಳಿ ಹೋಗಲಾರದೆ ಇನ್ಯಾರ ಬಳಿ ಹೋಗಲು‌ ಸಾಧ್ಯ. ಹಾಗಾದ್ರೆ ಅವರ‌್ಯಾಕೆ ಜನರ ಬಳಿ ಹೋಗ್ತಿದ್ದಾರೆ. ಅವರು ಯಾಕೆ ಬಸ್ ನಲ್ಲಿ ಯಾತ್ರೆ ಮಾಡ್ತಿದ್ದಾರೆ.ಹಿಂದೂ‌ ಅನ್ನುವ ಪದ ಅಶ್ಲೀಲ ಪದ‌ ಅರ್ಥೈಸುತ್ತೆ ಅನ್ನೋ ಸತೀಶ ಜಾರಕಿಹೊಳಿ ಹೇಳಿಕೆ ವಿಚಾರ, ಅವರ ಚಿಂತನೆಯಲ್ಲಿ ಹಾಗೂ ಯೋಚನೆಯಲ್ಲಿ ಹೊಲಸು ಇದೆ. ಏಳನೇ ಶತಮಾನದ ಪೂರ್ವದಲ್ಲಿ ಸ್ಥಾಪನೆಯಾಗಿರುವದು ಹಿಂದೂ ಧರ್ಮ.ಎಲ್ಲರ ನಂಬಿಕೆ ವಿಶ್ವಾಸವೇ ಹಿಂದೂ ಧರ್ಮ.ಇಂಥದ ಧರ್ಮದ ಬುನಾದಿಗೆ ಪ್ರಶ್ನೆ ಮಾಡುತ್ತಿರುವುದು ಅತ್ಯಂತ ಖಂಡನೀಯ. ಅವರ ಮನಸ್ಸಲ್ಲಿ ಹೊಲಸು ಇರೋದ್ರಿಂದ ಈ ರೀತಿ ಆಗಿದೆ. ಆಶ್ಚರ್ಯಕರ ಅಂದ್ರೆ ಕಾಂಗ್ರೆಸ್ ಪಕ್ಷ ಮೌನವಿದೆ. ದೇಶದ ತುಂಬೆಲ್ಲ ರಿಯಾಕ್ಷನ್ ಬಂದ್ರೂ ರಾಹುಲ್ ಗಾಂಧಿ ಒಂದು ಮಾತು ಆಡುತ್ತಿಲ್ಲ. ಎಲ್ಲದಕ್ಕೂ ಹೇಳಿಕೆ ಕೊಡುವ ಸಿದ್ಧರಾಮಯ್ಯ ಯಾಕೆ ಮೌನವಾಗಿದ್ದಾರೆ.ಭಾರತ ಜೋಡೋ ಯಾತ್ರೆ ನಾಟಕ ಭಾರತ ಒಡೆಯುವ ಕೆಲಸ.

ಈ ರೀತಿ ಹೇಳಿಕೆ ಭಾರತ ದೇಶದ ಇಬ್ಭಾಗ ಮಾಡುವ ಮನಸ್ಥಿತಿ ಇದೆ. ಕಾಂಗ್ರೆಸ್ ಯಾವಾಗಲೂ ಭಾರತ ತೋಡೋ ಯಾತ್ರೆ ಮಾಡಿಕೊಂಡೇ‌ ಬಂದಿದೆ. ಭಾರತ ಪಾಕಿಸ್ತಾನ ಎರೆಡು‌ ಮಾಡೋದು ಅಷ್ಟೇ ಅಲ್ಲ, ನೆಕ್ಸಲೈಟನ್ನ ಹುಟ್ಟು ಹಾಕಿದವರು ಕಾಂಗ್ರೆಸ್ ನವರು. ಭಾರತದಲ್ಲಿ ವಿಚಿರ್ತಾರ್ಧ ಶಕ್ತಿಗಳಿಗೆ ಕಾಂಗ್ರೆಸ್ ಪ್ರಚೋದನೆ ಕೊಡುತ್ತಾ ಬಂದಿದೆ. ಸತೀಶ್ ಜಾರಕಿಹೊಳಿ ಹೇಳಿಕೆ ಬಗ್ಗೆ ಕೊನೆ ಹಾಡುವ ಕಾರ್ಯಕ್ರಮ ಭಾರತೀಯ ಜನತಾ ಪಕ್ಷ ಹಾಡಲಿದೆ ಎಂದು ಹೇಳಿದ್ದಾರೆ.

RELATED ARTICLES
- Advertisment -
Google search engine

Most Popular

Recent Comments