Thursday, August 28, 2025
HomeUncategorizedಕುತೂಹಲ ಕೆರಳಿಸಿದ ಚಂದ್ರು ಸಾವಿನ ತನಿಖೆ..!

ಕುತೂಹಲ ಕೆರಳಿಸಿದ ಚಂದ್ರು ಸಾವಿನ ತನಿಖೆ..!

ಚಿಕ್ಕಮಗಳೂರು:ಶಾಸಕ ರೇಣುಕಾಚಾರ್ಯ ಸಹೋದರನ ಮಗನ ಸಾವು ಪ್ರಕರಣಕ್ಕೆ ಸಂಬಂದಿಸಿದಂತೆ, ವಿನಯ್ ಗುರೂಜಿ ಭೇಟಿಯಾಗಿ ಇಂಚಿಂಚೂ ಮಾಹಿತಿ ಕಲೆ ಹಾಕಿದ ಪೊಲೀಸರು.

ಗೌರಿಗದ್ದೆಯ ಆಶ್ರಮಕ್ಕೆ ಆಗಮಿಸಿ ಚಂದ್ರು ಭೇಟಿ ಬಗ್ಗೆ ಮಾಹಿತಿ ಪಡೆದ ದಾವಣಗೆರೆ ಜಿಲ್ಲೆಯ ಚನ್ನಗಿರಿ ಪೊಲೀಸರು ಚಿಕ್ಕಮಗಳೂರು ಜಿಲ್ಲೆ, ಕೊಪ್ಪ ತಾಲೂಕಿನ ಗೌರಿಗದ್ದೆ. ಚಂದ್ರು ಯಾವ ವಿಚಾರವನ್ನು ನಿಮ್ಮ ಜೊತೆ ಮಾತನಾಡಿದರು.? ಭೇಟಿ ವೇಳೆ ಏನಾದ್ರೂ ಸಮಸ್ಯೆಯನ್ನ ನಿಮ್ಮೊಂದಿಗೆ ಹೇಳಿಕೊಂಡಿದ್ರಾ? ಎಂಬ ಪ್ರಶ್ನೆ ಮೂಡುತ್ತಿದೆ.

ಚಂದ್ರು, ಕಿರಣ್ ಹಾಗೂ ನಿಮ್ಮ ಮಧ್ಯೆ ಏನಾದರೂ ಚರ್ಚೆ ನಡೆಯಿತಾ, ಈ ಎಲ್ಲಾ ಪ್ರಶ್ನೆಗಳನ್ನ ವಿನಯ್ ಗುರೂಜಿ ಬಳಿ ಕೇಳಿದ ಪೊಲೀಸರು, ಚಂದ್ರು ಆಶ್ರಮದ ಭಕ್ತ, ಪ್ರತಿಬಾರಿಯಂತೆ ಈ ಬಾರಿಯೂ ಬಂದು ಹೋಗಿದ್ದಾನೆ. ತಡವಾಗಿ ಬಂದಿದ್ದರಿಂದ ಆತನ ಬಳಿ ಹೆಚ್ಚೆನೂ ನಾನು ಮಾತನಾಡಿಲ್ಲ. ತಡವಾಗಿ ಬಂದಿದ್ದಕ್ಕೆ ಇದು ಆಶ್ರಮಕ್ಕೆ ಭೇಟಿ ನೀಡುವ ಸಮಯವಾ ಎಂದು ಕೇಳಿದ್ದೇನೆ.

ಬೇಗ ಹೋಗಿ, ಜಾಗೃತೆಯಿಂದ ಹೋಗಿ ಎಂದು ಇಬ್ಬರನ್ನ ಕಳುಹಿಸಿದ್ದೇನೆ. ಆಗಿದ್ದು ಇಷ್ಟೇ, ಆ ಬಳಿಕ ನಡೆದ ಘಟನೆ ಬಗ್ಗೆ ನನಗೆ ನೋವಿದೆ ಎಂದು ಗುರೂಜಿ ತಿಳಿಸಿದ್ದಾರೆ. ಆಶ್ರಮದ ಸಿಬ್ಬಂದಿಗಳ ಜೊತೆಯೂ ಮಾಹಿತಿ ಪಡೆದ ಪೊಲೀಸರು, ನಿನ್ನೆ ಏಳು ಗಂಟೆ ವೇಳೆಗೆ ಆಶ್ರಮಕ್ಕೆ ಭೇಟಿ ನೀಡಿದ ತನಿಖಾ ತಂಡ.

RELATED ARTICLES
- Advertisment -
Google search engine

Most Popular

Recent Comments