Monday, August 25, 2025
Google search engine
HomeUncategorizedಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ಸಿಎಂ..!

ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ಸಿಎಂ..!

ಉಡುಪಿ: ಉಡುಪಿ ಜಿಲ್ಲೆಯ ಕಾಪುವಿನಲ್ಲಿ ಜನಸಂಕಲ್ಪ ಸಮಾವೇಶ ಹಿನ್ನೆಲೆ, ಸಮಾವೇಶಕ್ಕೆ ಹೆಲಿಕಾಪ್ಟರ್​ನಲ್ಲಿ ಆಗಮಿಸಿದ ಸಿಎಂ ಬೊಮ್ಮಾಯಿ ಹಾಗೂ ಮಾಜಿ ಸಿಎಂ ಯಡಿಯೂರಪ್ಪ.

ಇನ್ನು ಸಮಾವೇಶದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿದ್ದು, ಜನ ಸಂಕಲ್ಪ ಸಮಾವೇಶ ಎರಡು ಸುತ್ತಿನಲ್ಲಿ ನಡೆಯುತ್ತದೆ. ಕರಾವಳಿಯಲ್ಲಿ ಕಾಪುವಿನಿಂದ ಆರಂಭ ಆಗಿದೆ. ನಾಳೆಯಿಂದ ಗದಗ, ಹಾವೇರಿ, ಬೆಳಗಾವಿಯಲ್ಲಿ ನಡೆಯಲಿದೆ
ಪ್ರತಿಯೊಂದು ಕ್ಷೇತ್ರಕ್ಕೆ ಭೇಟಿ ನೀಡಿ ಪಕ್ಷ ಸಂಘಟನೆ ಮಾಡುತ್ತೇವೆ.

ಜನರಿಂದ ನಮಗೆ ಅಭೂತಪೂರ್ವ ಈಗಾಗಲೇ ಬೆಂಬಲ ಸಿಕ್ಕಿದೆ, ಕಾರ್ಯಕರ್ತರಲ್ಲಿ ಸಮಾವೇಶ ಉತ್ಸಾಹ ಮೂಡಿಸಿದೆ. ಮುಂದೆ ಎರಡು ದಿಕ್ಕಿನಿಂದ ಉತ್ತರ, ದಕ್ಷಿಣ ಯಾತ್ರೆ ಆರಂಭ ಮಾಡುತ್ತೇವೆ.  ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವ ಬಗ್ಗೆ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಮಾತನಾಡಿದ ಸಿಎಂ ರವರು, ಸಿದ್ದರಾಮಯ್ಯ ಭ್ರಮೆಯಲ್ಲಿ ಇದ್ದಾರೆ. ಹಿಂದೆ ಆಡಳಿತ ಇತ್ತು, ಆಗಲೂ ಇದನ್ನೇ ಹೇಳ್ತಾಯಿದ್ದರು.  ಯಡಿಯೂರಪ್ಪ ಕುಮಾರಸ್ವಾಮಿ ಮತ್ತೆ ಸಿಎಂ ಆಗಲ್ಲ ಅಂತ ಅಪ್ಪನ ಆಣೆ ಮಾಡಿದ್ದರು.ಆಗ ಆಡಳಿತದಲ್ಲಿದ್ದರೂ ಮತ್ತೆ ಸೋತಿದ್ದಾರೆ. ಯಡಿಯೂರಪ್ಪ ಕುಮಾರಸ್ವಾಮಿ ಮತ್ತೆ ಮುಖ್ಯಮಂತ್ರಿ ಆಗಿದ್ದಾರೆ, ಸಿದ್ದರಾಮಯ್ಯ ಹೇಳಿದ್ದು ಯಾವತ್ತೂ ಆಗಿಲ್ಲ.

ಬಿಜೆಪಿಯಂತ ಭ್ರಷ್ಟ ಸರ್ಕಾರ ನೋಡಿಲ್ಲ ಎಂಬ ಖರ್ಗೆ ಹೇಳಿಕೆ, 50 ವರ್ಷ ಅವರು ಪೂರ್ಣ ಭ್ರಷ್ಟಾಚಾರ ಮಾಡಿದ್ದಾರೆ. ಅವರ ಕಾಲದಲ್ಲಿ ಆದ ಭ್ರಷ್ಟಾಚಾರ ಯಾವತ್ತೂ ಆಗಿಲ್ಲ. ಸುಳ್ಳು ಅಂದ್ರೆ ಕಾಂಗ್ರೆಸ್, ಕಾಂಗ್ರೆಸ್ ಆಂದ್ರೆ ಸುಳ್ಳು. ಕಾಂಗ್ರೆಸ್ ಭ್ರಷ್ಟಾಚಾರದ ಕುರಿತು ತನಿಖೆ ನಡೆಸುತ್ತೇವೆ ಎಮದು ಮಾತನಾಡಿದರು.

RELATED ARTICLES
- Advertisment -
Google search engine

Most Popular

Recent Comments