Wednesday, August 27, 2025
HomeUncategorized'ಗಂಧದಗುಡಿ' ವೀಕ್ಷಣೆಗೆ ಅಭಿಮಾನಿಗಳಿಗೆ ಆಫರ್ ನೀಡಿದ ಅಶ್ವಿನಿ ಪುನೀತ್ ರಾಜ್​ಕುಮಾರ್​

‘ಗಂಧದಗುಡಿ’ ವೀಕ್ಷಣೆಗೆ ಅಭಿಮಾನಿಗಳಿಗೆ ಆಫರ್ ನೀಡಿದ ಅಶ್ವಿನಿ ಪುನೀತ್ ರಾಜ್​ಕುಮಾರ್​

ಬೆಂಗಳೂರು: ದಿವಂಗತ ಪುನೀತ್​ ರಾಜ್​ಕುಮಾರ್​ ನಟನೆಯ​ ‘ಗಂಧದಗುಡಿ’ ಸಿನಿಮಾಗೆ ಅಶ್ವಿನಿ ಪುನೀತ್​ ರಾಜ್​ಕುಮಾರ್​ ಅವರು ಅಭಿಮಾನಿಗಳಿಗೆ ಗೂಡ್​ ನ್ಯೂಸ್​ ನೀಡಿದ್ದಾರೆ.

ನಾಳೆಯಿಂದ (ನ.7) ಗುರುವಾರ (ನ.10) ವರೆಗೆ ಗಂಧದ ಗುಡಿ ಸಿನಿಮಾ ಥೇಯಟರ್​ನಲ್ಲಿ ವಿಕ್ಷೀಸುವವರಿಗೆ ಟಿಕೆಟ್ ದರದಲ್ಲಿ ವಿನಾಯಿತಿ ನೀಡಿದ್ದಾರೆ.

ಸಿಂಗಲ್ ಸ್ಕ್ರೀನ್ ಥಿಯೇಟರ್’ಗಳಲ್ಲಿ ಟಿಕೆಟ್ ದರ ಕೇವಲ 56 ರೂ, ಮಲ್ಟಿಪ್ಲೆಕ್ಸ್ ಗಳಲ್ಲಿ ಟಿಕೆಟ್ ದರ 112 ರೂ ಗಂಧದ ಗುಡಿ ಸಿನಿಮಾಗೆ ಇರಲಿದೆ ಎಂದು ಟಿಕೆಟ್ ದರದಲ್ಲಿ ವಿನಾಯಿತಿ ನೀಡಿದ ಬಗ್ಗೆ ಅಶ್ವಿನಿ ಪುನೀತ್​ ರಾಜ್​ಕುಮಾರ್​ ಅವರು ಹೇಳಿಕೊಂಡಿದ್ದಾರೆ.

ನವೆಂಬರ್ 7 ರಿಂದ ನವೆಂಬರ್ 10ರ ವರೆಗೆ ಒಟ್ಟು 4 ದಿನ ರಾಜ್ಯದ ಎಲ್ಲಾ ಚಿತ್ರಮಂದಿರಗಳಿಗೂ ಇದೇ ಟಿಕೆಟ್ ದರ ಅನ್ವಯವಾಗಲಿದೆ. ವಿತರಕರು, ಪ್ರದರ್ಶಕರು ಹಾಗೂ ಚಿತ್ರತಂಡದ ಜೊತೆ ಚರ್ಚಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಪು ಪತ್ನಿ ಅಶ್ವಿನಿ ಪುನೀತ್ ರಾಜ್’ಕುಮಾರ್ ಅವರು ಘೋಷಿಸಿದ್ದಾರೆ.

ಇದೇ ವೇಳೆ ನಮ್ಮ ಮಕ್ಕಳ ನಾಳೆಗಳಿಗಾಗಿ ಕಾಡನ್ನು ಸಂರಕ್ಷಿಸೋಣ. ಗಂಧದಗುಡಿಯನ್ನು ತೋರಿಸೋಣ ಎಂದು ಅಶ್ವಿನಿ ಅವರು ತಮ್ಮ ಮಹತ್ವದ ನಿರ್ಧಾರವನ್ನ ಹೇಳಿದ್ದಾರೆ.

RELATED ARTICLES
- Advertisment -
Google search engine

Most Popular

Recent Comments