Tuesday, August 26, 2025
Google search engine
HomeUncategorizedಗುಂಡಿನ ದಾಳಿಯಲ್ಲಿ ಶಿವಸೇನೆ ಮುಖಂಡನ ಹತ್ಯೆ

ಗುಂಡಿನ ದಾಳಿಯಲ್ಲಿ ಶಿವಸೇನೆ ಮುಖಂಡನ ಹತ್ಯೆ

ಪಂಜಾಬ್​​: ಇಂದು ನಡೆದ ಪ್ರತಿಭಟನೆ ವೇಳೆ ಶಿವಸೇನೆ ಮುಖಂಡ ಸುಧೀರ್ ಸೂರಿ ಅವರನ್ನ ಅನಾಮಧೇಯ ವ್ಯಕ್ತಿ ಅಮೃತಸರದಲ್ಲಿ ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ.

ದೇವಾಲಯದ ಆವರಣದ ಹೊರಗೆ ಕಸದ ಬುಟ್ಟಿಯಲ್ಲಿ ಕೆಲವು ಒಡೆದ ವಿಗ್ರಹಗಳು ಪತ್ತೆಯಾದ ನಂತರ ಶಿವಸೇನೆ ಮುಖಂಡರು ದೇವಾಲಯದ ಅಧಿಕಾರಿಗಳ ವಿರುದ್ಧ ಧರಣಿ ನಡೆಸುತ್ತಿದ್ದರು. ಈ ವೇಳೆ ಶಿವಸೇನೆ ನಾಯಕರು ಜಮಾಯಿಸಿದ ದೇವಸ್ಥಾನದ ಹೊರಗೆ ಈ ಘಟನೆ ನಡೆದಿದೆ. ಅಲ್ಲಿ ನೆರೆದಿದ್ದ ಜನರ ಗುಂಪಿನಿಂದ ಶಿವಸೇನೆ ಮುಖಂಡ ಸುಧೀರ್ ಸೂರಿ ದೇಹಕ್ಕೆ ಗುಂಡು ಹಾರಿಸಿದ್ದಾರೆ ಎಂದು ವರದಿಯಾಗಿದೆ.

ಎರಡು ದಿನಗಳ ಅವಧಿಯಲ್ಲಿ ಶಿವಸೇನೆ ನಾಯಕರೊಬ್ಬರ ಮೇಲೆ ನಡೆದ ಎರಡನೇ ದಾಳಿ ಇದಾಗಿದೆ. ಗುರುವಾರ ಮುಂಜಾನೆ, ಟಿಬ್ಬಾ ರಸ್ತೆಯಲ್ಲಿರುವ ಗ್ರೆವಾಲ್ ಕಾಲೋನಿಯಲ್ಲಿರುವ ಪಂಜಾಬ್ ಶಿವಸೇನೆ ನಾಯಕ ಅಶ್ವನಿ ಚೋಪ್ರಾ ಅವರ ಮನೆಯ ಬಳಿ ಇಬ್ಬರು ಬೈಸಿಕಲ್‌ನಲ್ಲಿ ಬಂದ ವ್ಯಕ್ತಿಗಳು ಗುಂಡು ಹಾರಿಸಿದ್ದಾರೆ.

ದಾಳಿಕೋರರು ಪಕ್ಕದ ಮನೆಯ ಹೊರಗೆ ಅಳವಡಿಸಲಾಗಿದ್ದ ಕ್ಲೋಸ್ ಸರ್ಕ್ಯೂಟ್ ಟೆಲಿವಿಷನ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಇನ್ನು ಸಿಖ್ಖರ್​ ವಿರುದ್ಧ ಸುಧೀರ್ ಸೂರಿ ಅವಹೇಳನಕಾರಿಯಾಗಿ ಮಾತನಾಡುತ್ತಿದ್ದ ಹೀಗಾಗಿ ಹತ್ಯೆ ಮಾಡಲಾಗಿದೆ ಎಂದು ವರದಿಯಾಗಿವೆ.

RELATED ARTICLES
- Advertisment -
Google search engine

Most Popular

Recent Comments