Monday, August 25, 2025
Google search engine
HomeUncategorizedಶಂಕ್ರಣ್ಣ ಕನಸು, ಅಪ್ಪು ಮನಸಿನ ಬಗ್ಗೆ ಅರುಂಧತಿ ಮಾತು

ಶಂಕ್ರಣ್ಣ ಕನಸು, ಅಪ್ಪು ಮನಸಿನ ಬಗ್ಗೆ ಅರುಂಧತಿ ಮಾತು

ವ್ಯಕ್ತಿ ನಮ್ಮಿಂದ ದೂರಾದರೂ, ವ್ಯಕ್ತಿತ್ವ ಎಂದಿಗೂ ಅಳಿಯಬಾರದು ಅನ್ನೋ ಗಾದೆ ಮಾತಿದೆ. ಕಿರಿ ವಯಸ್ಸಿನಲ್ಲೇ ನಮ್ಮಿಂದ ದೂರಾದ ಧೃವತಾರೆಗಳಲ್ಲಿ ಶಂಕರ್​ ನಾಗ್​​​​​ ಸೇರಿದಂತೆ ಪುನೀತ್​ ಕೂಡ ಒಬ್ಬರು. ಇಂದಿಗೂ ಉಸಿರಾಡುತ್ತಿರೋ ಶಂಕರ್​ನಾಗ್​​​​​ ಹಾಗೂ ಅಪ್ಪು ಬಗ್ಗೆ ಅರುಂಧತಿ ನಾಗ್​ ಪವರ್​ ಟಿವಿ ಜೊತೆ ಎಕ್ಸ್​​ಕ್ಲೂಸಿವ್​ ಆಗಿ ಹಂಚಿಕೊಂಡ್ರು. ಯೆಸ್​​​.. ನೀವು ಎಲ್ಲೂ ಕೇಳಿರದ ಕೆಲವು ವಿಷ್ಯಗಳನ್ನ ನಾವ್​ ತಿಳಿಸ್ತೀವಿ. ನೀವೇ ಓದಿ.

  • ಅಭಿಮಾನಿಗಳಿಗೆ ಅವ್ರು ಮೋಸ ಮಾಡಿಬಿಟ್ರು ಅಂದಿದ್ಯಾಕೆ..?

ಶಂಕರ್​​ನಾಗ್​​​. ಇದು ಕೇವಲ ಹೆಸರಲ್ಲ. ಕನ್ನಡ ಸಿನಿಲೋಕದಲ್ಲಿ ಚಿರಸ್ಥಾಯಿಯಾಗಿ ನೆಲೆ ನಿಂತಿರುವ ಅಗಾಧ ಪ್ರತಿಭೆ. ಸೂರ್ಯನಷ್ಟು ಪ್ರಜ್ವಲತೆ, ಚಾಣಕ್ಯನಷ್ಟು ಸರಿಸಾಟಿಯಾಗದ ಪ್ರತಿಭೆ ಶಂಕರ್​ನಾಗ್​​​ ಅವರದ್ದು. ಅಂದು, ಕನ್ನಡ ಸಿನಿಲೋಕದಲ್ಲಿ ಶಂಕರ್​ನಾಗ್​ ಪರ್ವ ಶುರುವಾಗಿತ್ತು. ಆದ್ರೆ, ಕ್ರೂರ ವಿಧಿಗೆ ಸಿಕ್ಕು ಅಪಾರ ಅಭಿಮಾನಿಗಳನ್ನು ಚಿಕ್ಕ ವಯಸ್ಸಿನಲ್ಲೇ ಅಗಲಿ ದೂರಾಗಿದ್ರು. ಅಪ್ಪು, ಶಂಕರ್​​ ಅಗಲಿಕೆಯ ಬಗ್ಗೆ ಅರುಂಧತಿ ಮೌನ ಮುರಿದ್ರು.

ರಂಗ ಶಂಕರ ನಾಟಕ ಅಕಾಡೆಮಿಯಲ್ಲಿ ಬ್ಯುಸಿಯಾಗಿರೋ ಅರುಂಧತಿ ನಾಗ್​​ ಬಹುದಿನಗಳ ನಂತ್ರ ಪವರ್​ ಟಿವಿ ಮಾಧ್ಯಮಕ್ಕೆ ಎದುರಾಗಿದ್ರು. ಶಂಕರ್​​​ಗೆ ಕನ್ನಡ ನಾಡು ನುಡಿಯ ಬಗ್ಗೆ ಇದ್ದ ತುಡಿತದ ಬಗ್ಗೆ ಹಳೆ ನೆಪುಗಳನ್ನು ಮೆಲುಕು ಹಾಕಿದ್ರು. ಮೆಟ್ರೋ ಆಗ್ಬೇಕು ಅಂತಾ ಶಂಕರ್​ ತೆಗೆದುಕೊಂಡ ರಿಸ್ಕ್​ ಬಗ್ಗೆಯೂ ಹೇಳಿದ್ರು.

ಜೋಗಿ ಸಿನಿಮಾದಲ್ಲಿ ಹ್ಯಾಟ್ರಿಕ್​​ ಹೀರೋ ಶಿವಣ್ಣನ ತಾಯಿಯಾಗಿ ನಟಿಸಿದ್ದ ಅರುಂಧತಿ ಪ್ರಾತ್ರವನ್ನು ಇಂದಿಗೂ ಮರೆಯೋಕೆ ಸಾಧವಿಲ್ಲ. ಮತ್ತೆ ತಾಯಿ ಪಾತ್ರಗಳಲ್ಲಿ ನಟಿಸ್ತೀರಾ ಎಂಬ ಪ್ರಶ್ನೆಗೆ ಅರುಂಧತಿ ತಮ್ಮದೇ ಧಾಟಿಯಲ್ಲಿ ಉತ್ತರ ಕೊಟ್ರು.

ಕಿರಿ ವಯಸ್ಸಿನಲ್ಲಿ ಅಗಾಧ ಸಾಧನೆ ಮಾಡಿ ಕೋಟಿ ಕೋಟಿ ಹೃದಯಗಳ ಮನಸ್ಸು ಗೆದ್ದ ಅನರ್ಘ್ಯ ರತ್ನಗಳೆಂದ್ರೆ ಶಂಕರ್​​ ನಾಗ್​ ಹಾಗೂ ಪವರ್​ ಸ್ಟಾರ್​ ಪುನೀತ್​ ರಾಜ್​​ಕುಮಾರ್​​​. ಅಪ್ಪು ಬಗ್ಗೆ ಅರುಂಧತಿ ಮನಸಿನ ಮಾತು ಬಿಚ್ಚಿಟ್ರು

ಇಡೀ ಕರುನಾಡು ಕನ್ನಡ ರಾಜ್ಯೋತ್ಸವದ ಸಡಗರ ಸಂಭ್ರಮದಲ್ಲಿದೆ. ಈ ನಡುವೆ ಕನ್ನಡ ನೆಲದ ಕೀರ್ತಿ ಪತಾಕೆಯನ್ನು ಮುಗಿಲೆತ್ತರಕ್ಕೆ ಹಾರಿಸಿದವರಲ್ಲಿ ಶಂಕರ್​ ನಾಗ್​ ಕೂಡ ಒಬ್ಬರೂ. ಜತೆಗಿರದಿದ್ದರೂ ಅವರ ಹೆಜ್ಜೆ ಗುರುತುಗಳು ಎಂದಿಗೂ ಅಳಿಯದೆ ಉಳಿದಿವೆ.

ರಾಕೇಶ್​ ಆರುಂಡಿ, ಫಿಲ್ಮ್​ ಬ್ಯುರೋ, ಪವರ್ ಟಿವಿ

RELATED ARTICLES
- Advertisment -
Google search engine

Most Popular

Recent Comments