Wednesday, August 27, 2025
HomeUncategorizedಅಜಯ್ ಕುಮಾರ್ ದಕ್ಷಿಣ ಕಮಾಂಡ್‌ನ ಚೀಫ್​​

ಅಜಯ್ ಕುಮಾರ್ ದಕ್ಷಿಣ ಕಮಾಂಡ್‌ನ ಚೀಫ್​​

ಲೆಫ್ಟಿನೆಂಟ್ ಜನರಲ್ ಅಜಯ್ ಕುಮಾರ್ ಸಿಂಗ್ ಅವರು ಭಾರತೀಯ ಸೇನೆಯ ದಕ್ಷಿಣ ಕಮಾಂಡ್‌ನ ಜನರಲ್ ಆಫೀಸ್ ಕಮಾಂಡಿಂಗ್-ಇನ್-ಚೀಫ್ ಆಗಿ ಅಧಿಕಾರ ವಹಿಸಿಕೊಂಡರು.

ಅಧಿಕಾರ ವಹಿಸಿಕೊಂಡ ನಂತರ, ಅವರು ಪುಣೆಯ ಸದರ್ನ್ ಕಮಾಂಡ್ ವಾರ್ ಮೆಮೋರಿಯಲ್‌ನಲ್ಲಿ ಪುಷ್ಪಗುಚ್ಛವನ್ನು ಹಾಕುವ ಮೂಲಕ ಮಡಿದ ಸೈನಿಕರಿಗೆ ಗೌರವ ಸಲ್ಲಿಸಿದರು. ಅಜಯ್ ಕುಮಾರ್ ಸಿಂಗ್ ಅವರು ಪುಣೆಯ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಮತ್ತು ಡೆಹ್ರಾಡೂನ್‌ನ ಇಂಡಿಯನ್ ಮಿಲಿಟರಿ ಅಕಾಡೆಮಿಯ ಹಳೆಯ ವಿದ್ಯಾರ್ಥಿ. ಅವರನ್ನು ಡಿಸೆಂಬರ್ 1984ರಲ್ಲಿ ಹನ್ನೊಂದನೇ ಗೂರ್ಖಾ ರೈಫಲ್ಸ್‌ಗೆ ನಿಯೋಜಿಸಲಾಯಿತು.

ಸಿಂಗ್ ಅವರು ಆರಂಭದಲ್ಲಿ ಸ್ಟ್ರೈಕ್ ಕಾರ್ಪ್ಸ್‌ನ ಭಾಗವಾಗಿ ಮತ್ತು ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ನಿಯಂತ್ರಣ ರೇಖೆಯಲ್ಲಿ ಬೆಟಾಲಿಯನ್‌ಗೆ ಅಧಿಕಾರಿಯಾಗಿ ಮತ್ತು ಕಾಶ್ಮೀರ ಕಣಿವೆಯಲ್ಲಿ ಮುಂಚೂಣಿಯಲ್ಲಿರುವ ಬಂಡಾಯ ಪಡೆ ಮತ್ತು ಈಶಾನ್ಯದಲ್ಲಿ ತ್ರಿಶಕ್ತಿ ಕಾರ್ಪ್ಸ್‌ಗೆ ಕಮಾಂಡರ್ ಆಗಿದ್ದರು.

RELATED ARTICLES
- Advertisment -
Google search engine

Most Popular

Recent Comments