Sunday, August 24, 2025
Google search engine
HomeUncategorizedಓಲಾ ಉಬರ್ ಗೆ ಸೆಡ್ಡು ಹೊಡೆಯಲು ರೆಡಿಯಾದ ಆಟೋ ಡ್ರೈವರ್ಸ್

ಓಲಾ ಉಬರ್ ಗೆ ಸೆಡ್ಡು ಹೊಡೆಯಲು ರೆಡಿಯಾದ ಆಟೋ ಡ್ರೈವರ್ಸ್

ಬೆಂಗಳೂರು : ಓಲಾ, ಉಬರ್ ಮಾದರಿಯಲ್ಲೇ ‘ನಮ್ಮ ಯಾತ್ರಿ’ ಆಪ್ ಕಾರ್ಯನಿರ್ವಹಿಸಲಿದ್ದು, ಕನ್ನಡ ರಾಜ್ಯೋತ್ಸವ ಹಿನ್ನಲೆ ಪ್ರಾಯೋಗಿಕವಾಗಿ ಆಪ್​​ಗೆ ಚಾಲನೆ ನೀಡಲಿದ್ದಾರೆ.

ನಗರದಲ್ಲಿ ಖಾಸಗಿ ಸಂಸ್ಥೆಯಿಂದ ತಾಂತ್ರಿಕ ಸಹಾಯ ಪಡೆದು ಆಪ್ ರಚಿಸಿದ ಆಟೋ ಡ್ರೈವರ್ಸ್, ರಾಜ್ಯ ಸರ್ಕಾರ ನಿಗದಿ ಮಾಡಿರುವಂತೆ ಮೊದಲು 30 ನಂತರ ಪ್ರತಿ ಕಿ.ಮೀ ಗೆ 15 ರೂಪಾಯಿ ನಿಗದಿಯಾಗಲಿದೆ. ಆಟೋ ಮನೆವರೆಗೆ ಪಿಕಪ್ ಗೆ ಬರುವುದರಿಂದ ಹೆಚ್ಚುವರಿ ಶುಲ್ಕವಾಗಿ ಹತ್ತು ರೂಪಾಯಿ ಪಡೆಯಲಿರುವ ಆಟೋ ಚಾಲಕರು, ನಮ್ಮ ಯಾತ್ರಿ ಆಪ್ ನಲ್ಲಿ 2 ಕಿ.ಮೀ ವರೆಗೆ 40 ರೂಪಾಯಿ ಪಡೆಯಲು ಆಟೋ ಡ್ರೈವರ್ಸ್ ತೀರ್ಮಾನಿಸಿದ್ದಾರೆ.

ಈಗಾಗಲೇ 20 ಸಾವಿರಕ್ಕೂ ಹೆಚ್ಚು ಆಟೋ ಡ್ರೈವರ್ ಗಳಿಂದ ನಮ್ಮ ಯಾತ್ರಿ ಆಪ್ ನಲ್ಲಿ ನೋಂದಣಿಯಾಗಿದ್ದು, ಮಾಧ್ಯವರ್ತಿ ಇಲ್ಲದೆ ನಮ್ಮ ಯಾತ್ರಿ ಆಪ್ ಕಾರ್ಯನಿರ್ವಹಿಸಲಿದೆ. ಕಳೆದ 2 ವಾರದಿಂದ ಪ್ರಯೋಗಿಕವಾಗಿ ಆಪ್ ಬಳಸಿ ಬೆಂಗಳೂರಿನಾದ್ಯಂತ ಓಡಾಟ ನಡೆಸಲಾಗುತ್ತಿದೆ. ಇಲ್ಲಿಯವರೆಗೆ ಸುಮಾರು 15 ಸಾವಿರಕ್ಕೂ ಹೆಚ್ಚು ಜನ ನಮ್ಮ ಯಾತ್ರಿ ಆಪ್ ಡೌನ್‌ಲೋಡ್ ಮಾಡಿಕೊಂಡಿದ್ದಾರೆ. ನಮ್ಮ ಯಾತ್ರಿ ಆಪ್ ಡೌನ್ಲೋಡ್ ಮಾಡುವುದು ಕೂಡ ಸುಲಭವಾಗಿದೆ. ಹೆಸರು , ಇ- ಮೇಲ್ ಐಡಿ ಹಾಗು ಪೋನ್ ನಂಬರ್ ಹಾಕಿದ್ರೆ ಸಾಕು ಆಟೋ ಬುಕ್ ಮಾಡಿಕೊಳ್ಳಬಹುದು ಎಂದು ಪವರ್ ಟಿವಿಗೆ ಆಟೋ ಚಾಲಕರ ಸಂಘದ ರುದ್ರ ಮೂರ್ತಿ ಹೇಳಿದರು.

RELATED ARTICLES
- Advertisment -
Google search engine

Most Popular

Recent Comments