Saturday, August 30, 2025
HomeUncategorizedಸ್ಯಾಟಲೈಟ್ ಪೋನ್ ಆಕ್ಟಿವ್ ಬಗ್ಗೆ ಪಶ್ಚಿಮ ವಲಯ ಕಮಾಂಡರ್ ಸ್ಪಷ್ಟನೆ

ಸ್ಯಾಟಲೈಟ್ ಪೋನ್ ಆಕ್ಟಿವ್ ಬಗ್ಗೆ ಪಶ್ಚಿಮ ವಲಯ ಕಮಾಂಡರ್ ಸ್ಪಷ್ಟನೆ

ಉತ್ತರಕನ್ನಡ; ಜಿಲ್ಲೆಯ ಕರಾವಳಿ ಭಾಗದಲ್ಲಿ ಈ ಹಿಂದಿನಿಂದಲ್ಲೂ ಸ್ಯಾಟಲೈಟ್ ಪೋನ್ ಆಕ್ಟಿವ್ ಆಗಿದ್ದು, ಗುಪ್ತದಳ ಹಾಗೂ ಸ್ಥಳೀಯ ಪೊಲೀಸರಿಗೆ ತಲೆನೋವಾಗಿದೆ.

ಈ ಬಗ್ಗೆ ಮಾದ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಭಾರತೀಯ ತಟರಕ್ಷಕ ಪಡೆಯ ಪಶ್ಚಿಮ ವಲಯ ಕಮಾಂಡರ್ ಮನೋಜ್ ಬಾಡ್ಕರ್ ತೂರಾಯಿ ಸ್ಯಾಟಲೈಟ್ ಪೋನ್ ಗಳನ್ನು ಎಲ್ಲಾ ದೇಶದಲ್ಲಿ ಉಪಯೋಗಿಸಲು ಅವಕಾಶವಿದೆ. ಆದ್ರೆ ನಮ್ಮ ಭಾರತದಲ್ಲಿ ಅದನ್ನ ನಿಷೇಧಿಸಲಾಗಿದೆ.

ಹೀಗಾಗಿ ವಿದೇಶದಿಂದ ಬಂದ ಹಡಗುಗಳು ಭಾರತದ ಗಡಿ ಪ್ರವೇಶಿಸಿದ ನಂತರ ಅದನ್ನ ಸೀಲ್ಡ್ ಮಾಡಬೇಕು. ಆದ್ರೆ‌ ಕೆಲವು ಬಾರಿ ಗೊತ್ತಿಲ್ಲದೇ ಬಳಕೆ‌ ಮಾಡುತ್ತಿದ್ದಾರೆ. ಇಂತಹ ಐದಕ್ಕೂ ಹೆಚ್ಚು ಸ್ಯಾಟಲೈಟ್ ಪೋನ್ ಗಳನ್ನ ವಶಕ್ಕೆ ಪಡೆಯಲಾಗಿದೆ. ಅದರಲ್ಲೂ ಕರಾವಳಿ ಪ್ರದೇಶದಲ್ಲಿ (ರೇಡಾರ್) ಪ್ರತಿ ಮೈಲುಗಳಲ್ಲಿ ಹಾಕಲಾಗಿದೆ. ಇದರ ಜೊತೆಗೆ ಕ್ಯಾಮರಾ ಸಹ ಅಳವಡಿಸಲಾಗಿದೆ. ಇನ್ನೂ ಅಂಕೋಲಾದ ಬೇಲಿಕೇರಿ ಬಂದರಿನಲ್ಲಿ ರೇಡಾರ್ ಹಾಕಲಾಗುವುದು ಎಂದಿದ್ದಾರೆ.

RELATED ARTICLES
- Advertisment -
Google search engine

Most Popular

Recent Comments