Thursday, August 28, 2025
HomeUncategorizedಲೇಟ್ ಆದ್ರೂ ಲೇಟೆಸ್ಟ್ ಆಗಿರಲಿದೆ ಯಶ್ ನೆಕ್ಸ್ಟ್ ಪ್ರಾಜೆಕ್ಟ್..!

ಲೇಟ್ ಆದ್ರೂ ಲೇಟೆಸ್ಟ್ ಆಗಿರಲಿದೆ ಯಶ್ ನೆಕ್ಸ್ಟ್ ಪ್ರಾಜೆಕ್ಟ್..!

ರಾಕಿಭಾಯ್ ಯಶ್ ಮುಂದಿನ ಸಿನಿಮಾ ಇನ್ನೂ ನಿಗೂಢ. ವಿಶ್ವವೇ ಕನ್ನಡದತ್ತ ತಿರುಗಿ ನೋಡುವಂತೆ ಮಾಡಿದ ರಣಧೀರನ ಹೆಜ್ಜೆಯ ಬಗ್ಗೆ ಇನ್ನಿಲ್ಲದ ಚರ್ಚೆಗಳಾಗ್ತಿವೆ. ಆದ್ರೀಗ ಪವರ್ ಟಿವಿ ಖಚಿತ ಪಡಿಸ್ತಿದೆ 2023ರ ಜನವರಿ 8ನೇ ತಾರೀಖ್ ವರೆಗೂ ಅನೌನ್ಸ್ ಆಗ್ತಿಲ್ಲ ನ್ಯೂ ಪ್ರಾಜೆಕ್ಟ್. ಅದ್ಯಾಕೆ ಏನು ಎತ್ತ ಅನ್ನೋದ್ರ ಇನ್​ಸೈಡ್ ಸ್ಟೋರಿ ನಿಮಗಾಗಿ.

  • 2023ರ ವರೆಗೂ ಅನೌನ್ಸ್ ಆಗಲ್ಲ ರಾಕಿಭಾಯ್ ನಿರ್ಣಯ
  • ಜನವರಿ 8ಕ್ಕೆ ಸಿಗಲಿದೆ ನಿರೀಕ್ಷೆಗೂ ಮೀರಿದ ಬಿಗ್ ಸರ್​ಪ್ರೈಸ್

ಒಂದೇ ಒಂದು ಸಿನಿಮಾದಿಂದ ಇಡೀ ವಿಶ್ವ ಸಿನಿದುನಿಯಾನೇ ಸಲಾಂ ರಾಕಿಭಾಯ್ ಅನ್ನೋ ಹಾಗೆ ಮಾಡಿಬಿಟ್ರು ಹೆಮ್ಮೆಯ ಕನ್ನಡಿಗ, ನ್ಯಾಷನಲ್ ಸ್ಟಾರ್ ಯಶ್. ಅವ್ರ ದೂರದೃಷ್ಠಿ, ಅದಕ್ಕಾಗಿ ಹಾಕೋ ಎಫರ್ಟ್​, ಪ್ಲಾನಿಂಗ್, ಎಕ್ಸಿಕ್ಯೂಷನ್ ಎಲ್ಲವೂ ಪರ್ಫೆಕ್ಟ್ ಆಗಿರಲಿವೆ. ಹಾಗಾಗಿಯೇ ಸ್ಯಾಂಡಲ್​ವುಡ್​ನ ಮಿಸ್ಟರ್ ಪರ್ಫೆಕ್ಟ್ ಆಗಿ ರಾರಾಜಿಸ್ತಿದ್ದಾರೆ ರಾಕಿಭಾಯ್.

ಕೆಜಿಎಫ್ ಚಾಪ್ಟರ್-2 ಬಳಿಕ ನ್ಯಾಷನಲ್ ಸ್ಟಾರ್ ಮುಂದಿನ ಸಿನಿಮಾ ಯಾವುದಾಗಲಿದೆ ಹಾಗೂ ಯಾರ ಜೊತೆ ಸೆಟ್ಟೇರಲಿದೆ ಅನ್ನೋದು ಇಂದಿಗೂ ನಿಗೂಢ. ಕಾರಣ ಈಗ ಅವ್ರು ಯಾವುದೇ ಸಿನಿಮಾ ಮಾಡಲಿ, ಕೆಜಿಎಫ್2 ಸ್ಕೇಲ್​ಗಿಂತ ದೊಡ್ಡದಾಗೇ ಇರಬೇಕು. ಬಜೆಟ್, ಕಥೆ, ಮೇಕಿಂಗ್, ಸ್ವ್ಯಾಗ್ ಹೀಗೆ ಎಲ್ಲದರಲ್ಲೂ ಯುನಿಕ್​ನೆಸ್ ಕಾಪಾಡಿಕೊಳ್ಳಬೇಕು. ಅದೀಗ ಸ್ವತಃ ಯಶ್ ಅವ್ರಿಗೇನೇ ಬಿಗ್ ಚಾಲೆಂಜ್ ಆಗಿದೆ.

ಒಂದೇ ಚಿತ್ರದಿಂದ ಬರೋಬ್ಬರಿ1500 ಕೋಟಿ ಬ್ಯುಸಿನೆಸ್ ಮಾಡಿದ ನಾಯಕನಟನೊಬ್ಬ, ಅದಾದ ಬಳಿಕ ಇಡೋ ಹೆಜ್ಜೆ ಮೊದಲಿನ ಹೆಜ್ಜೆಗಿಂತ ಕೊಂಚ ಜಾಸ್ತಿನೇ ಗಟ್ಟಿಯಾಗಿರಬೇಕು. ಅದೇ ಕಾರಣಕ್ಕೆ ಈ ಬಾರಿ ಬಹುದೊಡ್ಡ ಮಾಸ್ಟರ್​ಪ್ಲಾನ್ ರೂಪಿಸುವಲ್ಲಿ ಬ್ಯುಸಿ ಆಗಿದ್ದಾರೆ ಯಶ್. ಇಲ್ಲಿಯವರೆಗೆ ಪವರ್ ಟಿವಿಗೆ ಸಿಕ್ಕಿರೋ ಮಾಹಿತಿ ಪ್ರಕಾರ 2023ರವರೆಗೂ ಯಶ್​ರ ಯಾವುದೇ ಸಿನಿಮಾ ಅನೌನ್ಸ್ ಆಗಲ್ಲ. ಜನವರಿ 8ರಂದು ಅವ್ರ ಬರ್ತ್ ಡೇ ವಿಶೇಷ ಅಂದೇ ನ್ಯೂ ವೆಂಚರ್​ ಅಧಿಕೃತ ಘೋಷಣೆ ಆಗಲಿದೆ.

ನರ್ತನ್ ಪ್ರಾಜೆಕ್ಟ್ ಸದ್ಯಕಿಲ್ಲ. ನಿರ್ದೇಶಕ ಶಂಕರ್ ಸದ್ಯಕ್ಕೆ ಫ್ರೀ ಇಲ್ಲ. ಪ್ರಶಾಂತ್ ನೀಲ್ ಕೂಡ ಬೇರೆ ಬೇರೆ ಸಿನಿಮಾಗಳಲ್ಲಿ ಬ್ಯುಸಿ. ಹಾಗಾದ್ರೆ ಮಾಸ್ಟರ್​ಪೀಸ್ ರಹದಾರಿ ಯಾವುದು..? ಯಾರೊಂದಿಗೆ ಅಂದ್ರೆ ಹಾಲಿವುಡ್ ಎನ್ನಲಾಗ್ತಿದೆ. ಅದಕ್ಕೆ ಪೂರಕವಾಗಿ ಹಾಲಿವುಡ್ ಟೆಕ್ನಿಷಿಯನ್ಸ್ ಜೊತೆಗೂ ಯಶ್ ಕಾಣಿಸಿಕೊಳ್ತಿದ್ದಾರೆ. ಸೋ ಅದು ನಿಜವಾಗ್ಲಿ. ಹಾಲಿವುಡ್​ ಸಿನಿಮಾನೇ ಅಧಿಕೃತವಾಗಲಿ ಅಂತ ನಿರೀಕ್ಷಿಸೋಣ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES
- Advertisment -
Google search engine

Most Popular

Recent Comments