Monday, August 25, 2025
Google search engine
HomeUncategorizedಮಹಾರಾಷ್ಟ್ರದಲ್ಲಿ‌‌ ಕನ್ನಡಿಗರಿಂದ ಜನಸೇವಾ ಕಾರ್ಯಕ್ರಮ

ಮಹಾರಾಷ್ಟ್ರದಲ್ಲಿ‌‌ ಕನ್ನಡಿಗರಿಂದ ಜನಸೇವಾ ಕಾರ್ಯಕ್ರಮ

ಬೆಳಗಾವಿ ಕನೇರಿ ಮಠದ ಶ್ರೀ ಕಾಡ ಸಿದ್ದೇಶ್ವರ ಸ್ವಾಮಿಗಳ ನೇತೃತ್ವದಲ್ಲಿ ಮಠದ ಆವರಣದಲ್ಲಿ ಗೋಶಾಲೆ ಹಾಗೂ ಗೋವಿಜ್ಞಾನ ಕೇಂದ್ರ, ಸ್ವಾನಗಳ ರಕ್ಷಣಾ ಕೇಂದ್ರ, ಕರ್ನಾಟಕ ಭವನ ಶಂಕುಸ್ಥಾಪನೆ ಹಾಗೂ ಸಂತ ಸಮಾವೇಶದ ಬೃಹತ್ ಕಾರ್ಯಕ್ರಮ ನೆರವೇರಿತು. ಕಾರ್ಯಕ್ರಮದ ಕೇಂದ್ರ ಬಿಂದುವಾಗಿ ಕರ್ನಾಟಕ ಸಿಎಂ ಬೊಮ್ಮಾಯಿ ಭಾಗವಹಿಸಿದ್ದರು. ಬಿ.ಎಲ್.ಸಂತೋಷ ಅಧ್ಯಕ್ಷತೆಯನ್ನು ವಹಿಸಿದ್ದರು. ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ, ಸಚಿವರಾದ ವಿ.ಸೋಮಣ್ಣ, ಶಶಿಕಲಾ ಜೊಲ್ಲೆ, ಮುರಗೇಶ್ ನಿರಾಣಿ, ಗೊವಿಂದ‌ ಕಾರಜೋಳ, ಶಂಕರ ಮುನೇನಕೊಪ್ಪ, ಸಿ.ಸಿ‌.ಪಾಟೀಲ್, ಸಂಸದ ಅಣ್ಣಾಸಾಹೇಬ್‌ ಜೊಲ್ಲೆ, ಶಾಸಕರಾದ ಶ್ರೀಮಂತ್ ಪಾಟೀಲ್ ಹಾಗೂ ಹಲವು ನಾಯಕರು ಭಾಗಿಯಾಗಿದ್ದರು. ಕನ್ನಡಿಗರು ಹಾಗೂ ಮಹಾರಾಷ್ಟ್ರದ ಸಾವಿರಾರು ಭಕ್ತರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.

ಇನ್ನೂ ಕೊಲ್ಹಾಪುರ ವಿಮಾನ ನಿಲ್ದಾಣದಿಂದ ಸೀದಾ ಕಾರ್ಯಕ್ರಮಕ್ಕೆ ಆಗಮಿಸಿದ ಸಿಎಂ ಬೊಮ್ಮಾಯಿ, ಹಲವು ಯೋಜನೆಗಳನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿ, ಕನ್ನೇರಿ ಮಠದ ದೊಡ್ಡ ಮಠ ಕರ್ನಾಟಕದಲ್ಲಿಯೂ ಸ್ಥಾಪನೆ ಮಾಡಿದ್ದೇವೆ. ‌ನಮ್ಮ ರಾಜ್ಯದಲ್ಲಿ ಪುಣ್ಯಕೋಟಿ ಯೋಜನೆ ಮಾಡಿದ್ದೇವೆ. ಲಕ್ಷ ಗೋವುಗಳನ್ನು ರಕ್ಷಣೆ ಮಾಡುತ್ತೇವೆ ಎಂದರು.

ಒಟ್ಟಾರೆಯಾಗಿ ಕನೇರಿ ಸಿದ್ದಗಿರಿ ಮಠದಲ್ಲಿ ಕನ್ನಡಿಗರ ನೇತೃತ್ವದಲ್ಲಿ ಸಾಮಾಜಿಕ ಕಾರ್ಯ, ಗೋ ವಿಜ್ಞಾನ, ಶ್ವಾನ ಸಂರಕ್ಷಣಾ ಕೇಂದ್ರ ಮುಂತಾದ ಯೋಜನೆಗಳನ್ನು ಜನರಿಗೆ ಸಮರ್ಪನೆ ಮಾಡಿ ರಾಜ್ಯದ ನಾಯಕರು, ಭಕ್ತರು ಹಾಗೂ ಮಹಾರಾಷ್ಟ್ರದ ಭಕ್ತರು ಕೂಡ ಸೈ ಎನ್ನುವಂತೆ ಸಮಾಜ ಕಾರ್ಯದಲ್ಲಿ ತೊಡಗಿದ್ದಾರೆ.

 ಸಿದ್ದೇಶ್ ಪುಠಾಣೆ ಪವರ್ ಟಿವಿ ಕೊಲ್ಹಾಪುರ

RELATED ARTICLES
- Advertisment -
Google search engine

Most Popular

Recent Comments