Thursday, August 28, 2025
HomeUncategorizedಅನ್ನಿ ಎರ್ನಾಕ್ಸ್​​​ಗೆ ಸಾಹಿತ್ಯ ಕ್ಷೇತ್ರದ ನೊಬೆಲ್​​

ಅನ್ನಿ ಎರ್ನಾಕ್ಸ್​​​ಗೆ ಸಾಹಿತ್ಯ ಕ್ಷೇತ್ರದ ನೊಬೆಲ್​​

ಖ್ಯಾತ ಫ್ರೆಂಚ್ ಲೇಖಕಿ ಅನ್ನಿ ಎರ್ನಾಕ್ಸ್ ಅವರು 2022ರ ನೊಬೆಲ್ ಸಾಹಿತ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಲೇಖಕಿಯು ವರ್ಗ ಮತ್ತು ಲಿಂಗ ತಾರತಮ್ಯದ ಬಗೆಗಿನ ಸರಳ ಕಾದಂಬರಿಗಳಿಗೆ ಹೆಸರುವಾಸಿಯಾಗಿದ್ದಾರೆ.

82 ವರ್ಷದ ಎರ್ನಾಕ್ಸ್ ಅವರ ಧೈರ್ಯ ಮತ್ತು ಅವರ ಚಿಕಿತ್ಸಕ ದೃಷ್ಟಿಕೋನದ ಚುರುಕುತನಕ್ಕಾಗಿ ಅವರು ಈ ಗೌರವಕ್ಕೆ ಪಾತ್ರರಾಗಿದ್ದಾರೆ. ವಿಜೇತ ನೊಬೆಲ್ ಪ್ರಶಸ್ತಿಯು ಪದಕ ಮತ್ತು 10 ಮಿಲಿಯನ್ ಸ್ವೀಡಿಷ್ ಕ್ರೋನರ್ ಅಂದರೆ ಸುಮಾರು 7.5 ಕೋಟಿ ಮೊತ್ತವನ್ನು ಹೊಂದಿದೆ. ಅನ್ನಿ ಎರ್ನಾಕ್ಸ್ ಅವರು ಸೆಪ್ಟೆಂಬರ್ 1,1940ರಲ್ಲಿ ಎರ್ನಾಕ್ಸ್ ನಾರ್ಮಂಡಿಯ ಲಿಲ್ಲೆಬೋನ್‌ನಲ್ಲಿ ಜನಿಸಿದರು.

ಈಕೆ ಫ್ರೆಂಚ್ ಬರಹಗಾರ್ತಿ ಮತ್ತು ಸಾಹಿತ್ಯ ಪ್ರಾಧ್ಯಾಪಕಿಯಾಗಿ ಕಾರ್ಯನಿರ್ವಹಿಸಿದ್ರು. ಎರ್ನಾಕ್ಸ್ ಅವರು ಡಿಸೆಂಬರ್ 10 ರಂದು ಸ್ಟಾಕ್‌ಹೋಮ್‌ನಲ್ಲಿ ನಡೆಯುವ ಔಪಚಾರಿಕ ಸಮಾರಂಭದಲ್ಲಿ ಸ್ವೀಡನ್ ರಾಜ ‘ಕಾರ್ಲ್ ಗುಸ್ತಾಫ್’ ಅವರಿಂದ ನೊಬೆಲ್ ಸ್ವೀಕರಿಸುತ್ತಾರೆ. ನೋಬೆಲ್​​​ ಪ್ರಶಸ್ತಿ ಆರಂಭಿಸಿದ ವಿಜ್ಞಾನಿ ಆಲ್ಪ್ರೆಡ್​​ ಅವರು 1896ರಲ್ಲಿ ಡಿಸೆಂಬರ್​​ 10ರಂದು ಮೃತಪಟ್ಟಿದ್ರು. ಇವರ ಸವಿ ನೆನಪಿಗಾಗಿ ಈ ಪ್ರಶಸ್ತಿಯನ್ನು ಕೊಡಲಾಗುತ್ತೆ. 1901ರಲ್ಲಿ ಪ್ರಾರಂಭವಾದ ನೊಬೆಲ್ ಪ್ರಶಸ್ತಿಗಳಲ್ಲಿ 119 ಜನರಿಗೆ ಸಾಹಿತ್ಯ ನೊಬೆಲ್ ಪ್ರಶಸ್ತಿಗಳನ್ನು ನೀಡಲಾಗಿದೆ. ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಗೆದ್ದ ಮಹಿಳೆಯರಲ್ಲಿ ಅನ್ನಿ ಎರ್ನಾಕ್ಸ್‌ 17ನೇ ಮಹಿಳೆಯಾಗಿದ್ದಾರೆ.

RELATED ARTICLES
- Advertisment -
Google search engine

Most Popular

Recent Comments