Friday, August 29, 2025
HomeUncategorizedವರ್ಷದ ಹಿಂದೆ ನಾಪತ್ತೆಯಾಗಿದ್ದ ವೃದ್ದೆಯ ಅಸ್ಥಿಪಂಜರ ಪತ್ತೆ.!

ವರ್ಷದ ಹಿಂದೆ ನಾಪತ್ತೆಯಾಗಿದ್ದ ವೃದ್ದೆಯ ಅಸ್ಥಿಪಂಜರ ಪತ್ತೆ.!

ಶಿವಮೊಗ್ಗ; ಒಂದು ವರ್ಷದ ಹಿಂದೆ ನಾಪತ್ತೆಯಾಗಿದ್ದ ವೃದ್ದೆಯ ಅಸ್ಥಿಪಂಜರ ಮತ್ತು ಆಕೆ ಧರಿಸಿದ್ದ ಬಟ್ಟೆ ಪತ್ತೆಯಾಗಿರುವ ಘಟನೆ ಜಿಲ್ಲೆಯ ರಿಪ್ಪನಪೇಟೆಯ ಹಾರಂಬಳ್ಳಿ ಬಳಿ ನಡೆದಿದೆ.

ಹಾರಂಬಳ್ಳಿ ಗ್ರಾಮದ ಮಹಿಳೆ ಗಿಡ್ಡಮ್ಮ (80) ಕಳೆದ ವರ್ಷ ಜು.12 ರಂದು ನಾಪತ್ತೆಯಾಗಿದ್ದರು. ಕೂಡಲೇ ಗಿಡ್ಡಮ್ಮ ಅವರ ಮಕ್ಕಳು ರಿಪ್ಪನ್‌ಪೇಟೆ ಠಾಣೆ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ನಾಪತ್ತೆ ಕೇಸ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಆದರೆ ವೃದ್ದೆ ಎಲ್ಲೂ ಪತ್ತೆಯಾಗಿರಲಿಲ್ಲ.

ಈಗ ನಾಪತ್ತೆಯಾಗಿ ಒಂದು ವರ್ಷ ಎರಡು ತಿಂಗಳ ಬಳಿಕ ಹಾರಂಬಳ್ಳಿ ಗ್ರಾಮದ ಬಿಳಿಗಲ್ಲು ಉಬ್ಬಿನಕಾಡು ಎಂಬ ಅರಣ್ಯ ಪ್ರದೇಶದಲ್ಲಿ ತಲೆಬುರುಡೆ, ಸೀರೆ, ಸರ, ಮೂಳೆ ಮತ್ತು ಅವಶೇಷಗಳು ಪತ್ತೆಯಾಗಿದೆ. ಸ್ಥಳಕ್ಕೆ ತೆರಳಿದ್ದ ಕುಟುಂಬಸ್ಥರು, ಸೀರೆ ಮತ್ತು ಸರವನ್ನು ನೋಡಿ ಅಸ್ಥಿಪಂಜರ ಗಿಡ್ಡಮ್ಮನವರದ್ದೆ ಎಂದು ಗುರುತಿಸಿದ್ದು, ಪೊಲೀಸರು ಅಸ್ಥಿಪಂಜರ ಹಾಗೂ ಅವಶೇಷಗಳನ್ನು ವಶಕ್ಕೆ ಪಡೆದು ಎಪ್ಎಸ್ಐಎಲ್ ವರದಿಗಾಗಿ ಕಳುಹಿಸಿಕೊಟ್ಟಿದ್ದಾರೆ. ಇನ್ನು ಎಫ್ಎಸ್ಐಎಲ್ ವರದಿ ಬಂದ ಬಳಿಕವಷ್ಟೇ ಈ ಪ್ರಕರಣದ ಸತ್ಯಾಂಶ ಹೊರಬರಲಿದೆ.

RELATED ARTICLES
- Advertisment -
Google search engine

Most Popular

Recent Comments