Saturday, August 30, 2025
HomeUncategorizedರಾಷ್ಟ್ರಪತಿ ದ್ರೌಪದಿ ಮುರ್ಮು ಕಾರ್ಯಕ್ರಮದಲ್ಲಿ ಅವ್ಯವಹಾರ ಶಂಕೆ

ರಾಷ್ಟ್ರಪತಿ ದ್ರೌಪದಿ ಮುರ್ಮು ಕಾರ್ಯಕ್ರಮದಲ್ಲಿ ಅವ್ಯವಹಾರ ಶಂಕೆ

ಹುಬ್ಬಳ್ಳಿ: ದೇಶದಲ್ಲೇ ಮೊದಲ ಬಾರಿಗೆ ಎನ್ನುವಂತೆ ಹುಬ್ಬಳ್ಳಿಯಲ್ಲಿ ಕಳೆದ ಎರಡು ದಿನದ ಹಿಂದೆ (ಸೆ.26) ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಪೌರ ಸನ್ಮಾನ ಮಾಡಿ ದೇಶದ ಮೊದಲ ಪ್ರಜೆಗೆ ಗೌರವ ನೀಡಿತ್ತು. ಇದೇ ವಿಚಾರವಾಗಿ ಈಗ ವಿವಾದವೊಂದು ಭುಗಿಲೆದ್ದಿದ್ದು, ಪಾಲಿಕೆ ಗದ್ದುಗೆ ಹಿಡಿದಿರುವ ಬಿಜೆಪಿಗೆ ತೀವ್ರ ಮುಜುಗರ ಉಂಟಾಗುತ್ತಿದೆ.

ರಾಷ್ಟ್ರಪತಿಗಳ 45 ನಿಮಿಷದ ಕಾರ್ಯಕ್ರಮಕ್ಕೆ ಪಾಲಿಕೆ ಬರೋಬ್ಬರಿ 1.5 ಕೋಟಿ ಖರ್ಚು ಮಾಡಿರುವುದಾಗಿ ಈಗಾಗಲೇ ಹೇಳಿಕೊಂಡಿದೆ. ಇದರ ಬೆನ್ನಲ್ಲೇ ಹಲವು ಸಂಶಯಾಸ್ಪದ ವ್ಯವಹಾರಗಳನ್ನು ಕೂಡ ಪಾಲಿಕೆ ತರಾತುರಿಯಲ್ಲಿ ನಡೆಸಿಬಿಟ್ಟಿದೆ. ಇದೇ ಹಿನ್ನೆಲೆಯಲ್ಲಿ ಮೇಯರ್ ಕಾರ್ಯಕ್ರಮದ ಖರ್ಚು ವೆಚ್ಚದಲ್ಲಿ ಗೋಲ್‌ಮಾಲ್ ಮಾಡಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಪೇ ಮೇಯರ್ ಪೋಸ್ಟರ್ ಅಂಟಿಸಿ 1.5 ಕೋಟಿ ಖರ್ಚಿನ ಲೆಕ್ಕ ಕೇಳಿದ್ದಾರೆ.

ನಗರದ ಹಲವು ಕಡೆ ಪೇ ಮೇಯರ್ 40 ಪರ್ಸೆಂಟ್ ಎಂದು ಪೋಸ್ಟರ್ ಅಂಟಿಸಿರುವ ಕಾಂಗ್ರೆಸ್, ಕಾರ್ಯಕ್ರಮದಲ್ಲಿ ಹಾಕಿದ್ದ ಜರ್ಮನ್ ಪೆಂಡಾಲ್ ವಿಚಾರದಲ್ಲಿ ಎಲ್ಲ ಕೆಲಸ ಮುಗಿದ ಮೇಲೆ ಯಾಕೆ ಟೆಂಡರ್ ಪ್ರಕ್ರಿಯೆ ನಡೆಸಲಾಗಿದೆ ಎಂದು ಪ್ರಶ್ನಿಸಿದ್ದಾರೆ. ಮೇಯರ್ ಈರೇಶ ಅಂಚಟಗೇರಿ ಅವರೇ, ನಿಮ್ಮ ಲಂಚಾವತಾರವನ್ನು ಸಾರುವ #PayMayour(ಪೇ ಮೇಯರ್​) ಪೋಸ್ಟರ್ ನೋಡಿ ಜನ ಛೀಮಾರಿ ಹಾಕುತ್ತಿದ್ದಾರೆ.

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪೌರ ಸನ್ಮಾನ ಹೆಸರಿನಲ್ಲಿ ಸುಮಾರು 1.5 ಕೋಟಿ ರೂ ದುಂದು ವೆಚ್ಚ ಮಾಡಿ ಪೆಂಡಾಲ್ ಹಾಕಿದ ಮೇಲೆ ಕೊಟೇಶನ್ ಕೇಳಿ ಹುಬ್ಬಳ್ಳಿಯ ಮಾನ ಕಳೆದ ನೀವು ತಕ್ಷಣ ಲೆಕ್ಕಕೊಡಿ. ಇಲ್ಲವೆ, ರಾಜೀನಾಮೆ ನೀಡಿ ಎಂಬ ಟ್ವೀಟ್ ವೈರಲ್ ಆಗುತ್ತಿದ್ದು, ಇದಕ್ಕೆ ಬಿಜೆಪಿ ನಾಯಕರು ಯಾವುದೇ ಪ್ರತಿಕ್ರಿಯೆ ಕೂಡ ನೀಡುತ್ತಿಲ್ಲ.

ಮಲ್ಲಿಕ್ ಬೆಳಗಲಿ, ಪವರ್ ಟಿವಿ. ಹುಬ್ಬಳ್ಳಿ

RELATED ARTICLES
- Advertisment -
Google search engine

Most Popular

Recent Comments