Tuesday, August 26, 2025
Google search engine
HomeUncategorizedಕೆಜಿ ಹಳ್ಳಿ FIR ಆಧರಿಸಿ 14 ಪಿಎಫ್ಐ ಮುಖಂಡರ ಬಂಧನ

ಕೆಜಿ ಹಳ್ಳಿ FIR ಆಧರಿಸಿ 14 ಪಿಎಫ್ಐ ಮುಖಂಡರ ಬಂಧನ

ಬೆಂಗಳೂರು: ಪಿಎಫ್ಐ ಕಚೇರಿಗಳ ಮೇಲಿನ ದಾಳಿ ಪ್ರಕರಣ ಪೂರ್ವ ವಿಭಾಗದ ಪೊಲೀಸರು ಒಟ್ಟು 14 ಪಿಎಫ್​ಐ ಮುಖಂಡರ ಬಂಧಿಸಿ ವಶಕ್ಕೆ ಪಡೆದುಕೊಳ್ಳಲಾಗಿದೆ.

ಬೆಂಗಳೂರಿನ ಕೆ.ಜಿ ಹಳ್ಳಿಯಲ್ಲಿ ದಾಖಲಾಗಿದ್ದ ಎಫ್ಐಆರ್ ಆಧಾರದ ಮೇಲೆ ನಿನ್ನೆ ದಾಳಿ ನಡೆದಿತ್ತು. ಬೆಂಗಳೂರು, ಮಂಗಳೂರು, ಕಲಬುರ್ಗಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಮೈಸೂರು ಸೇರಿದಂತೆ ಹಲವೆಡೆ ಪೂರ್ವ ವಿಭಾಗದ ವಿಶೇಷ ತಂಡ ದಾಳಿ ನಡೆಸಿತ್ತು. ಈ ದಾಳಿಯಲ್ಲಿ 14 ಜನರನ್ನ ಬಂಧಿಸಲಾಗಿದ್ದು, ಇಂದು ನ್ಯಾಯಾಲಯಕ್ಕೆ ಪೊಲೀಸರು ಹಾಜರು ಪಡಿಸಲಿದ್ದಾರೆ.

ಭಯೋತ್ಪಾದಕ ಚಟುವಟಿಕೆ, ವಿದೇಶದಿಂದ ಹಣ ಸಂಗ್ರಹ, ಯುವಕರನ್ನ ಮೂಲಭೂವಾದಿಯನ್ನಾಗಿ ಮಾಡಲು ಟ್ರೈನಿಂಗ್ ಹಾಗೂ ಮುಂದೆ ನಡೆಯುವ ಕುಕೃತ್ಯಗಳ ಬಗ್ಗೆ ಮಾಹಿತಿ ಹಿನ್ನಲೆ ದೂರು ದಾಖಲಾಗಿತ್ತು. ಈ ಹಿನ್ನಲೆ ಕೆ ಜಿ ಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಸದ್ಯ ಪುಲಿಕೇಶಿನಗರ ಪೊಲೀಸ್ ಠಾಣೆ ಹಾಗು ಆಡುಗೋಡಿ ಟೆಕ್ನಿಕಲ್ ಸೆಲ್ ನಲ್ಲಿ ಪೊಲೀಸರು ಆರೋಪಿಗಳನ್ನ ಬಂಧಿಸಿ ಇಡಲಾಗಿದ್ದು, ಇಂದು ನ್ಯಾಯಾಲಯಕ್ಕೆ ಹಾಜರು ಪಡಿಸಿ ಮತ್ತೆ ಕಸ್ಟಡಿಗೆ ಕೆಜಿ ಹಳ್ಳಿ ಪೊಲೀಸರು ಪಡೆಯಲಿದ್ದಾರೆ.

ಪೊಲೀಸರು ಸಿದ್ಧಪಡಿಸಿದ್ದ ಪಟ್ಟಿಯಲ್ಲಿರುವ 19 ಮಂದಿಯ ಹೆಸರು

A1 ನಾಸೀರ್ ಪಾಷಾ- ಬೆಂಗಳೂರು, A2 ಮನ್ಸೂರ್ ಅಹಮದ್ – ಬೆಂಗಳೂರು, A3 ಶೇಕ್ ಇಜಾಜ್ ಅಲಿ – ಕಲಬುರಗಿ, A4 ಮೊಹಮದ್ ಕಲಿಮುಲ್ಲಾ – ಮೈಸೂರು, A5 ಮೊಹಮ್ಮದ್ ಅಶ್ರಫ್ ಅಂಕಜಲ್ – ಮಂಗಳೂರು, A6 ಮೊಹಮದ್ ಶರೀಫ್ -ಸ ಮಂಗಳೂರು, A7 ಅಬ್ದುಲ್ ಖಾದೀರ್ ದಕ್ಷಿಣ ಕನ್ನಡದ ಪುತ್ತೂರು, A8 ಮೊಹಮ್ಮದ್ ತಪ್ಸೀರ್ – ದಕ್ಷಿಣ ಕನ್ನಡದ ಬಂಟ್ವಾಳ, A9 ಮೊಹಿಯುದ್ದಿನ್ – ಮಂಗಳೂರು, A10 ನವಾಜ್ ಕಾವುರ್ – ಮಂಗಳೂರು, A11 ಅಶ್ರಫ್ – ಮಂಗಳೂರು, A12 ಅಬ್ದುಲ್ ರಜಾಕ್ – ಪುತ್ತೂರು, A13 ಅಯುಬ್ ಕೆ – ಪುತ್ತೂರು, A14 ಶಾಹಿದ್ ಖಾನಗ – ಶಿವಮೊಗ್ಗ, A15 ತಾಹಿರ್ – ದಾವಣಗೆರೆ, A16 ಇಮಾದುದ್ದೀನ್ – ದಾವಣಗೆರೆ, A17 ಅಬ್ದುಲ್ ಅಜಿಜ್ ಅಬ್ದುಲ್ – ಶಿರಸಿ ಉತ್ತರ ಕನ್ನಡ, A18 ಮೌಸಿನ್ ಅಬ್ದುಲ್ ಶಾಕುರ್ – ಶಿರಸಿ ಉತ್ತರ ಕನ್ನಡ, A19 ಮೊಹಮ್ಮದ್ ಫಯಾಜ್ – ಗಂಗಾವತಿ ಕೊಪ್ಪಳ.

RELATED ARTICLES
- Advertisment -
Google search engine

Most Popular

Recent Comments