Saturday, August 23, 2025
Google search engine
HomeUncategorizedಉಮೇಶ್ ಕತ್ತಿ ಜತೆಗಿನ ಒಡನಾಟ ಹಂಚಿಕೊಂಡ ಸಿದ್ದರಾಮಯ್ಯ

ಉಮೇಶ್ ಕತ್ತಿ ಜತೆಗಿನ ಒಡನಾಟ ಹಂಚಿಕೊಂಡ ಸಿದ್ದರಾಮಯ್ಯ

ಬೆಂಗಳೂರು: ಇತ್ತೀಚಿಗೆ ಹೃದಯಾಘಾತದಿಂದ ನಿಧನರಾದ ಸಚಿವ ಉಮೇಶ್ ಕತ್ತಿ ಜತೆಗಿನ ಒಡನಾಟವನ್ನ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಹಂಚಿಕೊಂಡಿದ್ದಾರೆ.

ಇಂದು ಸದನದಲ್ಲಿ ಮಾತನಾಡಿದ ಅವರು, ಜೆ.ಹೆಚ್ ಪಟೇಲ್ ಸಿಎಂ ಆಗಿದ್ದಾಗ ವೇಳೆ ಉಮೇಶ್​ ಕತ್ತಿ ಅವರು ನನ್ನನ್ನು ಭೇಟಿಯಾಗಿದ್ದರು ಅಲ್ಲಿಂದ ನಮ್ಮ ಪರಿಚಯ, ಆಗ ಲೋಕೋಪಯೋಗಿ ಸಚಿವರಾಗಿದ್ದ ಕತ್ತಿ ನನ್ನ ಬಳಿ ಬರುತ್ತಿದ್ದರು, ಹಣ ಬಿಡುಗಡೆ ಮಾಡುವಂತೆ ಕೇಳುತ್ತಿದ್ದರು ಎಂದರು.

ಕಳೆದ ಉಪ ಚುನಾವಣೆ ಸಂದರ್ಭದಲ್ಲಿ ತಮ್ಮ ನಿವಾಸಕ್ಕೆ ಊಟಕ್ಕೆ ಬರಬೇಕೆಂದು ಉಮೇಶ್​ ಕತ್ತಿ ಅವರು ಒತ್ತಾಯ ಮಾಡಿದ್ದರು, ತಾವು ಸಚಿವರಾಗಿ ವಿರೋಧ ಪಕ್ಷದಲ್ಲಿದ್ದರು ಬರುವಂತೆ ಒತ್ತಾಯಿಸಿದ್ದರು, ನಾನು ಅವರ ಮನೆಗೆ ಭೇಟಿ ನೀಡಿದ್ದೆ, ಆಗ ಎರಡು ಗಂಟೆ ಕಾಲ ಹಲವು ವಿಚಾರಗಳ ಬಗ್ಗೆ ಚರ್ಚಿಸಿದ್ದೆವು, ಅವರು ಏನು ಮಾತನಾಡಿದ್ದರು ಎಂದು ಬಹಿರಂಗಪಡಿಸಲ್ಲ ಎಂದರು.

ಆಗಾಗ್ಗೆ ಉಮೇಶ್​ ಕತ್ತಿ ಅವರು ಪ್ರತ್ಯೇಕ ರಾಜ್ಯದ ಬಗ್ಗೆ ಮಾತನ್ನಾಡುತ್ತಿದ್ದರು. ಉತ್ತರ ಕರ್ನಾಟಕ ಅಭಿವೃದ್ಧಿ ಬಗ್ಗೆ ಮಾತನಾಡಿ, ಆದರೆ ಪ್ರತ್ಯೇಕ ರಾಜ್ಯ ಆಗಬೇಕು ಎಂದು ಕೇಳಬೇಡಿ ಎಂದಿದ್ದೆ, ಅವರು ಹಾಸ್ಯ ಪ್ರವೃತ್ತಿ ಹೊಂದಿದ್ದರು. ಕ್ಷೇತ್ರದಲ್ಲಿ ಅಪಾರ ಜನರ ಪ್ರೀತಿ ವಿಶ್ವಾಸಗಳಿಸಿದ್ದರು. ಬೆಳಗಾವಿಯಲ್ಲಿ ಅವರದ್ದೇ ಆದ ಶಕ್ತಿ ಗಳಿಸಿದ್ದರು ಎಂದು ಉಮೇಶ್ ಕತ್ತಿ ಅವರನ್ನ ಸಿದ್ದರಾಮಯ್ಯ ಅವರು ಸ್ಮರಿಸಿಕೊಂಡರು.

RELATED ARTICLES
- Advertisment -
Google search engine

Most Popular

Recent Comments