Sunday, August 24, 2025
Google search engine
HomeUncategorizedಅನೈತಿಕ ಸಂಬಂಧದ ಅನುಮಾನ ತಂದ ಆಪತ್ತು..!

ಅನೈತಿಕ ಸಂಬಂಧದ ಅನುಮಾನ ತಂದ ಆಪತ್ತು..!

ಶಿವಮೊಗ್ಗ : ಇವರು ದಿನೇಶ್ ಹಾಗೂ ಮಂಜುಳಾ ದಂಪತಿ. ಶಿವಮೊಗ್ಗದ ಸಹ್ಯಾದ್ರಿ ಕಾಲೇಜು ಬಳಿಯ ಪ್ರಿಯಾಂಕಾ ಲೇ ಔಟ್‌ನಲ್ಲಿದ್ದ ಇವರದ್ದು ಚಿಕ್ಕ ಹಾಗೂ ಚೊಕ್ಕ ಸುಖೀ ಕುಟುಂಬ. ಮದುವೆಯಾಗಿ 12 ವರ್ಷ ಆಗಿದ್ದ ಇವರ ಸಂಸಾರದ ಮೇಲೆ ಯಾರ ಕಣ್ಣು ಬಿತ್ತೋ ಗೊತ್ತಿಲ್ಲ. ಸಂಸಾರದಲ್ಲಿ ಬರಬಾರದ ಅನುಮಾನದ ಹುತ್ತ ಬೆಳೆದು, ಅಡುಗೆ ಮನೆಯಲ್ಲಿ ದಿನೇಶನೇ ದಿನೇಶನೇ ಪತ್ನಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ವೃತ್ತಿಯಲ್ಲಿ ಮೆಸ್ಕಾಂನಲ್ಲಿ ಹಿರಿಯ ಅಧಿಕಾರಿಯಾಗಿದ್ದ ಈತನಿಗೆ, ಹಣಕಾಸಿಗೇನೂ ತೊಂದರೆ ಇರಲಿಲ್ಲ. ಆದರೆ, ತಡರಾತ್ರಿ ಈ ದಂಪತಿ ಮಧ್ಯೆ ದೊಡ್ಡ ಜಗಳವೇ ಆಗಿ ಹೋಗಿದೆ. ಕೆರಳಿದ ದಿನೇಶ್ ಏಕಾಏಕಿ ಹೆಂಡತಿಯನ್ನು ಕೊಂದು ಬಳಿಕ ತಾನೂ ಅದೇ ಚಾಕುವಿನಿಂದ ತನ್ನ ಎಡಗೈಯನ್ನು ಕೊಯ್ದುಕೊಂಡಿದ್ದಾನೆ.

ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ, ದಿನೇಶ್ ಗೆ ಯಾವುದೋ ಹೆಣ್ಣಿನ ಜೊತೆ ಸಂಬಂಧ ಇದೆ ಅಂತಾ ತಿಳಿದು ಬಂದಿದೆ. ಈ ಸಲುವಾಗಿಯೇ ಮನೆಯಲ್ಲಿ ಪ್ರತಿದಿನ ಗಲಾಟೆಗಳು ಆಗುತ್ತಿತ್ತಂತೆ. ದಿನೇಶ್ ಹಾಗೂ ಮಂಜುಳಾ ದಂಪತಿಗೆ ಇಬ್ಬರು ಮಕ್ಕಳಿದ್ದು, ಅವರನ್ನು ಮಲಗಿಸಿ ನಂತರ ದಿನೇಶ್ ಈ ಕೆಲಸ ಮಾಡಿದ್ದಾನೆ ಎಂದು ಗೊತ್ತಾಗಿದೆ.

ಒಟ್ಟಿನಲ್ಲಿ ಪತಿ, ಪತ್ನಿ ನಡುವಿನ ಗಲಾಟೆಯಿಂದಾಗಿ ಹೆಂಡತಿ ಇಹಲೋಕ ತ್ಯಜಿಸಿದ್ದಾಳೆ. ದಿನೇಶ್ ನ ಈ ಕ್ರೌರ್ಯಕ್ಕೆ ಹೆಂಡತಿ ಪ್ರಾಣ ಕಳೆದುಕೊಂಡರೆ, ಅಮಾಯಕ ಕಂದಮ್ಮಗಳು ಅನಾಥರಾಗಿದ್ದಾರೆ. ಗಂಡ ಹೆಂಡತಿ ಜಗಳ ಉಂಡು ಮಲಗುವವರೆಗೆ ಅನ್ನೋ ಗಾದೆ ಇದೆ.ಆದರೆ, ಇವರಿಬ್ಬರ ಜಗಳ, ಕೊಲೆಯವರೆಗೆ ಅಂತ್ಯವಾಗಿದ್ದು ವಿಪರ್ಯಾಸವೇ ಸರಿ.

ಗೋ.ವ. ಮೋಹನಕೃಷ್ಣ, ಪವರ್ ಟಿ.ವಿ., ಶಿವಮೊಗ್ಗ

RELATED ARTICLES
- Advertisment -
Google search engine

Most Popular

Recent Comments