Thursday, August 28, 2025
HomeUncategorizedಬೆಳಗಾವಿಯಲ್ಲಿ 20ನೇ ದಿನಕ್ಕೆ ಕಾಲಿಟ್ಟ ಚಿರತೆ ಶೋಧ

ಬೆಳಗಾವಿಯಲ್ಲಿ 20ನೇ ದಿನಕ್ಕೆ ಕಾಲಿಟ್ಟ ಚಿರತೆ ಶೋಧ

ಬೆಂಗಳೂರು : ಕಳೆದ 20 ದಿನಗಳಿಂದ ಕುಂದಾನಗರಿ ಜನರ ನಿದ್ದೆಗೆಡಿಸಿದ ಚಿರತೆ ಹುಡುಕಾಟ ಮುಂದುವರೆದಿತ್ತು. ಇಂದು ಶಥಾಯಗಥಾಯ ಚಿರತೆಯನ್ನು ಸೇರೆ ಹಿಡಿಯಲೇಬೇಕು ಎಂದು ಅರಣ್ಯ ಅಧಿಕಾರಿಗಳು ಹಾಗೂ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದರು. ಆಪರೇಷನ್ ಚಿರತೆಗಾಗಿ ಶಿವಮೊಗ್ಗದ ಸಕ್ರೆಬೈಲು ಆನೆ ಶಿಬಿರದಿಂದ ಎರಡು ತರಬೇತಿ ಹೊಂದಿದ ಆನೆಗಳನ್ನು ಕರೆಸಿದ್ದರು. ಮಂಗಳವಾರ ತಡರಾತ್ರಿ ಗಾಲ್ಫ್ ಮೈದಾನಕ್ಕೆ ಎಂಟ್ರಿ ಕೊಟ್ಟ ಗಜಪಡೆ ಬುಧವಾರ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದವು.

ಬೆಳಗ್ಗಿನಿಂದಲೇ ಅರಣ್ಯ ಸಿಬ್ಬಂದಿ ಗೂಗಲ್ ಮ್ಯಾಪ್‌ನಲ್ಲಿ 250 ಎಕರೆ ಇರುವ ಗಾಲ್ಫ್ ಮೈದಾನದ ದಟ್ಟ ಅರಣ್ಯ ಪ್ರದೇಶ ಗುರುತಿಸಿ ಪಾಯಿಂಟ್ಔಟ್ ಮಾಡಿ, ಸಿಸಿಎಫ್ ಮಂಜುನಾಥ್ ಚವ್ಹಾಣ್, ಡಿಎಫ್ಓ ಆ್ಯಂಟನಿ ಮರಿಯಮ್, ಎಸಿಎಫ್ ಮಲ್ಲಿನಾಥ್ ಕುಸನಾಳ್ ಸೇರಿ ರೂಪರೇಷೆಗಳನ್ನು ಸಿದ್ಧಪಡಿಸಿದ ಬಳಿಕ ಕಾರ್ಯಾಚರಣೆ ಮಾಡಿದ್ರು.

ಈ ಕಾರ್ಯಾಚರಣೆಯ ನೇತೃತ್ವವನ್ನು ಶಿವಮೊಗ್ಗದ ಡಾ.ವಿನಯ್ ಎಸ್.ವಹಿಸಿಕೊಂಡಿದ್ದರು.ಆನೆಯ ಮೇಲೇರಿ ವಿನಯ್ ಕೂಂಬಿಂಗ್ ಕಾರ್ಯಾಚರಣೆ ಮಾಡಿದ್ರು. ಡಾ. ವಿನಯ್ 18ಕ್ಕೂ ಅಧಿಕ ಕಾಡು ಪ್ರಾಣಿಗಳಿಗೆ ಡಾಟ್ ಮಾಡಿರೋ ಅನುಭವ ಹೊಂದಿದ್ದು, ಇತ್ತೀಚೆಗಷ್ಟೇ ಭದ್ರಾವತಿಯ ಜನನಿಬಿಡ ಪ್ರದೇಶದಲ್ಲಿ ಯಶಸ್ವಿ ಡಾಟ್ ಮಾಡಿದ್ದರು.ಗಾಲ್ಫ್ ಕ್ಲಬ್ ನಲ್ಲಿ ಅಡಗಿರೋ ಚಿರತೆ ಸೆರೆಗೆ 8 ಜನ ಡಾಟ್ ಸ್ಪೆಷಲಿಷ್ಟ್, 60ಜನ ಸಿಬ್ಬಂದಿ ಸೇರಿ 250 ಎಕರೆ ವಿಸ್ತೀರ್ಣದಲ್ಲಿ ಇಂಚಿಂಚೂ ಶೋಧ ನಡೆಸಿದ್ರು. ಅರಣ್ಯ ಸಚಿವ ಉಮೇಶ್ ಕತ್ತಿ ಸ್ವಕ್ಷೇತ್ರ ಹುಕ್ಕೇರಿಯ ಹಂದಿ ಹಿಡಿಯುವ ಮಂದಿ ಸಾಥ್ ನೀಡಿದ್ದರು. ಅರಣ್ಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ 12 ಬಲೆಗಳನ್ನು ಬಳಸಿ ಕಾರ್ಯಾಚರಣೆ ನಡೆಸಿದ್ರು.

RELATED ARTICLES
- Advertisment -
Google search engine

Most Popular

Recent Comments