Thursday, August 28, 2025
HomeUncategorizedಅಬ್ಬಬ್ಬಾ.. ಯಂಗ್ ರೆಬೆಲ್​ಸ್ಟಾರ್ ಕೂಡ ‘ಕೋಟಿಗೊಬ್ಬ’

ಅಬ್ಬಬ್ಬಾ.. ಯಂಗ್ ರೆಬೆಲ್​ಸ್ಟಾರ್ ಕೂಡ ‘ಕೋಟಿಗೊಬ್ಬ’

ಯಂಗ್ ರೆಬೆಲ್​ಸ್ಟಾರ್ ಅಭಿಷೇಕ್ ಅಂಬರೀಶ್ ತಮ್ಮ ಎರಡನೇ ಚಿತ್ರದಲ್ಲೇ ಕೋಟಿಗೊಬ್ಬ ಅನಿಸಿಕೊಂಡಿದ್ದಾರೆ. ಬ್ಯಾಡ್ ಮ್ಯಾನರ್ಸ್​ ಸಿನಿಮಾ ರಿಲೀಸ್​ಗೂ ಮೊದ್ಲೇ ಕೋಟ್ಯಂತರ ರೂಪಾಯಿ ಬ್ಯುಸಿನೆಸ್ ಮಾಡೋ ಮೂಲಕ ಟಾಕ್ ಆಫ್ ದಿ ಟೌನ್ ಆಗಿದೆ. ಇಷ್ಟಕ್ಕೂ ಏನು ಆ ಕೋಟಿ ಕಥೆ ಅಂತೀರಾ..? ಈ ಸ್ಟೋರಿ ಓದಿ.

  • ಒಂದು ಕೋಟಿಗೆ ಬ್ಯಾಡ್ ಮ್ಯಾನರ್ಸ್​ ಆಡಿಯೋ ರೈಟ್ಸ್..!
  • ಸುಕ್ಕಾ ಸೂರಿ- ಮಾಸ್ತಿ ಜೋಡಿಯ ಹೈ ವೋಲ್ಟೇಜ್ ವೆಂಚರ್
  • ಗನ್ ಹಿಡಿದು ಅಭಿ ಘರ್ಜನೆ.. ರೋಚಿತ್ ವಿಲನ್ ಖದರ್..!

ಅಮರ್ ಚಿತ್ರದ ಬಳಿಕ ಅಭಿಷೇಕ್ ಅಂಬರೀಶ್ ನಟನೆಯ ಎರಡನೇ ಸಿನಿಮಾ ಬ್ಯಾಡ್ ಮ್ಯಾನರ್ಸ್​, ಹತ್ತು ಹಲವು ವಿಶೇಷತೆಗಳಿಂದ ಇಂಟರೆಸ್ಟಿಂಗ್ ಅನಿಸಿದೆ. ಅದ್ರಲ್ಲೂ ಅಭಿ ಈ ಬಾರಿ ಗನ್ ಹಿಡಿದು ಖಾಕಿ ಖದರ್ ತೋರಲಿದ್ದಾರೆ. ಟೈಟಲ್​ನಿಂದ ಹಿಡಿದು, ಮೇಕಿಂಗ್ ಹಂತದಲ್ಲೇ ಧೂಳೆಬ್ಬಿಸುತ್ತಿರೋ ಬ್ಯಾಡ್ ಮ್ಯಾನರ್ಸ್​, ಇದೀಗ ರಿಲೀಸ್​ಗೂ ಮೊದ್ಲೇ ಮತ್ತೊಂದು ದಾಖಲೆ ಬರೆದಿದೆ.

ಯೆಸ್.. ಚಿತ್ರದ ಆಡಿಯೋ ಹಕ್ಕುಗಳು ಬರೋಬ್ಬರಿ ಒಂದು ಕೋಟಿ ಭಾರೀ ಮೊತ್ತಕ್ಕೆ ಸೋಲ್ಡ್ ಔಟ್ ಆಗುವ ಮೂಲಕ ಸ್ಯಾಂಡಲ್​ವುಡ್ ಅಂಗಳದಲ್ಲಿ ಸಖತ್ ಟಾಕ್ ಕ್ರಿಯೇಟ್ ಆಗಿದೆ. ಚರಣ್ ರಾಜ್ ಮ್ಯೂಸಿಕ್ ಕಂಪೋಸ್ ಮಾಡಿರೋ ಸಿನಿಮಾ ಇದಾಗಿದ್ದು, ಟಗರು ಹಾಗೂ ಸಲಗ ಚಿತ್ರಗಳು ಅವ್ರ ಕೈಚಳಕದಲ್ಲಿ ದೊಡ್ಡ ಮಟ್ಟಕ್ಕೆ ಹಿಟ್ ಆಗಿದ್ವು. ಇದೀಗ ಅದೇ ನಿರೀಕ್ಷೆ ಬ್ಯಾಡ್ ಮ್ಯಾನರ್ಸ್​ ಮೇಲೂ ಉಂಟಾಗಿದೆ.

ಅದ್ರಲ್ಲೂ ಸುಕ್ಕಾ ಸೂರಿ ಌಕ್ಷನ್ ಕಟ್ ಹೇಳ್ತಿರೋ ಚಿತ್ರ ಬ್ಯಾಡ್ ಮ್ಯಾನರ್ಸ್​. ಕೆಂಡ ಸಂಪಿಗೆ, ದೊಡ್ಮನೆ ಹುಡ್ಗ, ಟಗರು, ಪಾಪ್​ಕಾರ್ನ್​ ಮಂಕಿ ಟೈಗರ್ ಹೀಗೆ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳಿಂದ ನೋಡುಗರ ನಾಡಿಮಿಡಿತ ಹೆಚ್ಚಿಸಿರೋ ದುನಿಯಾ ಸೂರಿ, ಬ್ಯಾಡ್ ಮ್ಯಾನರ್ಸ್​ನಿಂದ ಸಖತ್ ಥ್ರಿಲ್ ಕೊಡೋ ಮನ್ಸೂಚನೆ ನೀಡಿದ್ದಾರೆ.

ಸೂರಿ ಅವ್ರ ಕಥೆ, ಮೇಕಿಂಗ್ ಪ್ಯಾಟ್ರನ್, ಪಾತ್ರಗಳ ಸೃಷ್ಟಿ ಹೀಗೆ ಎಲ್ಲವೂ ಸಿನಿಮಾಗೆ ಪ್ಲಸ್ ಆಗಲಿದ್ದು, ಬಹುತೇಕ ಶೂಟಿಂಗ್ ಮುಗಿಸಿ, ಕೊನೆಯ ಹಂತ ತಲುಪಿದೆ ಟೀಂ. ನಾಯಕನಟನಾಗಿ ಅಭಿಷೇಕ್ ಅಬ್ಬರಿಸಿದ್ರೆ, ಖಳನಾಯಕನಾಗಿ ರೋಚಿತ್ ಮಿಂಚಲಿದ್ದಾರೆ. ಸದ್ಯ ಟೀಸರ್​ಗಳು ಸಂಚಲನ ಮೂಡಿಸಿದ್ದು, ಆನಂದ್ ಆಡಿಯೋ ಚಿತ್ರದ ಆಡಿಯೋ ಹಕ್ಕುಗಳನ್ನ ಖರೀದಿಸಿದೆ. ನಿರ್ಮಾಪಕ ಸುಧೀರ್, ನಿರ್ದೇಶಕ ಸೂರಿ, ನಟ ಅಭಿಷೇಕ್ ಎಲ್ರೂ ದಿಲ್​ಖುಷ್ ಆಗಿದ್ದು, ರೆಬೆಲ್ ಸ್ಟಾರ್ ಫ್ಯಾನ್ಸ್ ಡಬಲ್ ಖುಷಿ ಆಗಿದ್ದಾರೆ.

ಸದ್ಯದಲ್ಲೇ ರಿಲೀಸ್ ಡೇಟ್ ಅಪ್ಡೇಟ್ ಹೊರಬೀಳಲಿದ್ದು, ಇದು ಅಭಿ ಕರಿಯರ್​ನ ಬೆಸ್ಟ್ ಸಿನಿಮಾ ಆಗಲಿದೆ. ಅಮರ್ ನಿರೀಕ್ಷಿತ ಮಟ್ಟಕ್ಕೆ ಸದ್ದು ಮಾಡಲಿಲ್ಲವಾದ್ರೂ, ಸೂರಿಯವ್ರ ಈ ಪ್ರಾಜೆಕ್ಟ್ ಮಸ್ತ್ ಮಜಾ ಕೊಡಲಿದೆ ಎನ್ನಲಾಗ್ತಿದೆ. ಇದಲ್ಲದೆ, ಕಾಳಿ ಹಾಗೂ ಇನ್ನೂ ಹೆಸರಿಡದ ಸಿನಿಮಾವೊಂದಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿರೋ ಅಭಿ, ತೂಕ ಇಳಿಸಿಕೊಂಡು ಗೆಟಪ್ ಬದಲಾಯಿಸೋ ಕಾರ್ಯದಲ್ಲಿ ಬ್ಯುಸಿ ಆಗಿದ್ದಾರೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES
- Advertisment -
Google search engine

Most Popular

Recent Comments