Saturday, August 23, 2025
Google search engine
HomeUncategorizedಕ್ಲಬ್ ಹೌಸ್ ಗ್ರೂಪ್ ಮೇಲೆ ದಾಖಲಾಯ್ತು ಎಫ್‌ಐಆರ್..!

ಕ್ಲಬ್ ಹೌಸ್ ಗ್ರೂಪ್ ಮೇಲೆ ದಾಖಲಾಯ್ತು ಎಫ್‌ಐಆರ್..!

ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಕಳೆದ ಎರಡು ದಿನಗಳಿಂದಲೂ ಕ್ಲಬ್ ಹೌಸ್ ಗ್ರೂಪ್ ನಲ್ಲಿ ಚರ್ಚೆಯಾದ ವಿಚಾರಗಳದ್ದೆ ಮಾತು. ಕೆಲವು ಕಿಡಿಗೇಡಿಗಳು ಕಳೆದ ಎರಡು ದಿನಗಳಿಂದಲೂ ನಮ್ಮ ದೇಶದಲ್ಲಿ ಇದ್ದುಕೊಂಡೇ, ಉದ್ಯೋಗ, ವಸತಿ ಎಲ್ಲವನ್ನೂ ಇಲ್ಲಿಂದಲೇ ಪಡೆದುಕೊಂಡು ಪಾಕಿಸ್ತಾನವನ್ನು ಹಾಡಿ ಹೊಗಳುತ್ತಿದ್ದಾರೆ.

ಮಾನ್ಯತಾ ಟೆಕ್ ಪಾರ್ಕ್‌ನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡ್ತಿರುವ ಕೆಲವರು ಈ ” ಕ್ಲಬ್ ಹೌಸ್ ” ಅನ್ನೋ ಗ್ರೂಪ್ ಕ್ರಿಯೇಟ್ ಮಾಡಿಕೊಂಡು ಪಾಕಿಸ್ತಾನ ಜಿಂದಾಬಾದ್ ಅಂತ ಚಾಟ್ ಮಾಡ್ತಾ ಇದಾರೆ. ಈ ವಿಚಾರವನ್ನು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ತುಂಬಾ ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ಕೂಡ ದಾಖಲಾಗಿದೆ. ಆದರೆ, ಇಲ್ಲಿಯವರೆಗೂ ಯಾರನ್ನು ಕೂಡ ಬಂಧನ ಮಾಡಿಲ್ಲ.

ಮಂಗಳವಾರ ಈ ಗ್ರೂಪ್‌ನ ಸದಸ್ಯರು ಇಂಡಿಯಾ ಹಾಗೂ ಇಂಡಿಯನ್ಸ್ ಬಗ್ಗೆ ಲೂಸ್ ಟಾಕ್ ಮಾತನಾಡಿದ್ದರು. ಯುವಕನೊಬ್ಬ ಈ ಬಗ್ಗೆ ದೂರು ಕೊಟ್ಟಿದ್ರು. ಈ ಗ್ರೂಪ್‌ನ ಸದಸ್ಯರು ಮಾತ್ರ ತಮ್ಮ ಚಾಳಿ ಮಾತ್ರ ಬಿಟ್ಟಿಲ್ಲ. ಬುಧವಾರವೂ ಸಹ ಕೆಲವರು ಈ ಗ್ರೂಪ್‌ನಲ್ಲಿ ಮೆಸೇಜ್ ಮಾಡಿದ್ದಾರೆ. ನಮ್ಮನ್ನು ಯಾರೂ ಏನೂ ಮಾಡಿಕೊಳ್ಳೋದಕ್ಕೆ ಆಗಲ್ಲ ಎಂದು ಮೆಸೇಜ್ ಮಾಡಿದ್ದಾರೆ.

ಸದ್ಯ ಈ ಗ್ರೂಪ್‌ನಲ್ಲಿ ಒಟ್ಟು 8 ಸಾವಿರ ಜನ ಇದಾರೆ. ಪೊಲೀಸರು ಈ ಗ್ರೂಪ್ ಕ್ರಿಯೇಟ್ ಯಾರು ಮಾಡಿದ್ದು, ಇದರ ಸೂತ್ರಧಾರ ಯಾರು ಅನ್ನೋ ವಿಚಾರವನ್ನು ಕಲೆಕ್ಟ್ ‌ಮಾಡ್ತಾ ಇದಾರೆ. ಅದೇನೇ ಇರಲಿ. ನಮ್ಮ ರಾಜ್ಯದಲ್ಲಿ ಅನ್ನ ತಿಂದು ಬೇರೆ ದೇಶವನ್ನು ಅದರಲ್ಲೂ ನಮ್ಮ ಬದ್ಧ ವೈರಿ ದೇಶವನ್ನು ಹೊಗಳೊ ಈ ಕಿಡಿಗೇಡಿಗಳಿಗೆ ಏನ್ ಮಾಡಬೇಕು ನೀವೇ ಹೇಳಿ.

ಅಶ್ವಥ್ ಎಸ್.ಎನ್.ಕ್ರೈಂ ಬ್ಯೂರೋ ಪವರ್ ಟಿವಿ

RELATED ARTICLES
- Advertisment -
Google search engine

Most Popular

Recent Comments