Saturday, August 30, 2025
HomeUncategorizedಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಧ್ವಜಾರೋಹಣಕ್ಕೆ ಭರ್ಜರಿ ಸಿದ್ದತೆ

ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಧ್ವಜಾರೋಹಣಕ್ಕೆ ಭರ್ಜರಿ ಸಿದ್ದತೆ

ಬೆಂಗಳೂರು : ರಾಜ್ಯದಲ್ಲಿ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂಭ್ರಮದಲ್ಲಿ ಸಿಎಂ ಬೊಮ್ಮಾಯಿ ಬೆಳಿಗ್ಗೆ 9 ಗಂಟೆಗೆ ಧ್ವಜಾರೋಹಣ ನೆರವೇರಿಸಲಿದ್ದಾರೆ.

ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸುತ್ತಿದ್ದು, ಕೊವಿಡ್​​ ಕಡಿಮೆಯಾದ ನಂತರ ಅದ್ದೂರಿಯಾಗಿ ಕಾರ್ಯಕ್ರಮ ನಡೆಯಿತ್ತಿದೆ. ಧ್ವಜಾರೋಹಣ ನಂತರ ತೆರದ ಜೀಪ್‌ನಲ್ಲಿ ಪರೇಡ್ ಪರಿವೀಕ್ಷಣೆ ಮಾಡಿ, ಗೌರವ ರಕ್ಷೆ ಸ್ವೀಕರಿಸಲಿರುವ ಸಿಎಂ ಆ ನಂತರ ಸಿಎಂ ರಿಂದ ಸ್ವಾತಂತ್ರೋತ್ಸವದ ಸಂದೇಶ ನೀಡಲಿದ್ದಾರೆ.

ಇನ್ನು, ಕೆಎಸ್ಆರ್ಪಿ, ಸಿಎಆರ್ಪಿಎಫ್, ಬಿಎಸ್ಎಫ್, ಸಿಎಆರ್, ಪೊಲೀಸ್ ಟ್ರಾಫಿಕ್, ಮಹಿಳಾ ಟ್ರಾಪಿಕ್, ಹೋಮ್ ಗಾರ್ಡ್ ಅಗ್ನಿಶಾಮಕ, ಶ್ವಾನದಳ ಸೇರಿದಂತೆ ಮತ್ತು ಬ್ಯಾಂಡ್ ನ ಒಟ್ಟು ೩೬ ತುಕಡಿಗಳಲ್ಲಿ ಸುಮಾರು 1200 ಮಂದಿ ಪಥಸಂಚಲನ ಇದ್ದು, ಗಾಯಕ ಕಿಕ್ಕಿರೇ ಕೃಷ್ಣಮೂರ್ತಿ ತಂಡದಿಂದ ನಾಡಗೀತೆ ಮತ್ತು ರೈತಗೀತೆ ಮೊಳಗಲಿದೆ.

ಅದಲ್ಲದೇ, ೮೦೦ ಮಕ್ಕಳಿಂದ ಅಮೃತ ಮಹೋತ್ಸವದ ಭಾರತದ ಸಂಭ್ರಮ ನೃತ್ಯ ಪ್ರದರ್ಶನ ಪ್ರದರ್ಶಿಸಲಿದ್ದು, ೮೦೦ ಮಕ್ಕಳಿಂದ ಈಸೂರು ಹೋರಾಟ ಹಾಗೂ ಜೈ ಜವಾನ್ ಮತ್ತು ಜೈ ಕಿಸಾನ್ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಈ ಬಾರಿ ದೇಹದಾಂಢರ್ಯ ಪ್ರದರ್ಶನ ಇರುತ್ತದೆ.

RELATED ARTICLES
- Advertisment -
Google search engine

Most Popular

Recent Comments