Monday, August 25, 2025
Google search engine
HomeUncategorizedಬಿಜೆಪಿ, RSS ನವರು ಬ್ರಿಟಿಷರ ಗುಲಾಮರು : ಸಿದ್ದರಾಮಯ್ಯ

ಬಿಜೆಪಿ, RSS ನವರು ಬ್ರಿಟಿಷರ ಗುಲಾಮರು : ಸಿದ್ದರಾಮಯ್ಯ

ಬೆಂಗಳೂರು : RSS ಮೇಲ್ಜಾತಿಯ ಸಂಘಟನೆ, ಹರ್ ಘರ್ ತಿರಂಗಾ ಅಂತ ಆಚರಿಸುತ್ತಿದ್ದಾರೆ, ಬಿಜೆಪಿ, RSS ನವರು ಬ್ರಿಟಿಷರ ಗುಲಾಮರು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಗಪುರದ RSS ಕಚೇರಿಯಲ್ಲಿ ೫೨ ವರ್ಷ ಇವರು ತ್ರಿವರ್ಣ ಧ್ವಜ ಹಾರಿಸಿರಲಿಲ್ಲ. ನಮ್ಮ ಉಗ್ರಪ್ಪ ಕೂಡ RSS ನಲ್ಲೂ ಇದ್ರು, ಅವರಿಗೆ ನಮಗಿಂತ ಚೆನ್ನಾಗಿ ಗೊತ್ತಿದೆ. RSSನವರ ಬುದ್ಧಿ ಅವರಿಗೆ ಗೊತ್ತಿದೆ. ನಾನು ಹಿಂದೆ ಸ್ಟೂಡೆಂಟ್ ಯೂನಿಯನ್​​ನಲ್ಲಿದೆ. ಆಗಿನಿಂದಲೂ ಎಬಿವಿಪಿ ವಿರೋಧ ಮಾಡಿದ್ದೆ ಎಂದರು.

ಅದಲ್ಲದೇ, RSS ಮೊದಲಿನಿಂದ ವಿರೋಧವಿದೆ. ಚತುರ್ವರ್ಣ ವ್ಯವಸ್ಥೆ ಮೇಲೆ ನಂಬಿಕೆ ಇಟ್ಟವರು RSS, ಆ ವ್ಯವಸ್ಥೆ ಇದ್ದರೆ ಅಸಮಾನತೆ ಮುಂದುವರೆಯುತ್ತೆ. ಗುಲಾಮಗಿರಯೂ ಮುಂದುವರೆಯುತ್ತೆ. ಹಾಗಾಗಿ ಅಂದಿನಿಂದ ವಿರೋಧ ಮಾಡುತ್ತಲೇ ಬಂದಿದ್ದೇನೆ.

ಭಜರಂಗದಳ,ಹಿಂದೂ ಸಂಘಟನೆ ಎಲ್ಲ ಒಂದೇ ಗಿರಾಕಿಗಳು. ಸಮಾಜದಲ್ಲಿ ಅಸಮಾನತೆ ಇದ್ದರೆ ಜಾತಿವ್ಯವಸ್ಥೆ ಕಾರಣ. ಸಾವಿರಾರು ವರ್ಷ ಜಾತಿವ್ಯವಸ್ಥೆ ಇತ್ತು. ಹೆಣ್ಣುಮಕ್ಕಳಿಗೆ ವಿದ್ಯೆ ಕಲಿಯಲು ಅವಕಾಶ ಇರಲಿಲ್ಲ. ಶೂದ್ರರಿಗೆ ವಿದ್ಯೆ ಕಲಿಯಲು ಅವಕಾಶ ಇರಲಿಲ್ಲ. ಬಸವಣ್ಣನವರು ಬಂದ ನಂತರ ಮಹಿಳೆಯರಿಗೆ ಓದಲು ಅವಕಾಶ ಸಿಕ್ಕಿದ್ದು ಎಂದು ಹೇಳಿದರು.

ಇನ್ನು, ರಾಷ್ಟ್ರಧ್ವಜ, ರಾಷ್ಟ್ರಗೀತೆ, ಸಂವಿಧಾನವನ್ನೇ ಇವರು ವಿರೋಧಿಸ್ತಾರೆ. ಇವರಿಗೆ ದೇಶಪ್ರೇಮ ಬರಲು ಸಾಧ್ಯನಾ..? ಈಗ ನಾಟಕ ಆಡೋಕೆ ಶುರು ಮಾಡಿದ್ದಾರೆ. ಪ್ರಧಾನಿ ಮೋದಿ ಒಬ್ಬ ದೊಡ್ಡ ನಾಟಕಕಾರ ಎಂದು ಬಿಜೆಪಿ, RSS ವಿರುದ್ಧ ಸಿದ್ದು ವಾಗ್ದಾಳಿ ಮಾಡಿದ್ದಾರೆ.

RELATED ARTICLES
- Advertisment -
Google search engine

Most Popular

Recent Comments