Saturday, August 23, 2025
Google search engine
HomeUncategorizedಬಿಜೆಪಿ, ಕಾಂಗ್ರೆಸ್​​ನಂತೆ ಹೆಣದ ಮೇಲೆ ರಾಜಕೀಯ ಮಾಡಲ್ಲ: ಹೆಚ್ಡಿಕೆ

ಬಿಜೆಪಿ, ಕಾಂಗ್ರೆಸ್​​ನಂತೆ ಹೆಣದ ಮೇಲೆ ರಾಜಕೀಯ ಮಾಡಲ್ಲ: ಹೆಚ್ಡಿಕೆ

ಕಲಬುರಗಿ: ಬಿಜೆಪಿ, ಕಾಂಗ್ರೆಸ್​​ನಂತೆ ಹೆಣದ ಮೇಲೆ ರಾಜಕೀಯ ಮಾಡುವವರು ನಾವಲ್ಲ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.

ಮಂಗಳೂರಿನಲ್ಲಿ ಸರಣಿ ಕೊಲೆಗಳ ವಿಚಾರಕ್ಕೆ ಸಂಬಂಧಿಸಿದಂತೆ ಕಲಬುರಗಿಯಲ್ಲಿ ಆಯೋಜಿಸಿದ್ದ ಜೆಡಿಎಸ್ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ಸಿಎಂ ಕೇವಲ ಒಂದು ವರ್ಗದ ವ್ಯಕ್ತಿಯ ಮನೆಗೆ ಮಾತ್ರ ಭೇಟಿ ಕೊಟ್ಟಿದ್ದಾರೆ. ಕೊಲೆಯಾದ ಇನ್ನೊಂದು ವರ್ಗದ ಯುವಕನ ಮನೆಗೆ ಸಿಎಂ ಹೋಗಿಲ್ಲ.ಯಾಕೆ ಕೇವಲ ಒಂದು ವರ್ಗದ ಜನರ ರಕ್ಷಣೆಗೆ ಸರ್ಕಾರ ಇದೆಯಾ ? ಕಳೆದ ನಾಲ್ಕು ತಿಂಗಳಲ್ಲಿ ರಾಜ್ಯದಲ್ಲಿ ಕೋಮು ಸಂಘರ್ಷಗಳು ಹೆಚ್ಚುತ್ತಿವೆ. ಹಿಂದೂಗಳ ಹೆಸರಿನಲ್ಲಿ ರಾಜಕೀಯ ಮಾಡಿ ನಾಡನ್ನು ನಿರ್ನಾಮ ಮಾಡಲು ಬಿಜೆಪಿ ಹೊರಟಿದೆ ಎಂದು ಆಡಳಿತ ಪಕ್ಷದ ವಿರುದ್ಧ ಕಿಡಿಕಾಡಿದರು.

ಇನ್ನು ನನಗೆ ಐವತ್ತು ಸ್ಥಾನ ಗೆಲ್ಲೋದು ಕಷ್ಟ ಅಲ್ಲವೇ ಅಲ್ಲ. ಆದ್ರೆ ಮತ್ತಿಬ್ಬರ ಬೆಂಬಲದಿಂದ ಸರ್ಕಾರ ಮಾಡಿದ್ರೆ ಅವರ ಹಂಗಿನಲ್ಲಿ ಆಡಳಿತ ನಡೆಸಬೇಕಾಗುತ್ತದೆ. ನನಗೆ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ತನ್ನಿ. ಬಿಜೆಪಿ, ಕಾಂಗ್ರೆಸ್​​ನಂತೆ ಹೆಣದ ಮೇಲೆ ರಾಜಕೀಯ ಮಾಡುವವರು ನಾವಲ್ಲ. ಸಮಗ್ರ ಕರ್ನಾಟಕದ ಅಭಿವೃದ್ದಿ ದೃಷ್ಟಿಯಿಂದ ಈ ಬಾರಿ ಜೆಡಿಎಸ್​​ಗೆ ಬಹುಮತದೊಂದಿಗೆ ಅಧಿಕಾರಕ್ಕೆ ತನ್ನಿ ಎಂದು ಸಮಾವೇಶದಲ್ಲಿ ಕುಮಾರಸ್ವಾಮಿ ಅವರು ಮನವಿ ಮಾಡಿಕೊಂಡರು.

RELATED ARTICLES
- Advertisment -
Google search engine

Most Popular

Recent Comments