Thursday, August 28, 2025
HomeUncategorizedಹೊಸ ಸಂಸತ್ ಭವನದ ಮೇಲೆ ಬೃಹತ್​​ ರಾಷ್ಟ್ರ ಲಾಂಛನ: ಮೋದಿಯಿಂದ ಅನಾವರಣ

ಹೊಸ ಸಂಸತ್ ಭವನದ ಮೇಲೆ ಬೃಹತ್​​ ರಾಷ್ಟ್ರ ಲಾಂಛನ: ಮೋದಿಯಿಂದ ಅನಾವರಣ

ನವದೆಹಲಿ : ನೂತನ ಸಂಸತ್‌ ಭವನ ವಿನೂತನವಾಗಿ ನಿರ್ಮಾಣಗೊಳ್ಳುತ್ತಿದೆ.. ಇದೀಗ, ಅದಕ್ಕೆ ಮುಕುಟದಂತೆ ಕಳೆ ಕಟ್ಟಿಕೊಟ್ಟಿದೆ ರಾಷ್ಟ್ರ ಲಾಂಛನ.. ಹೌದು, ಪ್ರಧಾನಿ ನರೇಂದ್ರ ಮೋದಿ ಲಾಂಛನ ಅನಾವರಣಗೊಳಿಸಿದ್ದು, ಅತ್ಯಾಕರ್ಷವಾಗಿದೆ. ಆದ್ರೆ, ಇದ್ರಲ್ಲೂ ಉಳುಕು ಹುಡುಕುತ್ತಿದ್ದಾರೆ ಕೆಲ ನಾಯಕರು.

ನೂತನ ಸಂಸತ್ ಭವನದ ಮೇಲೆ ಸ್ಥಾಪಿಸಲಾಗಿರುವ 6.5 ಮೀಟರ್ ಎತ್ತರದ ರಾಷ್ಟ್ರ ಲಾಂಛನವನ್ನು ಪ್ರಧಾನಿ ನರೇಂದ್ರ ಮೋದಿ ಅನಾವರಣಗೊಳಿಸಿದರು. ಕಂಚಿನದಲ್ಲಿ ನಿರ್ಮಿಸಲಾಗಿರುವ ನಾಲ್ಕು ದಿಕ್ಕುಗಳನ್ನು ನೋಡುತ್ತಿರುವ ಸಿಂಹಗಳ ಮುಖಗಳಿರುವ ‘ರಾಷ್ಟ್ರ ಲಾಂಛನ ಇದೀಗ ಎಲ್ಲರ ಗಮನ ಸೆಳೆಯುತ್ತಿದೆ.. ಈ ಲಾಂಛನ ಒಟ್ಟು 9,500 ಕೆ.ಜಿ ತೂಕವಿದೆ.

ನೂತನ ಸಂಸತ್ ಕಟ್ಟಡದ ಮಧ್ಯದ ಪ್ರವೇಶ ಹಜಾರದ ಮೇಲ್ಭಾಗದಲ್ಲಿ ಈ ಬೃಹತ್ ರಾಷ್ಟ್ರೀಯ ಲಾಂಭವನ್ನು ಸ್ಥಾಪಿಸಲಾಗಿದೆ. ಇದಕ್ಕೆ ಆಧಾರವಾಗಿ ಸ್ಟೀಲ್‌ನಲ್ಲಿ ರಚನೆಯನ್ನು ನಿರ್ಮಿಸಲಾಗಿದ್ದು, ಅದರ ತೂಕ 6,500 ಕೆ.ಜಿಯಷ್ಟಿದೆ.

ಇದೇ ವೇಳೆ, ಹೊಸ ಸಂಸತ್ ಭವನದ ನಿರ್ಮಾಣ ಕಾರ್ಯದಲ್ಲಿ ತೊಡಗಿರುವ ನೌಕರರ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಾತುಕತೆ ನಡೆಸಿದರು. ಕಂಚಿನಿಂದ ಮಾಡಿರುವ ರಾಷ್ಟ್ರೀಯ ಲಾಂಭನವನ್ನು ಸಂಸತ್ ಭವನದ ಮೇಲೆ ಸ್ಥಾಪಿಸುವ ಪ್ರಕ್ರಿಯೆಯು ಎಂಟು ಬೇರೆ ಬೇರೆ ಹಂತಗಳನ್ನು ಒಳಗೊಂಡಿತ್ತು. ಮಣ್ಣಿನಲ್ಲಿ ಮೊದಲಿಗೆ ಮಾದರಿ ರೂಪಿಸಿದ್ದರಿಂದ ಹಿಡಿದು ಕಂಪ್ಯೂಟರ್ ಗ್ರಾಫಿಕ್ಸ್ ಹಾಗೂ ಕಂಚಿನಲ್ಲಿ ಅದರ ಅಚ್ಚು, ನಯಗೊಳಿಸುವ ಹಂತಗಳು ಸೇರಿವೆ.

ಈ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರೊಂದಿಗೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಹಾಗೂ ಕೇಂದ್ರದ ಸಚಿವರು ಭಾಗಿಯಾದರು.

ಆದರೆ, ಸಂಸತ್‌ ಭವನದ ಕಾಮಗಾರಿಯನ್ನು ಪ್ರಧಾನಿ ನರೇಂದ್ರ ಮೋದಿ ಒಬ್ಬರೇ ಅನಾವರಣ ಮಾಡಿದ್ದಕ್ಕೆ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್‌ ಓವೈಸಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಹಕ್ಕು ಲೋಕಸಭೆ ಸ್ಪೀಕರ್‌ಗೆ ಸೇರಿದ್ದು ಎಂದು ಓವೈಸಿ ಟ್ವೀಟ್‌ ಮಾಡಿದ್ದಾರೆ. ನಮ್ಮ ದೇಶದ ಸಂವಿಧಾನದಲ್ಲಿ ಸರ್ಕಾರ ಮತ್ತು ನ್ಯಾಯಾಂಗದ ಅಧಿಕಾರಗಳನ್ನು ತುಂಬಾ ಪ್ರತ್ಯೇಕವಾಗಿ ಚಿತ್ರಿಸಲಾಗಿದೆ. ಪ್ರಧಾನಿ ಮೋದಿ ಅವರ ಸರ್ಕಾರ ಮುಖ್ಯಸ್ಥರಾಗಿದ್ದಾರೆ. ಹೊಸ ಸಂಸತ್ತಿನ ಕಟ್ಟಡದ ಮೇಲೆ ರಾಷ್ಟ್ರೀಯ ಲಾಂಛನವನ್ನು ಅವರು ಅನಾವರಣ ಮಾಡಬಾರದು. ಸಂಸತ್‌ ಭವನದ ಎಲ್ಲಾ ಅಧಿಕಾರಗಳೂ ಸ್ಪೀಕರ್‌ಗಳ ಅಧಿಕಾರದ ವ್ಯಾಪ್ತಿಗೆ ಬರುತ್ತದೆ ಎಂದು ಬರೆದುಕೊಂಡಿದ್ದಾರೆ.

ದೇಶದ ವಿವಿಧ ಭಾಗಗಳಿಂದ 100 ಕ್ಕೂ ಹೆಚ್ಚು ಕುಶಲಕರ್ಮಿಗಳು ಲಾಂಛನದ ವಿನ್ಯಾಸ, ಕರಕುಶಲ ಕಲಾವಿದರು ಆರು ತಿಂಗಳ ಕಾಲ ಕೆಲಸ ಮಾಡಿದ್ದಾರೆ.. ವಸ್ತು ಮತ್ತು ಕರಕುಶಲತೆಯ ದೃಷ್ಟಿಕೋನದಿಂದ ಭಾರತದಲ್ಲಿ ಬೇರೆಲ್ಲಿಯೂ ಇದೇ ರೀತಿಯ ಲಾಂಛನದ ಚಿತ್ರಣವಿಲ್ಲ. ಆದ್ರೆ, ಮೋದಿ ಅನಾವರಣ ಮಾಡಿದ್ದಕ್ಕೆ ಕಾಂಗ್ರೆಸ್‌ ನಾಯಕರು ಸೇರಿ ಹಲವರು ವಿರೋಧ ವ್ಯಕ್ತಪಡಿಸಿದ್ದಾರೆ.

ಬ್ಯೂರೋ ರಿಪೋರ್ಟ್‌ ಪವರ್‌ ಟಿವಿ

RELATED ARTICLES
- Advertisment -
Google search engine

Most Popular

Recent Comments