Tuesday, September 2, 2025
HomeUncategorizedಮಂಡ್ಯದಲ್ಲಿ 18 ವರ್ಷಗಳ ಬಳಿಕ ದೇವಿಗೆ ಸಿಕ್ತು ಮುಕ್ತಿ

ಮಂಡ್ಯದಲ್ಲಿ 18 ವರ್ಷಗಳ ಬಳಿಕ ದೇವಿಗೆ ಸಿಕ್ತು ಮುಕ್ತಿ

ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಜಕ್ಕನಹಳ್ಳಿ ಗ್ರಾಮದಲ್ಲಿರುವ ಈ ದೇವಾಲಯಕ್ಕೆ ತಾಲೂಕು ಆಡಳಿತದ ವತಿಯಿಂದ ಕಳೆದ 18 ವರ್ಷಗಳಿಂದ ಪೂಜೆ ಗಂಟಾನಾದವಿಲ್ಲದೆ ಸ್ಥಭ್ಧವಾಗಿತ್ತು.

ಇದು ಸುಮಾರು 350 ರಿಂದ 400 ವರ್ಷಗಳ ಕಾಲ ಇತಿಹಾಸವಿರುವ ಚಾಮುಂಡೇಶ್ವರಿ ದೇವಾಲಯ. ಇಲ್ಲಿ ಯಾರೊಬ್ಬರ ಎಂಟ್ರಿಗೂ ಅವಕಾಶವಿಲ್ಲದ್ದರಿಂದ ದೇವಾಲಯ ಪಾಳುಬಿದ್ದ ಮನೆಯಂತಾಗಿತ್ತು. ಹದಿನೆಂಟು ವರ್ಷಗಳಿಂದ ಯಾರು ಏನೇ ಪ್ರಯತ್ನಪಟ್ಟರೂ ದೇವಾಲಯ ಮಾತ್ರ ಓಪನ್ ಆಗುತ್ತಿರಲಿಲ್ಲ. ಅದಕ್ಕೆ ಕಾರಣವಾಗಿದ್ದು ಗ್ರಾಮದ ಜನರಲ್ಲಿ ಮನೆ ಮಾಡಿದ್ದ ಜಾತೀಯತೆ ಎಂಬ ಭೂತ. ದೇವಾಲಯಕ್ಕೆ ದಲಿತರ ಪ್ರವೇಶ ನಿರಾಕರಿಸಿದ್ದರಿಂದ ದೊಡ್ಡ ಜಗಳವೇ ನಡೆದಿತ್ತು. ಅಂದು ದೇವಾಲಯಕ್ಕೆ ಹಾಕಿದ್ದ ಬಾಗಿಲನ್ನ ತೆಗೆದೆ ಇರಲಿಲ್ಲ. ಕಡೆಗೂ ಸ್ಥಳೀಯ ಶಾಸಕ ರವೀಂದ್ರ ಶ್ರೀಕಂಠಯ್ಯರ ಪ್ರಯತ್ನದಿಂದಾಗಿ ಕಡೆಗೂ ದೇವಾಲಯದ ಬಾಗಿಲು ತೆರೆದಿದ್ದು, ದೇವಿಗೆ 18 ವರ್ಷಗಳ ಕಾಲ ನಿಂತಿದ್ದ ಪೂಜೆಗಳು ಆರಂಭವಾಯ್ತು.

ಸದ್ಯ ಗ್ರಾಮದಲ್ಲಿ ಜಾತೀಯತೆಯ ಭೂತ ತಣ್ಣಗಾಗಿದೆ. 18 ವರ್ಷ ಯಾವ್ದೆ ಹಬ್ಬ ಹರಿದಿನಗಳು ನಡೆಯದೆ ಗ್ರಾಮಸ್ಥರು ಬೇಸತ್ತಿದ್ದರು. ಕೊನೆಗೂ ತಾಯಿ ಚಾಮುಂಡಿಗೆ ಬಿಡುಗಡೆ ಭಾಗ್ಯ ಸಿಕ್ಕಿದ್ದು ದೇವಿಯನ್ನ ಕಂಡು ಗ್ರಾಮಸ್ಥರು ಪ್ರಸನ್ನರಾಗಿದ್ದಾರೆ.

RELATED ARTICLES
- Advertisment -
Google search engine

Most Popular

Recent Comments