ಬೆಂಗಳೂರು : ನಿಮ್ಮ ನೆಚ್ಚಿನ ಪವರ್ ಟಿವಿಯಲ್ಲಿ ” ಟ್ರಾಫಿಕ್ ಜಾಮ್ ” ಶೀರ್ಷಿಕೆ ಅಡಿಯಲ್ಲಿ ಪ್ರಸಾರವಾದ ಸ್ಟಿಂಗ್ ಅಪರೇಷನ್ ಕಾರ್ಯಕ್ರಮಕ್ಕೆ ರಾಜ್ಯಾದ್ಯಂತ ಸಾಕಷ್ಟು ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.. ಇನ್ನು ಪೊಲೀಸ್ ಇಲಾಖೆಯಲ್ಲೂ ಬ್ರಷ್ಟ ಅಧಿಕಾರಿಗಳು ನಡುಗಿ ಹೋಗಿದ್ದಾರೆ. ಗೃಹ ಸಚಿವರು ಈ ಪ್ರಕರಣವನ್ನು ತುಂಬಾನೆ ಸಿರಿಯಸ್ ಆಗಿ ತೆಗೆದುಕೊಂಡಿದ್ದಾರೆ. ಆದರೆ ಒಬ್ಬ ವ್ಯಕ್ತಿ ಮಾತ್ರ ಡೊಂಟ್ ಕೇರ್ ಅಂದಿದ್ದಾನೆ. ಆ ಭೂಪ ಯಾರು ಅಂತೀರಾ ?
ನಿಮ್ಮ ಪವರ್ ಟಿವಿ.. ಭ್ರಷ್ಟ ಅಧಿಕಾರಿಗಳ ವಿರುದ್ಧ ಸಮರ ಸಾರಿದೆ.. ” ಟ್ರಾಫಿಕ್ ಜಾಮ್ ” ಅನ್ನೋ ಶೀರ್ಷಿಕೆ ಅಡಿಯಲ್ಲಿ 11 ಜನ ಭ್ರಷ್ಟ ಟ್ರಾಫಿಕ್ ಪೊಲೀಸರ ಲಂಚಬಾಕತವನ್ನು ರಾಜ್ಯದ ಜನರ ಮುಂದೆ ತೆರೆದಿಟ್ಟಿತ್ತು.. ಅಷ್ಟೇ ಅಲ್ಲ, ಗೃಹಸಚಿವರು ಸಹ ಪವರ್ ಟಿವಿ ಜೊತೆ ಮಾತನಾಡಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಿತೀನಿ ಎಂದು ಭರವಸೆ ಕೊಟ್ಟಿದ್ರು.. ಪಶ್ಚಿಮ ವಿಭಾಗದ ಡಿಸಿಪಿ ಕುಲ್ದೀಪ್ ಜೈನ್ ನೇತೃತ್ವದ ತಂಡ ತನಿಖೆ ಕೂಡ ಮಾಡ್ತಾ ಇದೆ. ಆದರೆ, ಇಷ್ಟು ವರದಿ ಪ್ರಸಾರವಾದ ಬಳಿಕವೂ ಡೋಂಟ್ಕೇರ್ ವರ್ತನೆ ವ್ಯಕ್ತವಾಗಿದೆ.. ಈ ಸ್ಟೋರಿಯ ಮತ್ತೊಂದು ರೋಚಕ ಟ್ವಿಸ್ಟ್ ಏನು ಅನ್ನೋದನ್ನು ತೋರಿಸ್ತೀವಿ..ಅದೇನು ಅನ್ನೋದನ್ನು ರಾಜಾಜಿನಗರ ಟ್ರಾಫಿಕ್ ಪೊಲೀಸ್ ಠಾಣೆಯ ಎಸ್ ಬಿ ಭೋಜರಾಜ್ ಹೇಳಿದ್ದಾನೆ ಕೇಳಿ.
ಕೇಳಿದ್ರಲ್ಲ ಈ ಭೋಜರಾಜನ ಮಾತುಗಳನ್ನ.. ಲಂಚ ತೆಗೆದುಕೊಳ್ಳುವಾಗ ಪವರ್ ಟಿವಿ ಕೈಗೆ ಸಿಕ್ಕಿಬಿದ್ದಿದ್ದ.. ಆದ್ರೆ, ದೌಲತ್ ಮಾತಿಗೇನೂ ಕಡಿಮೆ ಇಲ್ಲ ರೀ. ಅಂದ ಹಾಗೆ ಈ ಭೋಜರಾಜ ಕಾನ್ಸ್ಟೇಬಲ್ ಮೋಹನ್ ಜೊತೆ ಮಾತನಾಡಿರೋ ಆಡಿಯೋ ವೈರಲ್ ಆಗಿದೆ.. ಆಡಿಯೋದಲ್ಲಿ ಡಿಸಿಪಿ ಕುಲ್ದೀಪ್ ಬಗ್ಗೆಯೂ ಅವಾಚ್ಯ ಶಬ್ದಗಳನ್ನು ಬಳಿಸಿ ಮಾತನಾಡಿದ್ದಾನೆ..
ಈ ಭೋಜರಾಜ, ಲಾಕಪ್ ಡೆತ್ ಕೇಸ್ ಬಗ್ಗೆಯೂ ಮಾತನಾಡುತ್ತಾನೆ.. ಇದ್ರ ಜೊತೆಗೆ 80 ಜನರ ಎಸ್ಬಿಗಳ ಪ್ರಮೋಷನ್ ಬಗ್ಗೆನೂ ಕೂಡ ಮಾತನಾಡಿದ್ದಾರೆ.
ಸದ್ಯ ಭೋಜರಾಜ್ ಹಾಗೂ ಮೋಹನ್ ಮಾತನಾಡಿರುವ ಆಡಿಯೋ ವೈರಲ್ ಆಗಿದ್ದು.. ಹಿರಿಯ ಅಧಿಕಾರಿಗಳು ಇವರ ಆಡಿಯೋ ಗೆ ಯಾವ ರೀತಿ ರೆಸ್ಪಾನ್ಸ್ ಕೊಡ್ತಾರೆ ಕಾದು ನೋಡಬೇಕಾಗಿದೆ.. ಒಟ್ಟಾರೆ ಇಂಥ ತಿಮಿಂಗಿಲಗಳು ಪೊಲೀಸ್ ಇಲಾಖೆಯಲ್ಲಿ ಇರೋವರೆಗೂ ಬಡವರಿಗೆ ನ್ಯಾಯನೂ ಸಿಗಲ್ಲ..ಭ್ರಷ್ಟಾಚಾರನೂ ಕಡಿಮೆ ಆಗಲ್ಲ. ಸೋ ಇಂತವರ ಬಗ್ಗೆ ಕ್ರಮಜರುಗಸಿ ಅನ್ನೋದೇ ಎಲ್ಲರ ಆಗ್ರಹ..
ಕ್ರೈಂ ಬ್ಯೂರೋ ಪವರ್ ಟಿವಿ


