Sunday, August 24, 2025
Google search engine
HomeUncategorizedಚಂದ್ರಶೇಖರ್ ಗುರೂಜಿ ಹತ್ಯೆಯಾದ ಸ್ಥಳದಲ್ಲಿ ಹೋಮ-ಹವನ

ಚಂದ್ರಶೇಖರ್ ಗುರೂಜಿ ಹತ್ಯೆಯಾದ ಸ್ಥಳದಲ್ಲಿ ಹೋಮ-ಹವನ

ಹುಬ್ಬಳ್ಳಿ:  ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ್ ಗುರೂಜಿ ಕೊಲೆ ಆರೋಪಿಗಳನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಮತ್ತೊಂದು ಕಡೆ  ಕೊಲೆ ನಡೆದಿದ್ದ ಪ್ರೆಸಿಡೆಂಟ್ ಹೋಟೆಲ್ ಸಿಬ್ಬಂದಿ ದೇವರ ಮೊರೆ ಹೋಗಿ ಶಾಂತಿ ಪೂಜೆ ಮಾಡುತ್ತಿದ್ದಾರೆ.

ದೇಶಾದ್ಯಂತ ಸರಳ ವಾಸ್ತು ಮೂಲಕ ಪ್ರಖ್ಯಾತರಾಗಿದ್ದ ಚಂದ್ರಶೇಖರ್ ಗುರೂಜಿ ಹತ್ಯೆ ಪ್ರಕರಣದ ತನಿಖೆ ಚುರಕುಗೊಂಡಿದೆ.ಗುರೂಜಿ ಅವರ ಮಾಜಿ ಉದ್ಯೋಗಿಗಳು ಪೊಲೀಸರ ಮುಂದೆ ಕೊಲೆಯ ಕಾರಣವನ್ನು ಒಂದೊಂದಾಗಿಯೇ ಬಿಚ್ಚಿಡುತ್ತಿದ್ದಾರೆ. ಪೊಲೀಸ್ ಠಾಣೆಯಲ್ಲಿ 2 ದಿನ ಕಳೆದರೂ ಆರೋಪಿ ಮಹಾಂತೇಶ್, ಮಂಜುನಾಥ್ ಮಾತ್ರ ಕಿಂಚಿತ್ತೂ ಕಣ್ಣೀರು ಹಾಕಿಲ್ಲವಂತೆ.ಪೊಲೀಸ್ ಭಾಷೆಗೆ ಒಂದೇ ಸಾರಿ ಎಲ್ಲಾ ಸತ್ಯ ಕಕ್ಕಿರುವ ಕೊಲೆಗಡುಕರು ಮುಖ್ಯವಾಗಿ ಗುರೂಜಿ ಇವರ ಹೆಸರಿನಲ್ಲಿ ಮಾಡಿದ್ದ ಬೇನಾಮಿ ಆಸ್ತಿಯನ್ನು ಮಾರಾಟ ಮಾಡಲೂ ತಯಾರಿ ನಡೆಸಿದ್ದುದೇ ಕಾರಣ ಎಂದೂ ಹೇಳಿಕೆ ನೀಡಿದ್ದಾರೆ.

ಮತ್ತೊಂದು ಉಣಕಲ್ ಕೆರೆ ಬಳಿಯ ದಿ ಪ್ರೆಸಿಡೆಂಟ್ ಹೋಟೆಲ್‌ನಲ್ಲಿ ಚಂದ್ರಶೇಖರ್ ಗುರೂಜಿ ಅವರ ಬರ್ಬರ ಕೊಲೆ ಹಿನ್ನೆಲೆಯಲ್ಲಿ ಹೋಟೆಲ್ ಆಡಳಿತ ಮಂಡಳಿ & ಸಿಬ್ಬಂದಿ ವರ್ಗ ದೈವದ ಮೊರೆ ಹೋಗಿದ್ದಾರೆ.ಗುರೂಜಿ ಹತ್ಯೆ ನಡೆದ ಸ್ಥಳದಲ್ಲೇ ಹೋಟೆಲ್ ಆಡಳಿತ ಮಂಡಳಿ ಹೋಮ ಹಾಕಿಸಿದ್ದಾರೆ. ಗುರೂಜಿ ಕೊನೆಯುಸಿರೆಳೆದ ಸ್ಥಳದಲ್ಲೇ ಹೋಮ, ಹವನ ಮಾಡಿಸಲಾಗುತ್ತಿದೆ. ಗುರೂಜಿ ಹತ್ಯೆಯಿಂದ ತೀವ್ರ ಆತಂಕಗೊಂಡ ಸಿಬ್ಬಂದಿ. ಹೋಟೆಲ್‌ನಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.ಭಯ ದೂರ ಮಾಡಲು ಮತ್ತು ಹೋಟೆಲ್ ಶುಚಿಗೊಳಿಸಲು ಹೋಮ ಮಾಡಿದ್ದಾರೆ.ಹುಬ್ಬಳ್ಳಿಯ ಖ್ಯಾತ ಪುರೋಹಿತರಿಂದ ಪೂಜೆ ಮಾಡಲಾಗಿದೆ.ಹೋಟೆಲ್‌ಗೆ ಅಂಟಿದ ಕಳಂಕ ದೂರ ಮಾಡುವ ಪ್ರಯತ್ನ ಮಾಡಲಾಗುತ್ತಿದೆ.

ಸರಳ ವಾಸ್ತು ಮೂಲಕ ಸಹಸ್ರಾರು ಕೋಟಿ ಗಳಿಸಿ ಬೀಕರವಾಗಿ ಗುರೂಜಿಯನ್ನು ಕೊಲೆಗೈದ ಆರೋಪಿಗಳ ನಡೆ ಪೊಲೀಸರಿಗೂ ಅಚ್ಚರಿಯಾಗಿದೆ.ಇನ್ನು ಮತ್ತೊಂದು ಕಡೆ ಕೊಲೆಯಾದ ಸ್ಥಳದಲ್ಲಿ ಸುದರ್ಶನ ಹೋಮ ಮಾಡಿಸಿ ಹೋಟೆಲ್ ಸಿಬ್ಬಂದಿ ವಾಸ್ತು ಶಾಂತಿ ಮಾಡಿಸಲು ಮುಂದಾಗಿದ್ದಾರೆ.

ಮಲ್ಲಿಕ್ ಬೆಳಗಲಿ ಪವರ್ ಟಿವಿ ಹುಬ್ಬಳ್ಳಿ

RELATED ARTICLES
- Advertisment -
Google search engine

Most Popular

Recent Comments