Sunday, August 24, 2025
Google search engine
HomeUncategorized100 ಕೆಜಿಗೂ ಹೆಚ್ಚು ತೂಕದ ಹೆಬ್ಬಾವು ಸೆರೆ

100 ಕೆಜಿಗೂ ಹೆಚ್ಚು ತೂಕದ ಹೆಬ್ಬಾವು ಸೆರೆ

ಚಾಮರಾಜನಗರ: ಜಮೀನಿನಲ್ಲಿ ದಿಢೀರನೇ ಪ್ರತ್ಯಕ್ಷವಾದ ಭಾರೀ ಗಾತ್ರದ ಹೆಬ್ಬಾವನ್ನು ಸೆರೆ ಹಿಡಿದು ಕಾಡಿಗೆ ಬಿಟ್ಟಿರುವ ಘಟನೆ ಇಂದು ಚಾಮರಾಜನಗರ ತಾಲೂಕಿನ ಜ್ಯೋತಿಗೌಡನಪುರ ಸಮೀಪದ ಬೆಲವತ್ತ ಜಮೀನಿನಲ್ಲಿ ನಡೆದಿದೆ.

ಡಾ.ರಾಜೇಂದ್ರ ಎಂಬವರ ಜಮೀನಿನಲ್ಲಿ ಹೆಬ್ಬಾವು ಕಾಣಿಸಿಕೊಂಡಿದ್ದು ಅನಿರೀಕ್ಷಿತ ಅತಿಥಿ ಕಂಡ ಜಮೀನಿನ ಕೆಲಸಗಾರರು ದಿಕ್ಕಾಪಾಲಾಗಿ ಓಡಿದ್ದಾರೆ. ಇದರಿಂದ ಆತಂಕಗೊಂಡ ಮಾಲೀಕ ಹಾವು ಬಂದಿರುವ ವಿಚಾರವನ್ನು ಸ್ನೇಕ್ ಚಾಂಪ್ ಅವರಿಗೆ ತಿಳಿಸಿದ್ದಾರೆ.

ಸ್ಥಳಕ್ಕೆ ತೆರಳಿದ ಸ್ನೇಕ್ ಚಾಂಪ್ ಸತತ ಒಂದೂವರೆ ತಾಸು ಕಾರ್ಯಾಚರಣೆ ನಡೆಸಿ ಹಾವನ್ನು ಸೆರೆಹಿಡಿದಿದ್ದು, 100 ಕೆಜಿಗೂ ಹೆಚ್ಚು ತೂಗುವ ಈ ಹಾವು ಬರೋಬ್ಬರಿ 14 ಅಡಿ ಉದ್ದವಿದೆ.  ಬಳಿಕ ಈ ಹೆಬ್ಬಾವವನ್ನು ಆಟೋ, ಕಾರಿನಲ್ಲಿ ಕೊಂಡೊಯ್ಯಲಾಗದೇ ಟ್ರಾಕ್ಟರ್ ಮೂಲಕ ಹೆಬ್ಬಾವನ್ನು ಬಿಳಿಗಿರಿರಂಗನಾಥ ದೇವಾಲಯ ಹುಲಿ ಸಂರಕ್ಷಿತ ಪ್ರದೇಶದ ಕಾಡಿಗೆ ಬಿಡಲಾಗಿದೆ.

RELATED ARTICLES
- Advertisment -
Google search engine

Most Popular

Recent Comments