Tuesday, August 26, 2025
Google search engine
HomeUncategorizedಈ ವರ್ಷಾನೂ ಶೂ ಮತ್ತು ಸಾಕ್ಸ್ ಸಿಗೋದು ಡೌಟ್..!

ಈ ವರ್ಷಾನೂ ಶೂ ಮತ್ತು ಸಾಕ್ಸ್ ಸಿಗೋದು ಡೌಟ್..!

ಬೆಂಗಳೂರು : ಶಿಕ್ಷಣ ಇಲಾಖೆ ಕೊರೋನಾ ಹೆಸರಲ್ಲಿ ಒಂದೊಂದೇ ಮಹತ್ವಕಾಂಕ್ಷೆ ಯೋಜನೆಗೆ ಪಂಗನಾಮ ಹಾಕೋದಕ್ಕೆ ಮುಂದಾಗ್ತಾ ಇದೆ. ಈಗಾಗಲೇ ಸರ್ಕಾರಿ ಶಾಲಾ ಮಕ್ಕಳಿಗೆ ಸೈಕಲ್ ಶಾಕ್ ಕೊಟ್ಟಿದ್ದ ರಾಜ್ಯ ಸರ್ಕಾರ ಈಗ ಮತ್ತೊಂದು ಶಾಕ್ ಕೊಟ್ಟಿದೆ. ಸರ್ಕಾರಿ ಶಾಲಾ ಮಕ್ಕಳಿಗೆ ನೀಡುತ್ತಿದ್ದ ಶೂ ಮತ್ತು ಸಾಕ್ಸ್ ಈ ವರ್ಷ ಕೊಡಲ್ಲ ಎಂದಿದ್ದಾರೆ.

ಇನ್ನೂ ಈ ಬಗ್ಗೆ ಇಲಾಖೆಯನ್ನ ಪ್ರಶ್ನೆ ಮಾಡಿದ್ರೆ ಕೊರೋನಾ ಕಾರಣದಿಂದ ದೇಶ ಲರ್ನಿಂಗ್ ಲಾಸ್​ನಲ್ಲಿದೆ. ಗುಣಮಟ್ಟದ ಶಿಕ್ಷಣವನ್ನ ಕೊಡೋದೇ ನಮ್ಮ ಪ್ರಮುಖ ಆದ್ಯತೆ ಅಂತ ತಿಳಿಸೋ ಮೂಲಕ ಶೂ ಹಾಗೂ ಸಾಕ್ಸ್ ಯೋಜನೆಗೆ ಬಾಯ್ ಬಾಯ್ ಅಂತ ಪರೋಕ್ಷವಾಗಿ ಇಲಾಖೆ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ.

ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಶೂ ಮತ್ತು ಸಾಕ್ಸ್ ಯೋಜನೆಗೆ ಈ ವರ್ಷ ಸರ್ಕಾರ ಹಣವೇ ಇಟ್ಟಿಲ್ಲ. ಸರ್ಕಾರಿ ಶಾಲೆಗೆ ಸೇರುವ 1ರಿಂದ 10ನೇ ತರಗತಿವರೆಗಿನ ಬಡ ವಿದ್ಯಾರ್ಥಿಗಳಿಗೆ ಒಂದು ಜೊತೆ ಶೂ ಮತ್ತು ಎರಡು ಜೊತೆ ಸಾಕ್ಸ್ ನೀಡುವ ಯೋಜನೆ 2016ರಲ್ಲಿ ಜಾರಿ ಮಾಡಲಾಗಿತ್ತು. 2019-20ನೇ ಸಾಲಿನಲ್ಲಿ ಸರ್ಕಾರ ಈ ಯೋಜನೆಗೆ ಹಣ ಬಿಡುಗಡೆ ಮಾಡಿತ್ತು. 2020-21, 2021-22 ಮತ್ತು ಈ ವರ್ಷ ಮಕ್ಕಳಿಗೆ ಶೂ ಮತ್ತು ಸಾಕ್ಸ್ ಭಾಗ್ಯವೇ ಇಲ್ಲದಂತೆ ಆಗಿದೆ.

ಅಂದ ಹಾಗೆ ಸರ್ಕಾರಿ ಶಾಲೆಗಳಲ್ಲಿ ಸುಮಾರು 60-70 ಲಕ್ಷ ಮಕ್ಕಳು ಈ ಯೋಜನೆಯ ಫಲಾನುಭವಿಗಳಾಗಿದ್ದರು. ಆದ್ರೆ,ಇದಕ್ಕೆ ಈಗ ಆರ್ಥಿಕ ಕಾರಣ ಎಂದು ಸರ್ಕಾರ ಉತ್ತರಿಸುತ್ತಿದೆ. ಇದೇ ಹಣವನ್ನು ಶಿಕ್ಷಣದ ಗುಣಮಟ್ಟಕ್ಕೆ ಉಪಯೋಗಿಸಲಾಗುತ್ತದೆ ಅಂತ ಹೇಳಿ ನೇರವಾಗಿ ತಿಳಿಸಿದೆ. ಆದರೆ, ಈ ಪ್ಲ್ಯಾನ್ ಎಷ್ಟರಮಟ್ಟಿಗೆ ವರ್ಕೌಟ್ ಆಗುತ್ತೆ ಅನ್ನೋದನ್ನು ಮಾತ್ರ ಕಾದು ನೋಡಬೇಕಿದೆ.

ಸ್ವಾತಿ ಪುಲಗಂಟಿ ಮೆಟ್ರೋ ಬ್ಯೂರೋ ಬೆಂಗಳೂರು

RELATED ARTICLES
- Advertisment -
Google search engine

Most Popular

Recent Comments