Sunday, August 24, 2025
Google search engine
HomeUncategorizedಮೋದಿ ಕನಸ್ಸನ್ನು ಅಧಿಕಾರಿಗಳು ನನಸು ಮಾಡುತ್ತಾರೆ : ಪ್ರಿಯಾಂಕ್ ಖರ್ಗೆ

ಮೋದಿ ಕನಸ್ಸನ್ನು ಅಧಿಕಾರಿಗಳು ನನಸು ಮಾಡುತ್ತಾರೆ : ಪ್ರಿಯಾಂಕ್ ಖರ್ಗೆ

ಕಲಬುರಗಿ : ಬೇಸಿಕ್ ಪ್ರಶ್ನೆಗಳಿಗೆ ಮೋದಿ ಸರ್ಕಾರ ನೇರವಾಗಿ ಉತ್ತರನೇ ಕೊಡಲ್ಲ, ಸುತ್ತಿ ಬಳಸಿ ಉತ್ತರ ಕೊಡ್ತಾರೆ ಎಂದು ಕಲಬುರಗಿಯಲ್ಲಿ ಶಾಸಕ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ/ರಾಜ್ಯ ಸರ್ಕಾರ ಮೋದಿ ಎಂಟು ವರ್ಷದ ಉತ್ಸವ ಮಾಡುತ್ತಿದ್ದಾರೆ. ಎಲ್ಲಾ ಆಶಯಗಳನ್ನ ಈಡೇರಿಸಿದ್ದೇವೆ ಎಂಬ ಭ್ರಮೆಯಲ್ಲಿದ್ದಾರೆ. ಮೋದಿಯವರ ಮಾಸ್ಟರ್ ಸ್ಟ್ರೋಕ್‌ಗಳನ್ನ ಪ್ರತಿಯೊಬ್ರು ಗಂಭೀರವಾಗಿ ಪರಿಗಣಿಸಬೇಕು ಎಂದರು.

ಅದಲ್ಲದೇ, ಇದುವರೆಗೆ ಅವರ ಮಾಸ್ಟರ್ ಸ್ಟ್ರೋಕ್‌ಗಳು ಒಂದು ಗುರಿ ಮುಟ್ಟಿಲ್ಲ. ಬಿಜೆಪಿ ಶಾಸಕರು, ಸಂಸದರು ವಕ್ತಾರರ ಸ್ಥಿತಿ ನೋಡಿದ್ರೆ ಅಯ್ಯೊ ಅನಿಸುತ್ತೆ. ರಾತ್ರಿ ಮೋದಿ ಕನಸ್ಸಲ್ಲಿ ಕಂಡಿದ್ದ ಅಧಿಕಾರಿಗಳು ಹಗಲಲ್ಲಿ ನನಸು ಮಾಡ್ತಿದಾರೆ. ಅಗ್ನಿಫಥ್ ಎಂಬ ಹೊಸ ಕನಸ್ಸನ್ನ ಮೋದಿ ಕಂಡಿದ್ದಾರೆ. ಕಳೆದೆರಡು ದಿನಗಳಿಂದ ಅಗ್ನಿಫಥ್ ಯೋಜನೆ ಪ್ರಚಾರ ಪಡಿಸಲು ಬಿಜೆಪಿ ಶಾಸಕರು ಸಂಸದರು ಹರಸಾಹಸ ಪಡುತ್ತಿದ್ದಾರೆ. ಇಡೀ ದೇಶವೇ ಅಗ್ನಿಪಥ್‌ದಿಂದ ಹೊತ್ತಿ ಉರಿಯುತ್ತಿದೆ. ಇಡೀ ಯುವ ಸಮೂಹ ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಬೇಸಿಕ್ ಪ್ರಶ್ನೆಗಳಿಗೆ ಮೋದಿ ಸರ್ಕಾರ ನೇರವಾಗಿ ಉತ್ತರನೇ ಕೊಡಲ್ಲ, ಸುತ್ತಿ ಬಳಸಿ ಉತ್ತರ ಕೊಡ್ತಾರೆ ಎಂದು ವ್ಯಂಗವಾಡಿದ್ದಾರೆ.

RELATED ARTICLES
- Advertisment -
Google search engine

Most Popular

Recent Comments