Wednesday, August 27, 2025
HomeUncategorizedಬೆಂಗಳೂರಿನಲ್ಲಿ ತಡರಾತ್ರಿ ಸುರಿದ ಭಾರಿ‌ ಮಳೆಗೆ ಯುವಕ ನೀರು ಪಾಲು

ಬೆಂಗಳೂರಿನಲ್ಲಿ ತಡರಾತ್ರಿ ಸುರಿದ ಭಾರಿ‌ ಮಳೆಗೆ ಯುವಕ ನೀರು ಪಾಲು

ಬೆಂಗಳೂರು : ತಡರಾತ್ರಿ ಸುರಿದ ಭಾರಿ‌ ಮಳೆಗೆ ಯುವಕ ನೀರು ಪಾಲಾದ ಘಟನೆ ಕೆ ಆರ್ ಪುರಂನ ಗಾಯತ್ರಿ ಬಡಾವಣೆಯಲ್ಲಿ ನಡೆದಿದೆ.

24 ವರ್ಷದ ಮಿಥುನ್ ಯುವಕ ನೀರು ಪಾಲಾಗಿದ್ದಾರೆ. ಗಾಯತ್ರಿ ಬಡವಾಣೆಯಲ್ಲಿ 12 ಗಂಟೆ ಸುಮಾರಿಗೆ ನೀರು ಸಂಪೂರ್ಣವಾಗಿ ಅವರಿಸಿಕೊಂಡಿತ್ತು. ಈ ವೇಳೆ ಯುವಕ ವಾಸವಿದ್ದ ಕಟ್ಟಡದ ಬಳಿ ಕಾಂಪೌಂಡ್ ಬಿದ್ದಿದೆ. ಅಲ್ಲದೆ ಅಲ್ಲಿದ್ದ ಯುವಕನ ಬೈಕ್ ಕೊಚ್ಚಿಕೊಂಡು ಹೋಗಲು ಆರಂಭವಾಗಿದೆ. ಈ ವೇಳೆ ಯುವಕ ಬೈಕ್ ರಕ್ಷಣೆ ಮಾಡಿಕೊಳ್ಳಲು ಮುಂದಾಗಿದ್ದಾನೆ. ಈ ವೇಳೆ ನೀರಿನ ಜೊತೆ ಯುವಕ ಕೊಚ್ಚಿಹೋಗಿದ್ದಾನೆ.

ಅದಲ್ಲದೇ, ಅಗ್ನಿಶಾಮಕ ಸಿಬ್ಬಂದಿ , ಎನ್ ಡಿಆರ್ ಎಪ್ ಸಿಬ್ಬಂದಿಯಿಂದ ಕೊಚ್ಚಿ ಹೋದ ಯುವಕನ ಹುಡುಕಾಟ ನಡೆಸಿದ್ದು, ನಾಲ್ಕೈದು ಸ್ನೇಹಿತರು ಒಟ್ಟಿಗೆ ರೂಮ್ ನಲ್ಲಿದ್ದು, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ರು. ಅಗ್ನಿಶಾಮಕ ದಳ ಸಿಬ್ಬಂದಿಯಿಂದ ಯುವಕ ಮಿಥುನ್ ಪತ್ತೆ ಕಾರ್ಯ ಆರಂಭ ಮಾಡಲಾಗಿದ್ದು, ಎರಡು ಪ್ರತ್ಯೇಕ ತಂಡಗಳಾಗಿ ಯುವಕನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಅಗ್ನಿಶಾಮಕದಳ ಹಾಗೂ ಎಸ್.ಡಿ.ಆರ್.ಎಫ್ ಸಿಬ್ಬಂದಿಯಿಂದ ಪತ್ತೆಕಾರ್ಯ ಆರಂಭಿಸಿದ್ದಾರೆ.

ಇನ್ನು, ಯುವಕ ರಾಜಕಾಲುವೆಗೆ ಬಿದ್ದ ಸ್ಥಳ(ಗಾಯತ್ರಿ ಬಡಾವಣೆಯಿಂದ) ಸುಮಾರು ಎರಡು ಕಿಲೋ‌ಮೀಟರ್ ವರೆಗೂ ಹುಡುಕಾಟ ನಡೆಸಿದ್ದು, ರಾಜಕಾಲುವೆ ಮಾರ್ಗದಲ್ಲಿನ ಕಬ್ಬಿಣದ ಜಾಲರಿಗಳಲ್ಲಿ ಮೊದಲಿಗೆ ಯುವಕನಿಗಾಗಿ ಹುಡುಕಾಟ ನಡೆಸುತ್ತಿದ್ದು, ಕೆ.ಆರ್ ಪುರಂ ಬಳಿಯ ಸೀಗೆಹಳ್ಳಿ ಕೆರೆಗೆ ರಾಜಕಾಲುವೆ ಅಟ್ಯಾಚ್ ಆಗಿದೆ. ಚೀಫ್ ಫೈರ್ ಆಫೀಸರ್ ರವಿಪ್ರಸಾದ್ ನೇತೃತ್ವದಲ್ಲಿ ಯುವಕನ ಪತ್ತೆ ಮಾಡಲಿದ್ದಾರೆ.

RELATED ARTICLES
- Advertisment -
Google search engine

Most Popular

Recent Comments