Tuesday, August 26, 2025
Google search engine
HomeUncategorizedಹೆತ್ತ ಮಗಳನ್ನೇ ಕೊಂದ ತಂದೆ-ತಾಯಿ..!

ಹೆತ್ತ ಮಗಳನ್ನೇ ಕೊಂದ ತಂದೆ-ತಾಯಿ..!

ಮೈಸೂರು: ಈ ಭೂಮಿ ಮೇಲೆ ಕೆಟ್ಟ ಮಕ್ಕಳು ಬೇಕಾದ್ರೆ ಸಿಗಬಹುದು. ಆದ್ರೆ, ಕೆಟ್ಟ ತಂದೆ ತಾಯಿ ಇರೋಕೆ ಸಾಧ್ಯ ಇಲ್ಲ ಅಂತಾರೆ. ಆದ್ರೆ, ಇಂದು ಆ ನಂಬಿಕೆ ಸುಳ್ಳಾಗಿದೆ.ಅನ್ಯ ಜಾತಿಯ ಯುವಕನನ್ನು ಪ್ರೀತಿಸಿದಕ್ಕೆ ಹೆತ್ತವರಿಂದಲೇ ಮಗಳ ಕೊಲೆಯಾಗಿದೆ. ಈ ಮರ್ಯಾದಾ ಹತ್ಯೆ ಇದೀಗ ನಾಗರಿಕ ಸಮಾಜವನ್ನೇ ತಲೆ ತಗ್ಗಿಸುವಂತೆ ಮಾಡಿದೆ.

ಮೈಸೂರು ಜಿಲ್ಲೆಯಲ್ಲಿ ಮರ್ಯಾದಾ ಹತ್ಯೆ ಮರುಕಳಿಸಿದೆ.18 ಸಹ ತುಂಬದೇ ಪ್ರೀತಿಗಾಗಿ ಇಹಲೋಕದ ನಂಟು ಕಳಚಿಕೊಂಡು ಹೆಣವಾಗಿದ್ದಾಳೆ. ಮೂಲತಃ ಪಿರಿಯಾಪಟ್ಟಣ ತಾಲೂಕು ಕಗ್ಗುಂಡಿ ಗ್ರಾಮದ ವಾಸಿ ಸುರೇಶ್ ತಾಯಿ ಬೇಬಿಯ ಏಕೈಕ ಪುತ್ರಿ ಶಾಲಿನಿ‌.  ಪ್ರೀತಿಸಿದವನ ಜೊತೆ ಬಾಳಿ ಬದುಕಬೇಕೆಂಬ ಕನಸು ಕಟ್ಟಿಕೊಂಡಿದ್ಲು.ಆದ್ರೆ, ಮಸಣ ಸೇರಿದ್ದಾಳೆ.

ಈ ಶಾಲಿನಿ ಕಾಲೇಜು ದಿನಗಳಲ್ಲೇ ಪ್ರೀತಿ ಪಾಶಕ್ಕೆ ಸಿಲುಕಿ ಗೆಳೆಯನ‌ ಜೊತೆ ಊರೂರು ಸುತ್ತುತ್ತಿದ್ದಳು. ವಿಚಾರ ತಿಳಿಯುತ್ತಿದ್ದಂತೆ ಪೋಷಕರು ಕೆಂಡಾಮಂಡಲವಾಗಿದ್ದಾರೆ. ಇದಕ್ಕೆ ಕಾರಣ ಒಂದೆರಡಲ್ಲ. ಹೇಳಿಕೇಳಿ ಆಕೆ‌ ಪ್ರೀತಿಸಿದ್ದ ಹುಡುಗ ಅನ್ಯ ಕೋಮಿನವನು. ಮತ್ತೊಂದೆಡೆ ಹಣ, ಆಸ್ತಿ. ಅಂತಸ್ತು.

ತನ್ನ ಪ್ರೀತಿ ವಿಚಾರ ಪೋಷಕರಿಗೆ ತಿಳಿಯುತ್ತಿದ್ದಂತೆ ಅವರು ಆಕೆಯ ಮನವೊಲಿಕೆಗೆ ಯತ್ನ ಮಾಡಿದ್ದಾರೆ. ಅದು ಫಲ ಕೊಡದಿದ್ದಾಗ ಹಲ್ಲೆ ಮಾಡಿ, ಕೂಡಿ ಹಾಕಿದ್ದಾರೆ. ಈ ವೇಳೆಯೇ ಆಕೆ ಪ್ರಿಯಕರನ ಜೊತೆ ನಾಪತ್ತೆಯಾಗುವ ಯತ್ನ ನಡೆಸಿ ವಿಫಲವಾಗಿದೆ. ಇದೆಲ್ಲದರಿಂದ ರೋಸಿ ಹೋದ ತಂದೆ- ತಾಯಿ ಆಕೆಯನ್ನು ಮನಸೋ ಇಚ್ಛೆ ಥಳಿಸಿ‌ ಮನೆಯಲ್ಲಿ ಕೂಡಿ ಹಾಕಿದ್ದಾರೆ. ಈ ಕ್ಷಣದಲ್ಲೇ ಆಕೆ ಮನೆ ಬಿಟ್ಟು ಹೋಗುವ ನಿರ್ಧಾರ ಮಾಡಿದ್ದು, ಮೈಸೂರಿನ ಮಕ್ಕಳ‌ ಸಮಿತಿಗೆ ತೆರಳಿ ಆಶ್ರಯ ಪಡೆದಿದ್ದಾರೆ. ಸಂಬಂಧಿಕರು, ನೆಂಟರು, ಊರಿನವರು ಆಕೆಯ ಮನವೊಲಿಸಿ ಹುಡುಗನ‌ ಜೊತೆಯೇ ವಿವಾಹ ನಡೆಸುವ ಭರವಸೆ ನೀಡಿದ್ದಾರೆ. ಇದಕ್ಕೊಪ್ಪಿದ ಆಕೆ ಮುಚ್ಚಳಿಕೆ ಬರೆದುಕೊಟ್ಟು ಮನೆಗೆ ತೆರಳಿದ್ದಾರೆ.

ಈ ನಡುವೆ ಮನೆಗೆ ಹೋದ ಮಗಳಿಗೆ ಮತ್ತಷ್ಟು ಕಿರುಕುಳ ನೀಡಿದ್ದಾರೆ. ಮತ್ತೆ ಮತ್ತೆ ಹಲ್ಲೆ ನಡೆದಿದೆ. ಬೇರೆ ಯುವಕನ ಜೊತೆ ವಿವಾಹವಾಗುವಂತೆ ಒತ್ತಡ ಹೇರಿದ್ದಾರೆ. ಕೊನೆಗೆ ಆಕೆ ಒಪ್ಪದಿದ್ದಾಗ ಆಕೆಯನ್ನ ಮನೆಯಲ್ಲಿ ಕತ್ತು ಹಿಸುಕಿ, ಹಲ್ಲೆ ಮಾಡಿ ಕಟುಕ ಹೃದಯಿಯಾದ ತಂದೆ ಆಕೆಯನ್ನ ಪರಿ ಪರಿಯಾಗಿ ಹಿಂಸಿಸಿ ಕೊಲೆ ಮಾಡಿದ್ದಾನೆ. ಬಳಿಕ ಶವವನ್ನು ಎಸೆದು ಪೊಲೀಸ್ ಠಾಣೆಗೆ ಶರಣಾಗಿದ್ದಾನೆ.

ಅದೇನೆ ಆಗಲಿ, ಜಗತ್ತು ಪ್ರೀತಿಗಾಗಿ ಹಾತೊರೆಯುತ್ತಿದೆ.‌ ಪ್ರೀತಿಗಾಗಿಯೇ ಈ ಅಪ್ರಾಪ್ತೆ ಪ್ರಾಣ ಬಿಟ್ಟಿದ್ದಾಳೆ. ಒಂಭತ್ತು ತಿಂಗಳು ಹೆತ್ತು ಹೊತ್ತು ಸಾಕಿ ಸಲಹಿದ ತಾಯಿಯೇ ತನ್ನ‌ ಗಂಡನಿಗೆ ಮಗಳ ಹತ್ಯೆಗೆ ಸಾಥ್ ನೀಡಿದ್ದಾಳೆ. ಇನ್ನಾದ್ರೂ ಜಗತ್ತು ಬದಲಾಗಲಿ ಅನ್ನೋದು ನಮ್ಮ ಆಶಯ.

ಕ್ಯಾಮರಾ ಮನ್ ಹರೀಶ್ ಜೊತೆ ಸುರೇಶ್ ಬಿ ಪವರ್ ಟಿವಿ ಮೈಸೂರು

RELATED ARTICLES
- Advertisment -
Google search engine

Most Popular

Recent Comments