Monday, August 25, 2025
Google search engine
HomeUncategorizedಕುವೆಂಪು ಅವರಿಗೆ ರೋಹಿತ್ ಚಕ್ರವರ್ತಿ ಅಗೌರವ : ಪ್ರಗತಿಪರರ ಆಕ್ರೋಶ

ಕುವೆಂಪು ಅವರಿಗೆ ರೋಹಿತ್ ಚಕ್ರವರ್ತಿ ಅಗೌರವ : ಪ್ರಗತಿಪರರ ಆಕ್ರೋಶ

ಶಿವಮೊಗ್ಗ: ಪಠ್ಯ ಪುಸ್ತಕ ಪರಿಷ್ಕರಣಾ ವಿವಾದವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಈ ಹಿನ್ನೆಲೆ ಪ್ರಗತಿಪರರು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ.

ಕುವೆಂಪು ನಾಡಗೀತೆ ತಿರುಚಿ ಅವಮಾನ ಮಾಡಿದವರನ್ನು ಸಮಿತಿಯಿಂದ ಕೈಬಿಡಲು ಆಗ್ರಹಿಸಿ ನಗರದ ಬಸ್ ನಿಲ್ದಾಣದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ್ದಾರೆ.

ನಾಡಗೀತೆ ತಿರುಚುವ ಮೂಲಕ ಕುವೆಂಪು ಅವರಿಗೆ, ಕನ್ನಡನಾಡಿಗೆ ಅಗೌರವ ತೋರಿದ್ದಾರೆ ಕುವೆಂಪು ಅವರಿಗೆ ರೋಹಿತ್ ಚಕ್ರವರ್ತಿ ಅಗೌರವ ತೋರಿದ್ದಾರೆ. ಹೀಗಾಗಿ ಅವರ ವಿರುದ್ಧ ಕೂಡಲೇ ಕೇಸು ದಾಖಲಿಸಬೇಕೆಂದು ಒತ್ತಾಯಿಸಿದರು.

ಅಷ್ಟೇ ಅಲ್ಲದೇ ನೂತನ ಶಿಕ್ಷಣ ನೀತಿ ನೆಪವೊಡ್ಡಿ ಪಠ್ಯಗಳನ್ನು ತಿದ್ದಿ ಮಕ್ಕಳನ್ನು ಭಾವನಾತ್ಮಕ ಸ್ಥಿತಿಗೆ ದೂಡಲಾಗುತ್ತಿದೆ. ಬಿಜೆಪಿ ಸರ್ಕಾರ ಮಕ್ಕಳ ಮೇಲೆ ಯಾವುದೋ ಒಂದು ಸಿದ್ಧಾಂತ ಹೇರಲು ಹೊರಟಿದೆ ಎಂದು ನಗರದ ಗೋಪಿವೃತ್ತದಲ್ಲಿ ಜೈ ಭಾರತ ಜನನೀಯ ತನುಜಾತೆ.. ಗೀತೆ ಹಾಡುವ ಮೂಲಕ ಕುವೆಂಪು ಅವರಿಗೆ ಗೌರವ ನಮನ ಸಲ್ಲಿಸಿದ್ದಾರೆ.

ಇನ್ನು ಪ್ರಗತಿಪರರು ಮತ್ತು ನಾಗರೀಕರು ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

RELATED ARTICLES
- Advertisment -
Google search engine

Most Popular

Recent Comments