Tuesday, August 26, 2025
Google search engine
HomeUncategorizedಸಾಮಾಜಿಕ ಕಾರ್ಯಕರ್ತ ಅಶೋಕ್ ಕುಮಾರ್ ಅಡಿಗ ಸಿಸಿಬಿ ವಶಕ್ಕೆ

ಸಾಮಾಜಿಕ ಕಾರ್ಯಕರ್ತ ಅಶೋಕ್ ಕುಮಾರ್ ಅಡಿಗ ಸಿಸಿಬಿ ವಶಕ್ಕೆ

ಬೆಂಗಳೂರು : ಇಸ್ಪೀಟ್ ಕ್ಲಬ್ ನಡೆಸುವ ಬಗ್ಗೆ ಆಡಿಯೋವೊಂದು ವೈರಲ್ ಆದ ವಿಚಾರಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಕಾರ್ಯಕರ್ತ ಅಶೋಕ್ ಕುಮಾರ್ ಅಡಿಗ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಆಶೋಕ್ ಕುಮಾರ್ ಅಡಿಗ ಮೂಲತಹ ಉಡುಪಿ ಜಿಲ್ಲೆಯವರಾಗಿದ್ದು, ಬೆಂಗಳೂರಿನ ಬಸವೇಶ್ವರ ನಗರದಲ್ಲಿ ವಾಸವಿದ್ದರು. ಇವರು ಕ್ಲಬ್ ಮಾಲೀಕರನ್ನ ಬೆದರಿಸಿ ಒಂದೊಂದು ಕ್ಲಬ್​​ನಿಂದ 50 ಸಾವಿರ ಹಣ ಕಲೆಕ್ಟ್ ಮಾಡಿದ್ದ ಆರೋಪದಡಿ Arms act ipc 384 , 420, 506b ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಮಾಗಡಿ ರಸ್ತೆ ಪೊಲೀಸ್ ಠಾಣೆಯಲ್ಲಿ ರಮೇಶ್ ಎಂಬುವರು ನೀಡಿದ ದೂರಿನ ಮೇರೆಗೆ ಸಿಸಿಬಿ ಅಧಿಕಾರಿಗಳು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ‌. ಒಂದು ತಿಂಗಳ ಹಿಂದೆ ಮಾಗಡಿ ರಸ್ತೆಯ ಕ್ಲಬ್‌ವೊಂದರಲ್ಲಿ ಇಸ್ಪೀಟ್ ಕ್ಲಬ್ ಮಾಲೀಕರ ಸಭೆ ನಡೆಸಿದ್ದ ಅವರು, ಈ ವೇಳೆ ತನ್ನ ಹೆಸರಲ್ಲಿ ಕ್ಲಬ್ ಇದ್ದರೆ ಯಾರು ರೈಡ್ ಮಾಡಲ್ಲ. ಇದಕ್ಕಾಗಿ ಪ್ರತಿ ತಿಂಗಳು ₹50 ಸಾವಿರ ನೀಡಬೇಕು ಎಂದು ಹೇಳಿದ್ದರು. ಆದರೆ, ಇದಕ್ಕೆ ರಮೇಶ್ ಹಾಗೂ ಶ್ರೀನಿವಾಸ್ ಎಂಬುವರು ಒಪ್ಪಿರಲಿಲ್ಲ. ಹೀಗಾಗಿ, ನನ್ನ ಸಹಕಾರವಿಲ್ಲದೆ ಹೇಗೆ ಕ್ಲಬ್ ನಡೆಸುತ್ತೀರಿ ಎಂದು ಆವಾಜ್ ಹಾಕಿದ್ದಲ್ಲದೇ, ಪಿಸ್ತೂಲ್ ತೋರಿಸಿ ನಾನು ಅರ್ಧ ಗಂಟೆಯಲ್ಲಿ ನಿನ್ನ ಕ್ಲಬ್ ಕ್ಲೋಸ್ ಮಾಡಿಸುತ್ತೇನೆ ಎಂದು ಶ್ರೀನಿವಾಸ್​ ಬಳಿ 50 ಸಾವಿರ ತೆಗೆದುಕೊಂಡು ಹೋಗಿದ್ದ ಎಂದು ದೂರು ದಾಖಲಾಗಿದೆ.

ಅಷ್ಟೇ ಅಲ್ಲದೇ , ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆಡಿಯೋವೊಂದು ವೈರಲ್​ ಆಗಿತ್ತು.

RELATED ARTICLES
- Advertisment -
Google search engine

Most Popular

Recent Comments