Monday, August 25, 2025
Google search engine
HomeUncategorizedರಮ್ಯಾ ರಾಜಕಾರಣದಿಂದ ದೂರ ಉಳಿದವರು ಈಗ ಏಕೆ ಸ್ಟೇಟ್‌ಮೆಂಟ್ ಕೊಡ್ಬೇಕು: ಹಟ್ಟಿಹೊಳಿ

ರಮ್ಯಾ ರಾಜಕಾರಣದಿಂದ ದೂರ ಉಳಿದವರು ಈಗ ಏಕೆ ಸ್ಟೇಟ್‌ಮೆಂಟ್ ಕೊಡ್ಬೇಕು: ಹಟ್ಟಿಹೊಳಿ

ಬೆಳಗಾವಿ : ರಮ್ಯಾ ಅವರು ಬಹಳ ದಿನಗಳಿಂದ ರಾಜಕಾರಣದಿಂದ ದೂರ ಉಳಿದವರು ಈಗ ಮತ್ತೆ ಏಕಾಏಕಿ ಬಂದು ಅವರೇಕೆ ಸ್ಟೇಟ್‌ಮೆಂಟ್ ಕೊಡಬೇಕು? ಎಂದು ಮಾಜಿ ಸಂಸದೆ ರಮ್ಯಾ ವಿರುದ್ಧ ಕಾಂಗ್ರೆಸ್ ಎಂಎಲ್‌ಸಿ ಚನ್ನರಾಜ ಹಟ್ಟಿಹೊಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಚಿವ ಅಶ್ವತ್ಥ್ ನಾರಾಯಣ್  ಎಂ.ಬಿ.ಪಾಟೀಲ್ ಭೇಟಿಗೆ ಸಂಬಂಧಿಸಿದಂತೆ ಡಿಕೆಶಿ ಹೇಳಿಕೆಗೆ ರಮ್ಯಾ ಪ್ರತಿಕ್ರಿಯಿಸಿರುವ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಂ.ಬಿ‌.ಪಾಟೀಲ್ ಸಾಹೇಬ್ರು‌ ಬಹಳ ದೊಡ್ಡವರು, ಡಿಕೆಶಿ ಸಾಹೇಬ್ರು ಬಹಳ ದೊಡ್ಡವರು. ವೈಯಕ್ತಿಕವಾಗಿ ನಾವು ಅನೇಕ ಸಾರಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಸಿಎಂ ಬೊಮ್ಮಾಯಿ ಅವರನ್ನು ಭೇಟಿಯಾಗಿದ್ದೇವೆ. ಆದರೆ, ವೈಯಕ್ತಿಕ ಸಂಬಂಧ ಬೇರೆ ರಾಜಕಾರಣ ಸಂಬಂಧ ಬೇರೆಯಾಗಿರುತ್ತದೆ ಎಂದರು.

ಇನ್ನು ಪಾಟೀಲ್ ಅವರು ಅಶ್ವತ್ಥ್ ನಾರಾಯಣ್ ಭೇಟಿಯಾಗೋದರಲ್ಲಿ ಏನು ತಪ್ಪಿಲ್ಲ., ಹೀಗಾಗಿ ಬೇರೆ ಅರ್ಥ ಕಲ್ಪಿಸೋದು ಸಮಂಜಸವಲ್ಲ. ಅವರೆಲ್ಲ ಬಹಳ ದೊಡ್ಡವರು, ಭೇಟಿಯಾದ ಬಗ್ಗೆ ಸ್ಪಷ್ಟೀಕರಣ ಕೊಟ್ಟಿದ್ದಾರೆ. ನನ್ನ ಮಗ ಹಾಗೂ ಅವರ ಮನೆಯಲ್ಲಿರೋರಿಗೆ ಸ್ನೇಹ ಸಂಬಂಧ ಇದೆ. ನಾವು ಅವರ ಮನೆಗೆ ಊಟಕ್ಕೆ ಹೋಗ್ತೇವೆ, ಅವರು ನಮ್ಮ ಮನೆಗೆ ಊಟಕ್ಕೆ ಬರ್ತಾರೆ ಎಂದಿದ್ದಾರೆ.

ಅಷ್ಟೇ ಅಲ್ಲದೇ ರಮ್ಯಾ ಅವರು ರಾಜಕೀಯ ವಿಶ್ಲೇಷಣೆಯಿಂದ ದೂರ ಉಳಿಯಬೇಕು ಎಂದು ಎಂಎಲ್‌ಸಿ ಚನ್ನರಾಜ ಹಟ್ಟಿಹೊಳಿ ಕಿಡಿಕಾರಿದ್ದಾರೆ.

RELATED ARTICLES
- Advertisment -
Google search engine

Most Popular

Recent Comments