Thursday, August 28, 2025
HomeUncategorizedPSI ಅಕ್ರಮ : ಪ್ರಶ್ನೆಪತ್ರಿಕೆ ಲೀಕ್​​ ಮಾಡಿದ್ದೆ ಜ್ಞಾನಜ್ಯೋತಿ ಶಾಲೆಯ ಹೆಡ್‌ಮಾಸ್ಟರ್

PSI ಅಕ್ರಮ : ಪ್ರಶ್ನೆಪತ್ರಿಕೆ ಲೀಕ್​​ ಮಾಡಿದ್ದೆ ಜ್ಞಾನಜ್ಯೋತಿ ಶಾಲೆಯ ಹೆಡ್‌ಮಾಸ್ಟರ್

ಕಲಬುರಗಿ : 545 ಪಿಎಸ್ಐ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ನಡೆದಿರುವ ಬಗ್ಗೆ ಸಿಐಡಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ತನಿಖೆ ವೇಳೆ ಒಂದೊಂದೇ ಸ್ಫೋಟಕ ಮಾಹಿತಿ ಲಭ್ಯವಾಗುತ್ತಿದ್ದು, ಇನ್ನು ತನಿಖೆಯಲ್ಲಿ ಜ್ಞಾನಜ್ಯೋತಿ ಇಂಗ್ಲಿಷ್ ಶಾಲೆಯ ಹೆಡ್​​​ಮಾಸ್ಟರ್ ಆಗಿರುವ ಕಾಶೀನಾಥ್ ಕಳ್ಳಾಟ ಬಯಲಾಗಿದೆ.

ಪಿಎಸ್‌ಐ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣವು ದಿನಕ್ಕೊಂದು ಹೊಸ ತಿರುವು ಪಡೆದುಕೊಳ್ಳುತ್ತಿದೆ. ಇದೀಗ ವಿಚಾರಣೆ ವೇಳೆ ಜ್ಞಾನಜ್ಯೋತಿ ಶಾಲೆಯಲ್ಲಿ ಪ್ರಶ್ನೆಪತ್ರಿಕೆ ಲೀಕ್​​ ಮಾಡಿದ್ದೆ ಆ ಶಾಲೆಯ ಹೆಡ್‌ಮಾಸ್ಟರ್ ಕಾಶಿನಾಥ್ ಎನ್ನುವ ಸತ್ಯ ಬಯಲಾಗಿದೆ. ಶಾಲೆಗೆ ಬಂದ ಪ್ರಶ್ನೆ ಪತ್ರಿಕೆ ಬಂಡಲ್ ಓಪನ್ ಮಾಡಿ ಶಾಲೆಯಲ್ಲೇ ಜೆರಾಕ್ಸ್ ಮಾಡಿ, ಜೆರಾಕ್ಸ್ ಪ್ರತಿಯನ್ನ ಹೊರಗಡೆ ಇರೋ ಕಿಂಗ್‌ಪಿನ್‌ಗಳಿಗೆ ನೀಡುತ್ತಿದ್ದ.ಅಲ್ಲದೇ, ಕಿಂಗ್‌ಪಿನ್‌ಗಳು ಬ್ಲೂಟೂತ್ ಮೂಲಕ ಅಭ್ಯರ್ಥಿಗಳಿಗೆ ಕೀ ಅನ್ಸರ್‌ಗಳನ್ನ ಹೇಳುತ್ತಿದ್ದರು. ಇತ್ತ ಪರೀಕ್ಷೆ ಮುಗಿದ ನಂತರ ಕಾಶಿನಾಥ್ ಸೂಚನೆಯಂತೆ ಮೇಲ್ವಿಚಾರಕಿಯರು ಓಎಮ್‌ಆರ್ ಶೀಟ್ ತಿದ್ದುಪಡಿ ಮಾಡುತ್ತಿದ್ದರು ಎಂಬ ಮಾಹಿತಿ ತಿಳಿದು ಬಂದಿದೆ.

ಸಿಐಡಿ ಅಧಿಕಾರಿಗಳು ನಿನ್ನೆ ದಿವ್ಯಾ ಹಾಗರಗಿ, ಕಾಶಿನಾಥ್‌, ಮಂಜುನಾಥ ಮೇಳಕುಂದಿಯನ್ನ ಜ್ಞಾನಜ್ಯೋತಿ ಶಾಲೆಗೆ ಭೇಟಿ ನೀಡಿ ಸ್ಥಳ ಮಹಜರು ಮಾಡಿದ್ದಾರೆ. ಶಾಲೆಯಲ್ಲಿನ ಕಂಪ್ಯೂಟರ್, ಹಾರ್ಡ್‌ಡಿಸ್ಕ್ ಸೇರಿದಂತೆ ಎಲೆಕ್ಟ್ರಾನಿಕ್ ವಸ್ತುಗಳನ್ನ ಸೀಜ್ ಮಾಡಿದ್ದಾರೆ.

RELATED ARTICLES
- Advertisment -
Google search engine

Most Popular

Recent Comments